ಮನಸ್ಸು ಬದಲಾದ್ರೆ ನಿಂಗೆ ಸಿಗಲ್ಲ…


Team Udayavani, Jan 28, 2020, 6:07 AM IST

manassu

ಅಲ್ಲ ಕಣೋ, ಮನದ ಮಾತುಗಳ ಕೇಳ್ಬೇಕಿತ್ತು ಎಂದು ನಿನಗೆ ಅನಿಸಲಿಲ್ವಾ..? ಒಮ್ಮೆಯಾದ್ರೂ ನಾನು ಮುಂದೆ ಬಂದು ಎಷ್ಟು ಬಾರಿ ಹೇಳಿಕೊಳ್ಳಲಿ..? ಯೋಚಿಸು, ನೀನು ನನಗಾಗಿ ಬದುಕದಿದ್ದರೂ ಪರವಾಗಿಲ್ಲ. ನಿನ್ನ ದಿನಚರಿಯಲ್ಲಿ ನಮಗೆಂದು ಒಂದೈದು ನಿಮಿಷ ಸಮಯ ಇಲ್ಲವೇ..? ನಾವಿಬ್ಬರೂ, ಈಗಿನಗಿಂತಲೂ ತುಂಬಾ ಖುಷಿಯಾಗಿ ಇರಬಹುದಿತ್ತು. ಎಲ್ಲವನ್ನೂ ಕೈಯ್ನಾರೆ ಹಾಳಾಡುತ್ತಾ ಇದೀಯ? ನೆನಪಿಲ್ಲ ನಿನಗೆ ಯಾವುದು ಅಂತ. ತುಂಬಾ ಚೆನ್ನಾಗಿ ಅರ್ಥ ಮಾಡಿಸ್ತಾ ಇದೀಯ? ಯಾಕೋ ಈ ಥರ ಮಾಡ್ತಾ ಇದೀಯ?

ನಮ್ಮದೇ ಪ್ರಪಂಚದಲ್ಲಿ ಪುಟ್ಟ ಗೂಡೊಂದನ್ನು ಕಟ್ಟುತ್ತಾ, ನಾವು ಬದುಕುವ ರೀತಿಯನ್ನು ಕನಸುಗಳಾಗಿ ಹೆಣೆಯುತ್ತಾ, ಹರಟಿದ ಮಾತುಗಳು ಸಾವಿರ ಇವೆ. ಆದರೆ, ಅವೆಂದೂ ನಿನ್ನ ಒಳಮನಸ್ಸನ್ನು ತಲುಪಲೇ ಇಲ್ವಾ ? ನಿನಗಾಗಿಯೇ ಮಿಡಿಯೋ ಹೃದಯ ನನ್ನದು. ನಿನಗಾಗಿಯೇ ಕಾಯುತ್ತಲಿರುವೆ. ನಿನ್ನ ಒಂದು ಮಾತು ಬೇಕು. ಅದು ಮನದಿಂದ ಬಂದ ಮಾತಾಗಿರಬೇಕು. ಫಾರ್ಮಾಲಿಟಿಸ್‌ಗೆ ತುಂಬಾ ಜನ ಸಿಕ್ತಾರೆ. ಕೆಟ್ಟ ಕೋಪ ಬರುತ್ತೆ. ಆ ಔಪಚಾರಿಕತೆಯ ಕಂಡ್ರೆ.. ನಿನಗೇಕೆ ಇದೆಲ್ಲ ಅರ್ಥ ಆಗ್ಲಿಲ್ಲ?

ಬ್ಯುಸಿ ಎಂದು ಮಾತಾಡ್ಬೇಕಾಗುತ್ತೆ ಎಂದು ಹೇಳ್ಳೋ ಮಾತು ಎಂದು ಎಷ್ಟೋ ಸಲ ಅನಿಸಿದೆ ಆದರೂ ಒಪ್ಪಿಕೊಳ್ಳೋಕೆ ಹೃದಯ ತಯಾರಿಲ್ಲ. ಈಗಲೂ ಹೇಳ್ತಾ ಇದೀನಿ. ನಾನು ಹಠ ಸಾಧಿಸೋ ಮುನ್ನ ನನ್ನ ಮನದ ಮಾತುಗಳ ಅರ್ಥಮಾಡ್ಕೊಂಡು ಬಿಡು. ನಾನ್‌ ಒಂಥರಾ ಬದ್ಲಾದ್ರೆ ನಿಂಗ್‌ ದಕ್ಕಲ್ಲ. ತಪ್ಪಿಲ್ಲದೆ ಶಿಕ್ಷಿಸೋ ಮನಸ್ಸಿಲ್ಲ. ನಿನ್ನ ಬಿಟ್ಟಕೊಡೋದು, ಬಿಟ್ಟಿರೋದು ಕಷ್ಟನೇ. ಗಟ್ಟಿ ಮನಸ್ಸು ಮಾಡಿ ನನ್ನಾ ನಾ ಬದಲಾಯಿಸಿಕೊಂಡ್ರೆ ನೀ ಏನು ಮಾಡೋಕೂ ಆಗಲ್ಲ. ಲಾಸ್ಟ್‌ ಚಾನ್ಸ್‌ ಫಾರ್‌ ಯು. ಯೋಚಿಸು, ಜಾಸ್ತಿ ದಿನ ಕಾಯೋವಷ್ಟು ತಾಳ್ಮೆ ಇಲ್ಲ. ಕಾಯ್ದು ಬಸವಳಿಯೋಕೆ ಮನಸೂ ಇಲ್ಲ.

* ವಿದ್ಯಾಶ್ರೀ ಬಿ., ಬಳ್ಳಾರಿ

ಟಾಪ್ ನ್ಯೂಸ್

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.