ನೀನೆಂದರೆ ಬರೀ ನಂಬಿಕೆ, ಅಷ್ಟೇ!
Team Udayavani, Aug 22, 2017, 11:28 AM IST
ನನ್ನ ಪ್ರೀತಿ ಅದೆಷ್ಟೋ ಕನವರಿಕೆಗಳ, ಅದೆಷ್ಟೋ ಕನಸುಗಳ, ಅದೆಷ್ಟೋ ದಿನಗಳ ತಪಸ್ಸಿನ ಪ್ರತಿಫಲ. ಈಗ ನನ್ನ ನಿರ್ಮಲವಾದ ಪ್ರೀತಿಯನ್ನೇ ತಿರಸ್ಕರಿಸಿ ಜೀವಂತವಾಗಿ ಸುಟ್ಟು ಹಾಕಿರುವೆ. ಒಂದಾಗಿ ಕೂಡಿ ಬೆಳೆದ ಪ್ರೀತಿಗೆ ಈಗ ಅಗಲಿಕೆಯ ಮುಳ್ಳು ಚುಚ್ಚಿ ಕಮರಿ ಹೋಗಿದೆ…
ನನ್ನ ವ್ಯರ್ಥ ಬದುಕಿಗೊಂದು ಅರ್ಥ ನೀಡಿ ನವಚೈತನ್ಯ ತುಂಬಿದ ಚೆಲುವಾಂತ ರಾಜಕುಮಾರಿಗೆ ನೂರು ಒಲವಿನ ಹಾರೈಕೆಗಳು. ನನ್ನುಸಿರಿಗೆ ಹಾಗೂ ಬದುಕಿಗೆ ತುಂಬಾ ಹತ್ತಿರದ ಆತ್ಮೀಯ ಜೀವವೆಂದರೆ, ಅದು ನೀನೇ. ಅದಕ್ಕೇ ನನ್ನ ಜೀವನದಲ್ಲಿ ಹೊತ್ತು ಹೆತ್ತ ತಾಯಿಯ ನಂತರದ ಸ್ಥಾನವನ್ನು ನಿನಗೆ ನೀಡಿದ್ದು.
ನಿನ್ನೆಯ ನೋವುಗಳನ್ನು ಮರೆಸಿ, ಇಂದಿನ ಸುಖ ಹಾಗೂ ನಾಳೆಯ ನಗುವ ತೋರಿದವಳೇ, ಹರಿವ ನೀರಿನಲ್ಲೂ, ಸುರಿವ ಮಳೆಯಲ್ಲೂ, ಬೀಸುವ ಗಾಳಿಯಲ್ಲೂ ನಿನ್ನದೇ ಪ್ರತಿರೂಪ. ನಿನ್ನೊಂದಿಗೆ ಕೈ ಕೈ ಹಿಡಿದು ನಡೆದ ದಿನಗಳು ಇತಿಹಾಸದ ಪುಟ ಸೇರಿವೆ. ಮನಸ್ಸು ದುಃಖದಲ್ಲಿ ಮಡುಗಟ್ಟಿದಾಗ ಮನಕ್ಕೆ ಮುದ್ದಿಸಿ, ಸಾಂತ್ವನಿಸಿ, ಕಚಗುಳಿಯಿಟ್ಟು, ನಕ್ಕು ನಗಿಸಿದ ಘಳಿಗೆಗಳು ಗತಿಸಿ ಹೋಗಿವೆ. ನಾನು ಮೈ ಮರೆತು ಕುಳಿತಾಗ ಬೊಗಸೆಯಲ್ಲಿ ಮಳೆ ನೀರು ಹಿಡಿದು ಮುಖಕ್ಕೆ ಚಿಮುಕಿಸಿ ಖುಷಿಪಡಿಸಿದ ಕ್ಷಣಗಳು ಕಳೆದುಹೋಗಿವೆ. ಈ ರೀತಿಯ ಕಾರಣಗಳಿಂದಲೇ ಈ ಜೀವಕ್ಕೆ ಜೀವದ ಗೆಳತಿಯಾದೆ ನೀನು. ನನ್ನ ಜೀವನದೊಳಗೆ ಮರೆಯಲಾಗದಷ್ಟು ಸಿಹಿ ನೆನಪುಗಳನ್ನು ಬಳುವಳಿಯಾಗಿ ಬಿಟ್ಟು ಹೋದೆ.
