ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ…!

Team Udayavani, Oct 23, 2018, 6:00 AM IST

10.jpg

ನೀನು ಮತ್ಯಾವತ್ತೂ ನಂಗೆ ಸಿಗಲಾರೆ ಅನ್ನುವ ಸತ್ಯವನ್ನು ನಾನು ಅರಗಿಸಿಕೊಳ್ಳುವುದಾದರೂ ಹೇಗೆ ? ಈ ಆತ್ಮದಾಳದ ನೋವನ್ನ ಹೇಗಾದರೂ ತಾಳಲಿ ಹೇಳು? ಯಾಕೆ ಈ ಜಗತ್ತು ಇಷ್ಟೊಂದು ನಿರ್ಭಾವುಕ ? ಯಾಕೆ ಪ್ರೀತಿಯೆಂದರೆ ಜಗತ್ತು ಇಷ್ಟೊಂದು ಕ್ರೂರ ?

ಹೃದಯವೇ,
ಈಗ ನಾವಿಬ್ಬರೂ ದೂರಾಗುವ ದಾರಿಯಲ್ಲಿ ನಿಂತವರು. ದಾರಿಯದೇನೂ ತಪ್ಪಿಲ್ಲ ಬಿಡು. ದಾರಿ ಇದ್ದಲ್ಲೇ ಇರುತ್ತದೆ. ಮನುಷ್ಯನೇ ತನಗೆ ಬೇಕಾದ ದಾರಿ ಹುಡುಕಿಕೊಂಡು ಹೊರಡುವವನು. ಆಮೇಲೆ ಯಾವತ್ತೋ ಒಂದು ದಿನ, ದಾರಿ ತಪ್ಪಿತು ಅಂತ ಸುಳ್ಳೇ ರೊಳ್ಳೆ ತೆಗೆಯುತ್ತಾನೆ. ಈಗ ದಾರಿಗೆ ಬಂದ್ಯಾ ಅನ್ನುವಂತೆ. ಹತ್ತಿರದವರ್ಯಾರೋ ತಾವು ನಿಂತ ದಾರಿಗೆ ನಡೆದು ಬಂದವರನ್ನು  ತುಟಿಯಂಚಿನ ಕೊಂಕು ನಗೆಯಲ್ಲೇ ಬರಮಾಡಿಕೊಂಡು ಬಿಟ್ಟಿ ಉಪದೇಶ ಕೊಟ್ಟು ಉಪಕಾರ ಮಾಡಿದ ಠೀವಿಯಲ್ಲಿ ನಿಂತು, ಮುಂದಿನ ದಾರಿ ತೋರುವಂತೆ ನಟಿಸುತ್ತಾರೆ. ದಿಕ್ಕೇ ಇಲ್ಲದವನು, ಕಂಡ ದಾರಿಗೆ ಕಾಲಿಟ್ಟು ಬಿಡುತ್ತಾನೆ. 

ಬದುಕು ಎಷ್ಟೊಂದು ವಿಚಿತ್ರ ಅಲ್ವಾ? ನೂರಾರು ಕನಸುಗಳನ್ನು ಕಂಡು ಪರಸ್ಪರ ಹಂಚಿಕೊಂಡ ನಾವು, ಒಂದಾಗಿ ಸಾಗಬೇಕೆಂಬ ಹಂಬಲದ ಕಿರುಬೆರಳು ಹಿಡಿದು ನಡೆದ ನಾವು, ಈಗ ಅಪ್ಪನ ಆಜ್ಞೆ , ಅಮ್ಮನ ಕಣ್ಣೀರು , ಸುತ್ತಲಿನವರ ಕುಹಕ, ಎಲ್ಲವೂ ನಮ್ಮಿಬ್ಬರ ಮುಂದೆ ತಂದು ಗುಡ್ಡೆಹಾಕಿದ್ದು ಬರೀ ನೋವು. ಅವರದೇ ದಾರಿಯಲ್ಲಿ ನಮ್ಮ ಬದುಕನ್ನು ನಡೆಸಬೇಕೆಂಬ ಅವರ ಹುಂಬ ಹಂಬಲಕ್ಕೆ ನಾವಿಬ್ಬರೂ ಬಲಿಯಾಗಿ ಹೋಗುತ್ತಿದ್ದೇವೆ. ಒಂದು ಕಾಲಕ್ಕೆ ಅವರಿಗೂ ಒಲವಾಗಿತ್ತು. ದೂರಾಗುವಾಗ ಹೀಗೇ ನೋವಾಗಿತ್ತು. ಯಾರೋ ತೋರಿದ ದಾರಿಯಲ್ಲಿ ನಡೆದು ಬಂದು, ಅದನ್ನೇ ಬದುಕೆಂದುಕೊಂಡು ಬದುಕಿಬಿಟ್ಟರು. ಅಪರಾತ್ರಿಯ ಬಿಕ್ಕಿನಲ್ಲಿ, ನಿತ್ಯದ ಯಾವುದೋ ಸಿಕ್ಕಿನಲ್ಲಿ ಕಳೆದುಹೋದ ಒಲವೊಂದರ ನೆನಪು ಅರೆ ಘಳಿಗೆ ಅವರಿಗೂ ಬಂದುಹೋಗುತ್ತದೆ. ಆಗೆಲ್ಲಾ ಆ ಒಲವು ದಕ್ಕಿದ್ದರೆ ಬದುಕು ಮತ್ತೇನೋ ಆಗಿರುತ್ತಿತ್ತು ಅನ್ನುವ ಸಂಭವನೀಯ ಸುಖದ ಕ್ಷಣವನ್ನು, ಜಗತ್ತಿಗೆ ಕಾಣದಂತೆ ಖಾಸಗಿಯಾಗಿ ಎತ್ತಿಟ್ಟುಕೊಂಡು ನಡೆದು ಬಿಟ್ಟವರು. ಈಗ ಅವರೇ ನಮ್ಮಿಬ್ಬರನ್ನು ದೂರ ಮಾಡುವ ಆತ್ಮವಂಚನೆಯ ಕೆಲಸಕ್ಕಿಳಿದು ಬಿಟ್ಟಿದ್ದಾರೆ. ಘನತೆ ಗೌರವ ಪ್ರತಿಷ್ಠೆಯ ಮಾತಾಡುವ ಇವರೆಲ್ಲಾ , ಒಡೆದ ಹೃದಯದ ಮೇಲೆ ಮನೆ ಕಟ್ಟಿ ಅದಕ್ಕೆ “ಪ್ರೀತಿ’ ಅಂತ ಹೆಸರಿಟ್ಟು ಹೆಮ್ಮೆ ಪಡುವ ಮುಖವಾಡಧಾರಿಗಳು. ಇವರ ತುಟಿಯಂಚಿನಲ್ಲಿರುವ ನಗು ಯಾವತ್ತೂ ಹೃದಯದಿಂದ ಹೊರಟಿದ್ದಲ್ಲ. ಕೇವಲ ಅವರವರ ಜೇಬುಗಳಿಂದ ಹೊರಟದ್ದು. 

