ನನ್ನ ನೀನು ಗೆಲ್ಲಲಾರೆ…
ಮೂರು ನಿಮಿಷದ ಮನುಷ್ಯ
Team Udayavani, Jun 25, 2019, 5:00 AM IST
ಬೈಕ್ ಲವರ್ಸ್‌ಗೆ, ಬೈಕೇ ಪ್ರಪಂಚ. ಹಾಗೆ ನಂಗೂ. ಬಿಡುವಿನ ಸಮಯದಲ್ಲಿ ಅದರ ಜೊತೆಗೆ ಕಾಲಕಳೆಯುವುದೆಂದರೆ, ನನಗೆ ತುಂಬಾ ಇಷ್ಟ. ಅವತ್ತೂಂದು ದಿನ ಹೆಡ್‌ಫೋನ್ ಹಾಕ್ಕೊಂಡು, ಹೆಲ್ಮೆಟ್ ಧರಿಸದೇ, ತಣ್ಣನೆಯ ಗಾಳಿಯ ಸುಖ ಅನುಭವಿಸುತ್ತಾ, ಮಿತಿ ವೇಗದಲ್ಲಿ ಸಾಗುತ್ತಿದ್ದೆ. ಅಷ್ಟೊತ್ತಿಗೆ ಮತ್ತೂಬ್ಬ ಬೈಕ್ ಸವಾರ ಹೆಲ್ಮೆಟ್, ಜಾಕೆಟ್ ಎಲ್ಲವನ್ನೂ ಧರಿಸಿಕೊಂಡು, ನನ್ನನ್ನು ಓವರ್‌ಟೇಕ್ ಮಾಡಿಕೊಂಡು ಮುನ್ನುಗಿದ. ನಾನು ಅದನ್ನು ಲೆಕ್ಕಿಸದೆ, ನನ್ನಷ್ಟಕ್ಕೇ ಸಾಗುತ್ತಿದ್ದೆ. ಆದರೆ, ಆತ ನನಗೆ ವೇಗವಾಗಿ ರೈಡ್ ಮಾಡಲು ಬರೋದಿಲ್ಲ ಎನ್ನುವ ರೀತಿಯಲ್ಲಿ, ಸ್ಪೀಡ್ ಆಗಿ ಹೋಗೋದು, ಹಿಂತಿರುಗಿ ನೋಡೋದು, ಮತ್ತೆ ನನ್ನ ವೇಗಕ್ಕೆ ಸರಿಯಾಗಿ ಬೈಕ್ ಚಲಾಯಿಸೋದು ಮಾಡುತ್ತಿದ್ದ. ಅವನ ಈ ವರ್ತನೆ, ನನ್ನನ್ನು ಛೇಡಿಸುತ್ತಿತ್ತು.
ಅವನ ಈ ವರ್ತನೆ ನೋಡಿ, ನನ್ನ ರೈಡಿಂಗ್ ವೇಗವನ್ನೂ ಅವನಿಗೆ ಪರಿಚಯಿಸಬೇಕೆನಿಸಿತು. ನಮ್ಮೊಳಗೇ ಬೈಕ್ ರೇಸಿಂಗ್ ಶುರುವಾಯಿತು. ಒಮ್ಮೆ ನಾನು, ಮತ್ತೂಮ್ಮೆ ಅವನು… ಹೀಗೆ ಸಾಗುತ್ತಿದ್ದ ಹಾದಿಯಲ್ಲಿ ಒಂದು ಕಡೆ ಟ್ರಾಫಿಕ್ ಪೊಲೀಸ್ ಎದುರಾದ. ಬೈಕ್ ಅತಿವೇಗದಲ್ಲಿತ್ತು. ಜತೆಗೆ ಹೆಲ್ಮೆಟ್ ಅನ್ನೂ ಧರಿಸದ ಕಾರಣ, ಆತ ನನ್ನನ್ನು ತಡೆಹಿಡಿದ. ನಾನು ಬೈಕ್ ಅನ್ನು ನಿಧಾನ ಮಾಡಿದ್ದನ್ನು ಕಂಡು, ನನ್ನ ಜೊತೆಗೆ ಸಾಗಿ ಬರುತ್ತಿದ್ದ ಸವಾರ, “ನೀನು ಸೋತೆ’ ಎನ್ನುವ ರೀತಿಯಲ್ಲಿ ತುಸು ನಕ್ಕು ಮುಂದೆ ಸಾಗಿದ. ನಾನು ಇನ್ನೇನು ಬೈಕ್ ನಿಲ್ಲಿಸಿ, ಇಳಿಯಬೇಕು ಎನ್ನುವಷ್ಟರಲ್ಲಿ ಸುಮಾರು 200 ಮೀಟರ್ ದೂರದಲ್ಲಿ “ಢಿಂ’ ಎಂಬ ಶಬ್ದ ಬಂತು. ಕತ್ತು ಎತ್ತಿ ನೊಡುವಾಗ ಆತ ಓವರ್‌ಟೇಕ್ ಮಾಡುವ ರಭಸದಲ್ಲಿ ಒಂದು ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಬಿದ್ದಿರುವುದು ಗೋಚರವಾಯಿತು. ಒಂದು ಬಾರಿ ನಿಂತಲ್ಲಿಯೇ ಸಿಡಿಲು ಬಡಿದ ಅನುಭವವಾಯಿತು. ಒಂದು ವೇಳೆ ನಾನು ಆ ಸ್ಥಾನದಲ್ಲಿ ಇರುತ್ತಿದ್ದರೆ ನನಗೂ ಅದೇ ಗತಿ ಬರುತ್ತಿತ್ತೇನೋ, ಅಂತನ್ನಿಸಿತು. ಪೊಲೀಸ್ ನನ್ನನ್ನು ಕೊನೆಯ ಒಂದು ನಿಮಿಷದಲ್ಲಿ ನಿಲ್ಲಿಸದೇ ಇದ್ದಿದ್ದರೆ, ನಾನು ಜೀವಂತವಾಗಿ ಇರುವುದೇ ಅನುಮಾನ ಆಗಿರುತ್ತಿತ್ತು.
– ಇಫಾಜ್, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.