ನೀವೂ ಮಕ್ಕಳಾಗಿ…
Team Udayavani, Apr 21, 2020, 11:55 AM IST
ನಿಮ್ಮ ಮಗ/ ಮಗಳು ಚೆಸ್ ಆಟಗಾರನಾ(ಳಾ)ಗಿದ್ದರೆ, ಅವರ ಜೊತೆ ಚೆಸ್ ಆಡಿ, ಸೋತು ಬಿಡಿ! ನಿಮ್ಮ ಸೋಲು ಆ ಮಕ್ಕಳಿಗೆ ಕೊಡುವ ಕಾನ್ಫಿಡೆನ್ಸ್ ದೊಡ್ಡದು…
ನೀವು ಸಾಮಾನ್ಯ ದಿನಗಳಲ್ಲಿ ಮಕ್ಕಳಿಗಾಗಿ ಎಂದಾದರೂ ಸಮಯ ಕೊಟ್ಟಿದ್ದೀರಾ? ಖಂಡಿತ ಇಲ್ಲ. “ಅಪ್ಪಾ, ಈ ಚಿತ್ರ ಹೇಗೆ ಬರೆಯೋದು?’ ಅಂತ ಮಗಳೇನಾದರೂ ಕೇಳಿದರೆ-
“ನಾನು ಆಫಿಸಿಂದ ಬಂದು ಹೇಳ್ತೀನಿ. ಈಗ ಬಿಟ್ಟುಬಿಡು’ ಅಂದು ತಪ್ಪಿಸಿಕೊಂಡಿರುತ್ತೀರಿ.’ “ನನ್ನ ಜೊತೆ ಕೇರಂ ಆಡೋಕೆ ಬಾರಪ್ಪಾ’ ಅಂತ ಮಗ ಕರೆದರೆ, “ಎಲ್ಲಯ್ನಾ, ಟೈಮೇ ಇಲ್ಲ. ನಿಮ್ಮ ಅಮ್ಮನ ಜೊತೆ ಆಡಿಕೋ’ ಅಂದು ಎದ್ದು ಹೋಗಿರುತ್ತೀರಿ. ಹೀಗೆ, ಬ್ಯುಸಿ ಅಂತ ಹೇಳಿ ತಪ್ಪಿಸಿಕೊಂಡದ್ದಕ್ಕೆಲ್ಲಾ ಪ್ರಾಯಃ ಶ್ಚಿತ್ತ ಮಾಡಿಕೊಳ್ಳುವಷ್ಟು ಸಮಯ ಈಗ ಸಿಕ್ಕಿದೆಯಲ್ಲ; ಅದನ್ನು ಬಳಸಿಕೊಳ್ಳಿ. ನಿಮ್ಮ ಮಗು ಮಾಡುವ ಏಕಪಾತ್ರಾಭಿನಯವನ್ನು ಮನೆಮಂದಿಯ ಜೊತೆ ಕೂತು ನೋಡಿ. ಮಗ ಚೆಸ್ ಆಟಗಾರನಾಗಿದ್ದರೆ, ಬೆಳಗ್ಗೆ ಅವನ ಜೊತೆ ಚೆಸ್ ಆಡಿ, ಸೋತು ಬಿಡಿ!
ಸೋಲಿ ಅಂತ ಏಕೆ ಹೇಳುತ್ತಿರುವುದೆಂದರೆ, ಅಪ್ಪನನ್ನೂ ಒಮ್ಮೆ ಸೋಲಿಸಿದ್ದೆ ಎಂಬ ಖುಷಿ ಬದುಕು ಪೂರ್ತಿ ಮಗನ ಜೊತೆಗೇ ಉಳಿಯುತ್ತದೆ. ಮಕ್ಕಳ ಜೊತೆ ಆಡುವಾಗ ಇಂಥದೊಂದು ತಂತ್ರ ಬಳಸಿದರೆ, ಅವರ ಆತ್ಮವಿಶ್ವಾಸ ಹೆಚ್ಚಿಸಲು ಪರೋಕ್ಷವಾಗಿ ಕಾರಣ ಆಗಬಹುದು. ಆ ಮೂಲಕ ಮಕ್ಕಳು ಗೆಲುವಿನ ಹಳಿಯ ಮೇಲೆ ನಡೆಯಲು ಒಂದು ವೇದಿಕೆ ರೂಪಿಸಿಕೊಡಬಹುದು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.