ಬದುಕಿನ ಮೇಡಂ ಕಣೇ ನೀನು
Team Udayavani, Oct 29, 2019, 4:20 AM IST
ನಿನ್ನ ಸಾಧನೆ ಕಂಡು ಹರ್ಷ ಪಡುವ ಗೆಳತಿ ಕಣೋ ನಾನು…ನಿನ್ನ ಜೊತೆ ಸದಾ ಗೆಳತಿಯಾಗಿ ಇರಲು ಬಯಸುವೆ’ ಅಂತ ನೀ ಹೇಳಿದ ಬದುಕಿನ ಪಾಠ. ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು.
ಒಂದು ದಿನ ಬಸ್ಸಿನಲ್ಲಿ ಹೋಗುವಾಗ ನನ್ನ ಕಣ್ಣಿಗೆ ಬಿದ್ದ ಹಳ್ಳಿಯ ಗೊಂಬೆ ನೀನು. ಸರಳ ಉಡುಪು, ಮುಗª ನಗೆ, ನಿಷ್ಕಲ್ಮಶ ಮನಸ್ಸು ಇಷ್ಟು ಸಾಕಲ್ವಾ, ನಿನಗೆ ನಾ ಮನ ಸೋಲಲು? ನನ್ನ ಕಣ್ಣುಗಳು, ಪದೇ ಪದೆ ನಿನ್ನ ನೋಡಲು ಬಯಸುತ್ತಿದ್ದವು.
ಆದರೆ, ಒಂದು ರೀತಿಯ ಭಯ, ಆತಂಕ. ಕಾರಣ, ಪ್ರೀತಿಗಿಂತ ಬದುಕೇ ಮುಖ್ಯ ಅಂದುಕೊಂಡವನು ನಾನು. ದಿನಕಳೆದಂತೆ ನಿನ್ನ ಪರಿಚಯವಾಯಿತು. ಒಂದಷ್ಟು ಸಲುಗೆಯೂ ಸಿಕ್ಕಿತು. ಪರಿಣಾಮ, ಪ್ರತಿದಿನವೂ ಮಾತಾಡಲು ಆರಂಭಿಸಿದೆವು. ನೀನು ಕೂಡಾ ನಾ ಓದುವ ಕಾಲೇಜಿನಲ್ಲೇ ಪ್ರವೇಶ ಪಡೆದೆ.
ಆಗ ನನಗೆ ಸ್ವರ್ಗಕ್ಕೆ ಮೂರೇ ಗೇಣು. ನಿನ್ನ ಮುಂಗುರುಳು ನನ್ನ ಕೈ ಬೀಸಿ ಕರೆದಂತೆ ಭಾಸ. ನಿನ್ನ ಮುಗª ನಗು ನನ್ನ ಮನದ ಭಾರ ಏನಲ್ಲ ದೂರ ಮಾಡುತ್ತಿತ್ತು. ನೀನು ನನ್ನನ್ನು ಪ್ರೀತಿಸುವೆಯಾ ? ಅಥವಾ ಕೇವಲ ಸ್ನೇಹದಿಂದ ಇರುವೆಯಾ ಎಂದು ಅರಿಯದೇ ನಾ ತಪ್ಪು ಮಾಡಿದೆ…
ನಾನು ಪ್ರೀತಿಯ ಉನ್ನತ ಶಿಖರಕ್ಕೆ ಏರಿದಾಗಲೂ ಅದನ್ನು
ನಿನ್ನ ಬಳಿ ಹೇಳಲಿಲ್ಲ. ನೀ ನನ್ನ ನೋಡಿ ನಕ್ಕಾಗ ಅದು ಪ್ರೀತಿಯ ದ್ಯೋತಕ ಅಂತಲೇ ತಿಳಿದೆ. ಕುಶಲೋಪರಿ ವಿಚಾರಿಸಿದಾಗ ನನ್ನ ಇಷ್ಟ ನಿನ್ನ ಇಷ್ಟ ಒಂದೇ ಎಂದು ಅರಿತೆ. ಒಂದು ದಿನ ಗಟ್ಟಿ ಮನಸ್ಸು ಮಾಡಿ ನಿನ್ನನ್ನು ಚಹಾ ಕುಡಿಯಲು ಕರೆದೆ. ಅಂದು ಒಂದು ಮನಸ್ಸು ಹೇಳುತ್ತಿತ್ತು, ನಿನ್ನ ಮನದ ಪ್ರೀತಿ ವ್ಯಕ್ತಪಡಿಸು ಅಂತ. ಇನ್ನೊಂದು ಮನಸ್ಸು ಹೇಳುತ್ತಿತ್ತು ನಿನ್ನ ನಿರಾಕರಿಸಿ ದೂರವಾದರೆ ಅಂತ. ಗೊಂದಲ ಗೋಜಲಿನ ಮಧ್ಯೆಯೂ ಧೈರ್ಯ ಮಾಡಿ ಹೇಳಿಯೇ ಬಿಟ್ಟೆ,
ನಾ ನಿನ್ನ ಪ್ರೀತಿಸುವೆ ಎಂದು.
