ಸಾಧ್ಯವಾದಷ್ಟೂ ನನ್ನನ್ನು ಅವಾಯ್ಡ್ ಮಾಡ್ತಿದ್ದೀರಲ್ಲ… ಯಾಕೆ?
Team Udayavani, Jun 6, 2017, 3:45 AM IST
ಬರೀ ಭಾವುಕತೆಯಲ್ಲೇ ಬೊಂಬಡ ಹೊಡೀತಿದೀನಿ ಅಂದ್ಕೊಬೇಡಿ ಟೀಚರ್, ವಾಸ್ತವ ಜಗತ್ತಿನ ಅರಿವೂ ಇದೆ. ನಿಮ್ಮ ಒಡನಾಟವನ್ನು ಜೀವನಪರ್ಯಂತ ಇಟ್ಕೊàಬೇಕು ಅನ್ನೋ ಅದಮ್ಯ ಆಸೆ ಇಟ್ಕೊಂಡಿದೀನಿ.
“ಇನ್ಮೆಲೆ ಮೆಸೇಜ್ ಮಾಡ್ಬೇಡಿ. ಎದುರು ಸಿಕ್ಕಾಗ ಮಾತಾಡಿಸ್ಬೇಡಿ. ಯಾಕೆ ಅಂತ ಏನೂ ಕೇಳ್ಬೇಡಿ ಪ್ಲೀಸ್. ನಿಮ್ಮ ಪಾಡಿಗೆ ನೀವ್ ಚೆನ್ನಾಗಿರಿ…’
ಇಂಥದ್ದೊಂದು “ಬ್ರೇಕಪ್’ ಸಂದೇಶ ವಾಟ್ಸಾಪಿನಲ್ಲಿ ನಮ್ಮಾಕೆಯ ನಂಬರಿನಿಂದ ಬರುತ್ತಿದ್ದಂತೆಯೇ ನನ್ನೆದೆ ಧಸಕ್ಕೆಂದು ಕುಸಿದುಬಿತ್ತು.
ಜೋರುಮಳೆ, ನನ್ನದೇ ಕಣ್ಣೊಳಗೆ! ಮುಂಗಾರು ಮಳೆಗೆ ಪೈಪೋಟಿಯೊಡ್ಡುವಂತೆ ಕಣ್ಣಹನಿಗಳು ಕೆನ್ನೆಯನ್ನು ಬಳಸಿ ಪಟಪಟನೆ ತೊಟ್ಟಿಕ್ಕಲಾರಂಭಿಸಿದ್ದವು. ಕೆನ್ನೆ ನಡುವಿನಲ್ಲೇ ಭೋರ್ಗರೆವ ಜಲಪಾತ ಅಚಾನಕ್ಕಾಗಿ ಉದ್ಭವ.!
ಅವತ್ತಿನ ದಿನಗಳು ನೆನಪಿದ್ಯಾ ಟೀಚರ್? ಕಣ್ಣಲ್ಲೇ ಪಿಸುಗುಟ್ಟಿ ಮೌನ ಭಾಷೆಯಲ್ಲೇ ಅನಂತ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳೋ ಕಲೆ ಕಲಿಸಿದವರೇ ನೀವು. ಸದಾ ಪಟಪಟ ಮಾತಾಡ್ತಿದ್ದ ನಾನು, ಆ ಕ್ಷಣಕ್ಕಾಗಲೇ ಮಹಾ ಮೌನಿಯಾಗಿºಟ್ಟೆ. ನಿಮ್ಮನ್ನು ಆ ಪುಟಾಣಿ ಕಂದಮ್ಮಗಳ ಜೊತೆ ಕಂಡ ವೇಳೆಗಾಗಲೇ ನನ್ನ ಹೃದಯ ಕಳವಾದ ಸೂಚನೆ ಸಿಕ್ಕಿಬಿಟ್ಟಿತ್ತು. ಎಷ್ಟೊಂದೆÇÉಾ ಪರಿಶುದ್ಧ ಒಡನಾಟ ಏರ್ಪಟ್ಟಿತ್ತಲ್ವಾ ನಮ್ಮ ನಡುವೆ? ಪ್ರೀತಿ- ಪ್ರೇಮದಂಥ ಮಧುರ ಭಾವನೆಗಳನ್ನು ತುಂಬಿಕೊಂಡ ನನ್ನ ಎಳಸು ಹೃದಯವಂತೂ ಸ್ವರ್ಗಕ್ಕೊಂದೇ ಗೇಣು ಎಂಬಂತೆ, ನವಿಲು ಗರಿಬಿಚ್ಚಿ ಸಂಭ್ರಮಿಸುವಂತೆ ವಿಪರೀತ ಸಡಗರದಿಂದ ಛಂಗನೆ ಕುಣಿದು ಕುಪ್ಪಳಿಸಿಬಿಟ್ಟಿತ್ತು. “ಮಳೆ ಬಿದ್ದ ಮಣ್ಣ ಘಮಕೆ, ನಿಮ್ಮ ಹೆಸರು ಇಡುವ ಬಯಕೆ’ ಎಂಬ ಉತ್ಕಟ ಪ್ರೇಮಗೀತೆ ಗಝಲನ್ನು ಬರೆಯುವಷ್ಟರ ಮಟ್ಟಿಗೆ ನನ್ನ ಹೃದಯ ಖುಷಿಯಾಗಿತ್ತು. ಆಗಸದ ಅಷ್ಟೂ ತಾರೆಗಳನ್ನೆÇÉಾ ಹರಾಜಿನಲ್ಲಿ ಕೊಂಡುಕೊಂಡು ಪೋಣಿಸಿ ನಿನಗೆ ಮಾಲೆ ಮಾಡಿ ತೊಡಿಸಿದಂಥ ಅಪೂರ್ವ ಕನಸು ಮೊನ್ನೆ ತಾನೆ ಬಿದ್ದಿತ್ತು.
