ನಿನ್ನ ನೋಡುವ ಲಗನ್ ಯಾವಾಗ್ ಬರುತ್ತೂ…
Team Udayavani, Jan 16, 2018, 3:15 PM IST
ನಿನಗೆ ನನ್ನ ಮೇಲೆ ಗಮನವಿರುತ್ತಿರಲಿಲ್ಲ ನಿಜ. ಆದರೆ, ಅದನ್ನೆಲ್ಲಾ ನಾನು ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ನೀನು ನನ್ನ ಹೀರೋ ಆಗಿದ್ದೆ. ನೀನು ಯಾರ್ಯಾರ ಜೊತೆಯೋ ಕೈಕೈ ಹಿಡಿದು ಪಾರ್ಕ್‌ನಲ್ಲಿ, ಸಮುದ್ರ ತೀರದಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ಕ್ಲಬ್ಬುಗಳಲ್ಲಿ ಅಡ್ಡಾಡುತ್ತಿದ್ದರೂ ನಂಗೆ ಅಸೂಯೆಯಾಗುತ್ತಿರಲಿಲ್ಲ. ನಿನ್ನ ಪಕ್ಕದಲ್ಲಿ ನನ್ನನ್ನೇ ಕಲ್ಪಿಸಿಕೊಂಡು ಪುಳಕಗೊಳ್ಳುತ್ತಿದ್ದೆ.
ಓ ನನ್ನ ಗ್ರೀಕು ವೀರ,
ನಿನಗೆ ಮಾರು ಹೋಗದವರಾರು ಹೇಳು? ಎಷ್ಟೋ ಜನ ನಿನಗೆ ಮನಸೋತಿದ್ದಾರೆ. ನಾನೂ ಮನ ಸೋತೆ. ನಿನ್ನ ಚೆಂದಕ್ಕೆ ಬೆರಗಾದೆ. ನಿನ್ನ ಎತ್ತರಕ್ಕೆ ಮರುಳಾದೆ. ನಿನ್ನ ಆ್ಯಂಗ್ರಿ ಯಂಗ್ ಮ್ಯಾನ್ ಮುಖಭಾವದಲ್ಲೂ ಕಂಡೂ ಕಾಣದೆ ಇಣುಕುತ್ತಿದ್ದ ಮಾರ್ದವತೆಗೆ ಸೋತುಹೋದೆ. ನನ್ನ ಗೆಳತಿಯರೆಲ್ಲ ಅದೇನೇ ಗಳುವಿನ ಹಾಗೆ ಉದ್ದಕ್ಕೆ ಇದಾನೆ, ಅವನನ್ನೇನು ಇಷ್ಟಪಡ್ತೀಯೋ? ಎಂದು ರೇಗಿಸುತ್ತಿದರೂ, ನಿನ್ನಿಂದ ನನ್ನ ಮನ ಒಂದಿಂಚೂ ಆಚೀಚೆ ಅಲ್ಲಾಡಲಿಲ್ಲ. ನಿನ್ನನ್ನು ನೋಡುವುದೇ ನನ್ನ ಖುಷಿಯಾಗಿತ್ತು. ಕದ್ದು ಮುಚ್ಚಿ ನಿನ್ನನ್ನು ನೋಡಲು ಧಾವಿಸಿ ಬರುತ್ತಿದ್ದೆ.