ಆಗ ನೀ ಜೋರಾಗಿ ನಕ್ಕೆ. ನನಗೆ ಗಾಬರಿ…ಒಂದು ಕ್ಷಣ ನೀನು ಸುಮ್ಮನಾದೆ. ಆಮೇಲೆ ನೀ ಹರಿಸಿದ ವಾಗ್ಝರಿ, ನೀ ಆಡಿದ ಮಾತು ನನ್ನ ಮನದ ಭಾವನೆಯನ್ನೇ ಬದಲಿಸಿತು. ಲೋ, ನೀ ತುಂಬಾ ಜಾಣ ಕಣೋ. ನಿನಗೆ ಒಳ್ಳೆಯ ಪ್ರತಿಭೆ ಇದೆ. ಅದನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ಒಂದು ಸಾಧನೆ ಮಾಡು. ಕಲಿಯುವ ವಯಸ್ಸಲ್ಲಿ ಹುಟ್ಟುವ ಈ ಭಾವನೆಗಳು ಶಾಶ್ವತವಲ್ಲ. ಪ್ರೀತಿಗಿಂತ ಬದುಕು ಮುಖ್ಯ. ನಾ ನಿನ್ನನ್ನು ಮಾತಾಡಿಸಿದ್ದು ನಿಜ. ನಿನ್ನ ಮೇಲಿನ ಗೌರವದಿಂದ. ಇನ್ನ ಜೊತೆ ನಡೆದು ಬಂದಿದ್ದು, ನಿನ್ನ ಮಾತಿಗೆ ನಲಿದಾಡಿದ್ದು ನಿನ್ನ ನೋವು ದೂರವಾಗಲಿ ಎಂದು.
ನಿನ್ನ ಸಾಧನೆ ಕಂಡು ಹರ್ಷ ಪಡುವ ಗೆಳತಿ ಕಣೋ ನಾನು…ನಿನ್ನ ಜೊತೆ ಸದಾ ಗೆಳತಿಯಾಗಿ ಇರಲು ಬಯಸುವೆ’ ಅಂತ ನೀ ಹೇಳಿದ ಬದುಕಿನ ಪಾಠ. ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ನಾನು ಪ್ರೇಮದ ಕನವರಿಕೆ ಬಿಟ್ಟು ಸಾಧನೆಯ ಹಾದಿಗೆ ಹೊರಳಲು ನಿರ್ಧರಿಸಿದೇ ಅಂಥದೊಂದು ಬದಲಾವಣೆಗೆ ಕಾರಣಳಾದವಳು ನೀನು.
ಬದುಕಿನ ಪಾಠ ಕಲಿಸಿದ ಆಪ್ತ ಗೆಳತಿ ನೀನು…..
ರಂಗನಾಥ ಎನ್ ವಾಲ್ಮೀಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.