ಅಂದಹಾಗೆ, ಫೆಬ್ರವರಿ ತಿಂಗಳಲ್ಲಿ ಪುಟಾಣಿ ಮಕ್ಕಳೊಂದಿಗೆ ನಾವಿಬ್ಬರೂ ಸೇರಿ ತೆಗೆದುಕೊಂಡ ಸೆಲ್ಫಿ ನನ್ನ ಮೊಬೈಲಿನ ಸ್ಕ್ರೀನ್ ಮೇಲೆ ವಾಲ…ಪೇಪರ್ ಆಗಿ ಠಿಕಾಣಿ ಹೂಡಿರೋದು ನಿಮಗೆ ಗೊತ್ತಿಲ್ಲಾ ಅನ್ಸುತ್ತೆ. ಅರೆ, ಬರೀ ಭಾವುಕತೆಯಲ್ಲೇ ಬೊಂಬಡ ಹೊಡೀತಿದೀನಿ ಅಂದ್ಕೋಬೇಡಿ ಟೀಚರ್, ವಾಸ್ತವ ಜಗತ್ತಿನ ಅರಿವೂ ಇದೆ. ನಿಮ್ಮ ಒಡನಾಟವನ್ನು ಜೀವನಪರ್ಯಂತ ಇಟ್ಕೊಬೇಕು ಅನ್ನೋ ಅದಮ್ಯ ಆಸೆ ಇಟ್ಕೊಂಡಿದೀನಿ. ನೀವೇ ನನಗೆ ಬಹುದೊಡ್ಡ ಸ್ಫೂರ್ತಿ. ಹಾಗಾಗಿ ಸರಿಹೊತ್ತಲ್ಲಿ ಎದ್ದು ಓದ್ಕೋತಿದೀನಿ. ಚಂದದ್ದೊಂದು ನೌಕರಿ ಗಿಟ್ಟಿಸಿಕೊಳ್ಳಲು ತುಂಬಾ ಕಸರತ್ತು ನಡೆಸ್ತಿದೀನಿ, ಇವೆಲ್ಲಾ ನಿಮಗಾಗಿ, ನಮಗಾಗಿ!
ಆದ್ರೆ ಈಚೀಚೆಗೆ ಅದೇನಾಯ್ತು ಅಂತ ನಿಮ್ಗೆ? ನೋಡಿದ್ರೂ ನೋಡದೆ ಇರೋರ ಹಾಗೆ ಇರ್ತೀರಾ, ಈಗಂತೂ ನನ್ನ ಕಂಡ್ರೆ ದೂರ ಓಡಿ ಹೋಗ್ತಿàರಾ. ಆಜನ್ಮ ಶತ್ರು ಥರಾ ನನ್ನ ನಿಷ್ಕಾರಣವಾದ ಪ್ರೀತಿಯನ್ನು ದ್ವೇಷಿಸ್ತಿರೋ ಆ ಸಕಾರಣ ಆದ್ರೂ ಯಾವುದು ಅಂತಾ ಹೇಳಿ…
ಅದೆಂಥದೇ ಸಮಸ್ಯೆ ಇದ್ರೂ ನಾನು ಮೆಟ್ಟಿ ನಿಲ್ತಿàನಿ. ನಿಮ… ಖುಷಿಗೆ ಕಾರಣ ನಾನಾಗ್ತಿàನಿ. ನಿಮ್ಮನ್ನು ಗುಬ್ಬಚ್ಚಿ ಹಾಗೆ ಎದೆಗೂಡಲ್ಲೇ ಇಟ್ಕೊಂಡು ಮುದ್ದು ಮಾಡ್ತೀನಿ. ಇಷ್ಟೆಲ್ಲಾ ಹೇಳಿದ್ಮೇಲೆ ನೀವು ನನ್ನಿಂದ ದೂರ ಆಗಲ್ಲ ಅಂತ ಅಂದ್ಕೋಡಿದೀನಿ.
ಒಂದ್ ವಿಷ್ಯಾ ತಿಳ್ಕೊಳಿ ಟೀಚರ್, ನಾನು ನಿಮ್ಮನ್ನ ಬರೀ ಪ್ರೀತಿಸ್ತಿಲ್ಲ, ಆರಾಧಿಸ್ತಿದೀನಿ! ಆರಾಧನೆಯಲ್ಲಿ ಅಪಾವಿತ್ರ್ಯವಿರುವುದಿಲ್ಲ. ನನ್ನ ನಂಬಿ ಟೀಚರ್. ನನ್ನೆಡೆಗೆ ಬಂದೇ ಬರ್ತೀರಾ ಅಂತ ಕಾಯ್ತಾ ಇರ್ತೀನಿ…
ಇಂತಿ ನಿಮ್ಮ ಸಾರ್ವಕಾಲಿಕ ಹಿತೈಷಿ…..
– ಹೃದಯರವಿ, ರಾಮನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.