ಅವರು ನೋಟುಗಳಿಂದ ಕೋಟೆ ಕಟ್ಟಿ ಭದ್ರಗೊಳಿಸಿದರಷ್ಟೇ ಬದುಕೆಂದುಕೊಂಡವರು. ಅದರಲ್ಲಷ್ಟೇ ಸುಖವಿದೆಯೆಂದು ನಂಬಿಕೊಂಡವರು. ಈಗ ನಾವು ಅವರ ಬದುಕಿನ ವ್ಯಾಪಾರದ ಸರಕಷ್ಟೇ. ಇಲ್ಲಿ ನನ್ನ ನಿನ್ನ ಕಣ್ಣೀರಿಗೆ ಯಾವ ಕಿಮ್ಮತ್ತೂ ಇಲ್ಲ. ಇವರೆಲ್ಲರಿಂದ ಓಡಿಹೋಗುವ ಮಾತಂತೂ ದೂರ ದೂರ. ಅವರು ಇಷ್ಟು ದಿನ ಸಾಕಿ, ಬೆಳೆಸಿ, ಕೊಡ ಮಾಡಿದ ಬದುಕಿನ ಪ್ರೀತಿಯ ಮೊತ್ತ ನಮ್ಮಿಬ್ಬರ ಪ್ರೀತಿಯ ಸಾವಿನ ಕಂದಾಯವನ್ನು ಕೇಳುತ್ತಿದೆ. ನೀನು ಯಾವತ್ತೂ ನನ್ನ ನಿರ್ಧಾರಗಳಿಗೆ ವಿಮುಖಳಾದವಳಲ್ಲ. ಇವತ್ತಿಗೂ ನೀನು ನಗುನಗುತ್ತಲೇ ನನ್ನಲ್ಲೇ ಮಾತುಗಳನ್ನು ಕೇಳಿ, ಕಣ್ಣಂಚಿಗೆ ಬಂದ ದುಃಖ ತುಳುಕದಂತೆ ತಡೆದುಕೊಂಡು, ಸುಮ್ಮನೆ ತದೇಕದಿಂದ ನೋಡುತ್ತಾ ಕುಳಿತವಳು. ನಾಳೆ ಸಿಗುತ್ತೇನೆ ಎನ್ನುವ ಹಳೆಯ ಭಂಗಿಯಲ್ಲೇ ಎದ್ದು ನಡೆದುಹೋಗುತ್ತಿದ್ದೀಯ! ಆದರೆ ನೀನು ಮತ್ಯಾವತ್ತೂ ನಂಗೆ ಸಿಗಲಾರೆ ಅನ್ನುವ ಸತ್ಯವನ್ನು ನಾನು ಅರಗಿಸಿಕೊಳ್ಳುವುದಾದರೂ ಹೇಗೆ ? ಈ ಆತ್ಮದಾಳದ ನೋವನ್ನ ಹೇಗಾದರೂ ತಾಳಲಿ ಹೇಳು? ಯಾಕೆ ಈ ಜಗತ್ತು ಇಷ್ಟೊಂದು ನಿರ್ಭಾವುಕ ? ಯಾಕೆ ಪ್ರೀತಿಯೆಂದರೆ ಜಗತ್ತು ಇಷ್ಟೊಂದು ಕ್ರೂರ ? ಹೇಳುವುದಾದರೂ ಯಾರಿಗೆ ? ಜಗತ್ತು ಪ್ರೇಮಿಗಳ ಪಾಲಿಗೆ ಯಾವತ್ತೂ ಕಿವುಡು. ಇನ್ನು ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ. ಜಗತ್ತು ನನಗೂ ಸ್ವಾರ್ಥಿಯಾವ ನಿರ್ಭಾವುಕನಾಗುವ ದಾರಿ ತೆರೆದು ಕಾಯುತ್ತಿದೆ. ಹೊರಡುತ್ತೇನೆ ಬೈ.                                     ಸಮಯಸಾಧಕ

 ಜೀವ ಮುಳ್ಳೂರು

ಟಾಪ್ ನ್ಯೂಸ್

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.