ನನ್ನ ಪ್ರೀತಿ ಅದೆಷ್ಟೋ ಕನವರಿಕೆಗಳ, ಅದೆಷ್ಟೋ ಕನಸುಗಳ, ಅದೆಷ್ಟೋ ದಿನಗಳ ತಪಸ್ಸಿನ ಪ್ರತಿಫಲ. ಈಗ ನನ್ನ ನಿರ್ಮಲವಾದ ಪ್ರೀತಿಯನ್ನೇ ತಿರಸ್ಕರಿಸಿ ಜೀವಂತವಾಗಿ ಸುಟ್ಟು ಹಾಕಿರುವೆ. ಒಂದಾಗಿ ಕೂಡಿ ಬೆಳೆದ ಪ್ರೀತಿಗೆ ಈಗ ಅಗಲಿಕೆಯ ಮುಳ್ಳು ಚುಚ್ಚಿ ಕಮರಿ ಹೋಗಿದೆ. ನಮ್ಮ ಬದುಕಿನ ಹಾದಿಯೂ ಕವಲೊಡೆದು ನಾನೊಂದು ತೀರ ನೀನೊಂದು ತೀರ. ನೀನಿಲ್ಲದ ನಾನೀಗ ರೆಕ್ಕೆ ಮುರಿದ ಹಕ್ಕಿಯಂತಾಗಿ, ತಂತಿ ಹರಿದ ವೀಣೆಯಂತಾಗಿರುವೆ.
ಆದರೂ ನೀನೆಂದರೆ, ನನ್ನ ವೇದನೆಯ ಬಾಳಿಗೆ ಸುಖದ ಸೆಲೆಯಾದವಳು. ಕೆಟ್ಟ ಕನಸುಗಳ ಕೊಳೆ ತೊಳೆದು ಹೊಸತನದ ಬಾಳಿಗೆ ಬೆಳಕಾದವಳು. ಒಂಟಿತನದ ತೆರೆ ಸರಿಸಿ ಸುಂದರ ಬದುಕಿಗೆ ಜೊತೆಯಾಗಿ ನಿಂತವಳು. ಇವೆಲ್ಲಕ್ಕಿಂತ ಮಿಗಿಲಾಗಿ ನೀನೆಂದರೆ ನಂಬಿಕೆ, ಬರೀ ನಂಬಿಕೆ ಅಷ್ಟೇ. ಕಾರಣ, ನೀನೆಂದರೆ ಪ್ರೀತಿ, ಪ್ರೀತಿಯೆಂದರೆ ನಂಬಿಕೆ, ಅದಕ್ಕೋಸ್ಕರ ಇಲ್ಲಿಯವರೆಗೂ ನಿನ್ನ ಮೇಲಿರೋ ನನ್ನ ನಂಬಿಕೆಯ ಹೊರತು ಬೇರೇನೂ ಗೊತ್ತಿಲ್ಲ.
ಇನ್ನಾದರೂ ನಿನ್ನ ಪ್ರೀತಿಯ ಜಪತಪದಲ್ಲಿ ಕಂಗೆಟ್ಟು ಕಂಗಾಲಾಗಿರುವ ಈ ನೊಂದ ಮನಕ್ಕೆ ತಂಪನ್ನೆರೆದು ಇಂದು, ಮುಂದು, ಎಂದೆಂದೂ ನೀನೇ ನನಗೆ ಎಲ್ಲವೂ ಆಗಿರು.
ಎಂದೆಂದಿಗೂ ನಿನ್ನವನು…
ರಂಗನಾಥ ಎಸ್. ಗುಡಿಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.