ನಿನಗೆ ನನ್ನ ಮೇಲೆ ಗಮನವಿರುತ್ತಿರಲಿಲ್ಲ ನಿಜ. ಆದರೆ, ಅದನ್ನೆಲ್ಲಾ ನಾನು ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ನೀನು ನನ್ನ ಹೀರೋ ಆಗಿದ್ದೆ. ನೀನು ಯಾರ್ಯಾರ ಜೊತೆಯೋ ಕೈಕೈ ಹಿಡಿದು ಪಾರ್ಕ್‌ನಲ್ಲಿ, ಸಮುದ್ರ ತೀರದಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ಕ್ಲಬ್ಬುಗಳಲ್ಲಿ ಅಡ್ಡಾಡುತ್ತಿದ್ದರೂ ನಂಗೆ ಅಸೂಯೆಯಾಗುತ್ತಿರಲಿಲ್ಲ. ನಿನ್ನ ಪಕ್ಕದಲ್ಲಿ ನನ್ನನ್ನೇ ಕಲ್ಪಿಸಿಕೊಂಡು ಪುಳಕಗೊಳ್ಳುತ್ತಿದ್ದೆ. ನೀನು ಮಾತನಾಡುವ ಪ್ರತಿಯೊಂದು ಡೈಲಾಗೂ ನನಗೆ ಶೃತಿ ಮಾಡಿದ ವೀಣೆಯ ನಾದದಂತೆ ಕಿವಿಗಳಲ್ಲಿ ಝೇಂಕರಿಸುತ್ತಿತ್ತು. ನೀನು ಮೋಟರ್ ಬೈಕಿನಲ್ಲಿ ಬಂದ ದಿನ ನನ್ನ ಕಣ್ಣಿಗೆ ಹಬ್ಬ. ಬೈಕಿನಲ್ಲಿ ಲೀಲಾಜಾಲವಾಗಿ ನೀನು ಹಾಡುತ್ತಾ, ಎರಡೂ ಕೈ ಬಿಟ್ಟು ಓಡುವ ಬೈಕಿನಿಂದ ಎದ್ದು ನಿಲ್ಲುವ ಪರಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ನೀನೇನೇ ಮಾಡಿದರೂ ನನಗೆ ಚೆಂದ. ಒಂದಿನ ಅದ್ಯಾರಿಗೋ ನೀನು ಇಟ್ಟಾಡಿಸಿಕೊಂಡು ಹೊಡೀತಿದ್ಯಲ್ಲ… ಅಬ್ಟಾ ಎಷ್ಟು ಶಕ್ತಿ ನಿನಗೆ!
ನಿನ್ನನ್ನ ಗ್ರೀಕು ವೀರ ಅಂತ ಯಾಕೆ ಕರೀತೀನಿ ಗೊತ್ತಾ? ಗ್ರೀಕ್ ವೀರ ಅಲೆಕ್ಸಾಂಡರ್ ವೀರಾಧಿವೀರ. ಸಾಹಸಿ. ಅವನು ತುಂಬಾ ಎತ್ತರಕ್ಕೆ ಇದ್ನಂತೆ. ನೀನೂ ನಂಗೆ ಹಾಗೇ ಕಾಣಿ¤àಯ. ಅವತ್ತೂಂದಿನ ನೀನು ಬಾಂಬೆ ಬೀಚಿನಲ್ಲಿ ಆ ಕುಳ್ಳ ಹುಡುಗಿ- ಯಾರವಳು? ಮೌಸು ಯಾ ಅವಳ ಜೊತೆ ಮಳೆಯಲ್ಲಿ ಕೈಕೈ ಹಿಡಿದು ಹೆಜ್ಜೆ ಹಾಕುತ್ತಿದ್ದೆ. ಅವಳು ನಿಂಗೆ ಒಳ್ಳೇ ಜೋಡಿ ಅಲ್ವೇ ಅಲ್ಲ. ನಾನೇ ಸರಿ ನಿಂಗೆ, ಅಲ್ವಾ? ಅಯ್ಯೋ ಬಿಡು, ನಿಂಗೇನು ಗೊತ್ತು ನಾ ನಿನ್ನ ಎಷ್ಟು ಆರಾಧಿಸ್ತೀನಿ ಅಂತ! ಇನ್ನೊಂದು ದಿನ ಕ್ರಿಶ್ಚಿಯನ್ ಆಂಥೋನಿ ಥರಾ ಡ್ರೆಸ್ ಮಾಡ್ಕೊಂಡು “ಮೈ ನೇಮ್ ಈಸ್ ಆಂಥೋನಿ ಗುಂಜಾಸ್’ ಅಂತ ಅವಳಾರಿಗೋ ರೋಸ್ ಕೊಡ್ತಾ ಇದ್ಯಲ್ಲ! ನಂಗೆ ಒಂದಿನಾನೂ ರೆಡ್ ರೋಸ್ ಕೊಡಬೇಕಂತ ಅನಿಸಲಿಲ್ವಾ? ಅವತ್ತೂಂದು ದಿನ “ಓ ಸಾಥಿರೇ ತೆರೇ ಬಿ ನಭಿ ಕ್ಯಾ ಜೀನಾ’ ಅಂತ ಫುಲ್ ದೇವದಾಸ್ ಸ್ಟೈಲಲ್ಲಿ ಹೇಳ್ತಾ ಇದ್ಯಲ್ಲ… ಅದನ್ನು ನೋಡಿ ನಂಗೆಷ್ಟು ಅಳು ಬಂತು ಗೊತ್ತಾ? ನೀನು ಯಾಕೆ ಯಾರ್ಯಾರಿಗೋ ಕೊರಗೋದು? ನಾನಿಲ್ವಾ? ನಂಗೆ ಒಂದು ಸಾರಿ, ಒಂದೇ ಒಂದು ಸಾರಿ ರೋಸ್ ಕೊಟ್ಟು “ಐ ಲವ್ ಯು’ ಅಂತ ಹೇಳಬಾರದಾ? ನಿನ್ನನ್ನು ಆರಾಧಿಸುವ ನನ್ನ ಕಣ್ಣುಗಳನ್ನು ನೀನು ಎಂದೂ ಗಮನಿಸಲೇ ಇಲ್ವಾ? ನೀನು ನನ್ನ ಮುಂದೆ ಮಂಡಿಯೂರಿ, ರೋಸ್ ಕೊಟ್ಟು ಐ ಲವ್ ಯು ಹೇಳ್ತೀಯಾ ಅಂತ ವರ್ಷಗಳೀಂದ ಕಾಯ್ತಾನೇ ಇದೀನಿ. ನನ್ನ ತಲೆ ಕೂದಲು ಬೆಳ್ಳಗಾಗ್ತಾ ಇದೆ. ನೀನು ಮುದುಕ ಆಗ್ತಾ ಇದೀಯ. ಹೋ… ಮುದುಕ ಆದರೂ ರಸಿಕತೆ ನೋಡು! ಏನೂ ಕಡಿಮೆಯಿಲ್ಲ. ಆ ಟಬು ಜೊತೆ “ಜಾನೆ ದೋ ನಾ ಜಾನೆ ಜಾನೆ ದೋನ’ ಅಂತ ಕುಲುಕುತ್ತಾ ಹಾಡು ಹೇಳ್ತೀಯಲ್ಲ! ಆಗ ನಂಗೆ ಎಷ್ಟು ಹೊಟ್ಟೆ ಉರೀತು ಗೊತ್ತಾ? ಥೂ ನಿನ್ನ ನಿನ್ ಮಕ್ಕಿಷ್ಟು ದ್ವಾಸೆ ಹುಯ್ಯ! ನಂಗೆ ಒಂದೇ ಒಂದು ಆಸೆ.. ಒಮ್ಮೆ ನಿನ್ನನ್ನು ಹತ್ತಿರದಿಂದ ನೋಡಿ ಹಗ್ ಮಾಡ್ಕೊಬೇಕು ಅಂತ! ಮೊದಲಿನ ಹುಚ್ಚು ಉದ್ವೇಗ ಕುದಿಯುವ ಪ್ರೀತಿ ಈಗ ಇಲ್ಲದಿದ್ದರೂ ಬೆಚ್ಚಗಿನ ಪ್ರೀತಿ ಇನ್ನೂ ಇದೆ ಕಣೋ. ಅದು ಎದೆಯ ಗೂಡಲ್ಲಿ ನಂದಾದೀಪದ ಹಾಗೆ ಶಾಂತವಾಗಿ ಉರಿಯುತ್ತಿದೆ. ನಿನ್ನ ನೋಡುವ ಆ ಲಗನ್ ಯಾವಾಗ ಬರತ್ತೋ ಏನೋ? ಜಯ್ ಆಲಿಯಾಸ್ ಅಮಿತಾಬ್ ಜೀ ತು ಹಮ್ಸ್ ಪ್ಯಾರ್ ಕರನೆಕೀ ಜರಾಸಿ ಭೂಲ್ ಕರದೋ, ಮೆರ ದಿಲ್ ಬೇಚೈನ್ ಹೈ ಹಮ್ ಸಫರ್ ಕೆ ಲಿಯೆ!
ಅದೇ ನಿನ್ನ ಆಂಟಿ ಪ್ರೀತ್ಸೆ!
ವೀಣಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.