ನಿನ್ನನ್ನು ನೋಡ್ಬೇಕು ಅಂತಾನೇ ಮೈಸೂರಿಗೆ ಬಂದಿದ್ದೆ… 

Team Udayavani, Oct 9, 2018, 6:00 AM IST

shutterstock686786530-copy.jpg

ನೀನು ಸಿಗದಿದ್ದರೆ, ನಾನು ಸತ್ತೋಗುತ್ತೇನೆ ಅಂತೆಲ್ಲಾ ನಾನು ಹೇಳುವುದಿಲ್ಲ, ಏಕೆಂದರೆ ನನ್ನನ್ನು ಪ್ರೀತಿಸಲು ಸಹ ಒಂದು ಕುಟುಂಬವಿದೆ. ಆ ಕುಟುಂಬದವರ ಪ್ರೀತಿ ಪಡೆಯಲು ನಿನಗೆ ಅದೃಷ್ಟವಿಲ್ಲ ಅಂತ ಭಾವಿಸಿ ಸುಮ್ಮನಾಗುತ್ತೀನಿ ಅಷ್ಟೇ. 

ಹಾಯ್‌ ತಿಕ್ಲಿ, 
ಐದು ವರ್ಷಗಳ ಪರಿಚಯದಲ್ಲಿ ನಾನು ಸ್ನೇಹಿತನಾಗಿಯೇ ಉಳಿದಿದ್ದೇನೆ. ಆದರೆ, ಪದವಿಯ ಮೂರು ವರ್ಷಗಳ ಒಡನಾಟದಲ್ಲೇ ನಿನ್ನ ಮೇಲೆ ವಿಪರೀತ ಪ್ರೀತಿಯಾಗಿಬಿಟ್ಟಿದೆ. ಈ ಪ್ರೀತಿಯ ವಿಷಯ ನನ್ನ ಅರಿವಿಗೆ ಬಂದದ್ದು ಪದವಿ ಮುಗಿದ ನಂತರವೇ. ಯಾಕೆಂದರೆ, ಡಿಗ್ರಿಯಲ್ಲಿದ್ದಾಗ ದಿನಾಲೂ ಪರಸ್ಪರರನ್ನು ನೋಡುತ್ತಿದ್ದೆವು. ಹೆಚ್ಚಾಗಿ ಮಾತನಾಡದಿದ್ದರೂ ದಿನವೂ ಭೇಟಿಯಾಗುತ್ತಿದ್ದೆವು. ನೋಡುತ್ತಿದ್ದೆವು. 

ಆದರೆ ಪದವಿ ಮುಗಿದ ಮೇಲೆ ನಾವು ದಿನವೂ ಭೇಟಿಯಾಗಲು ಸಾಧ್ಯವಿಲ್ಲ ಎಂಬುದು ಅರಿವಾಯ್ತು. ಮತ್ತೆ ನೀನು ಸಿಗುತ್ತೀಯೋ, ಇಲ್ಲವೋ ಎಂಬ ಭಯ ಶುರುವಾಗಿದ್ದು ಆಗಲೇ. ಡಿಗ್ರಿ ಮುಗಿಯಿತು. ಮುಂದೇನು ಮಾಡುವುದು ಎಂಬ ಪ್ರಶ್ನೆಯೂ ನನ್ನನ್ನು ಅಷ್ಟಾಗಿ ಕಾಡಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಿನ್ನ ನೆನಪುಗಳು ನನ್ನನ್ನು ಪದೇ ಪದೆ ಕೆಣಕುತ್ತಿದ್ದವು. ನಿನ್ನನ್ನು ಬಿಟ್ಟು ಬದುಕಲಾಗುವುದಿಲ್ಲ ಅನ್ನಿಸುವಷ್ಟರ ಮಟ್ಟಿಗೆ ನನಗೇ ಗೊತ್ತಿಲ್ಲದೆ ನಾನು ನಿನ್ನನ್ನು ಹಚ್ಚಿಕೊಂಡಿದ್ದೆ. 

ನೀನು ಮುಂದೆ ಸ್ನಾತಕೋತ್ತರ ಓದಲೆಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀಯೆಂದು ಗೊತ್ತಾಯ್ತು. ತಕ್ಷಣವೇ ನಾನೂ ಆನ್‌ಲೈನ್‌ ಮೂಲಕ ಮೈಸೂರು ವಿ.ವಿ.ಗೆ ಅರ್ಜಿ ಸಲ್ಲಿಸಿದೆ. ಕೆಲದಿನಗಳ ನಂತರ ಪ್ರವೇಶ ಪರೀಕ್ಷೆ ದಿನಾಂಕ ನಿಗದಿಯಾಯಿತು. ಪ್ರವೇಶ ಪರೀಕ್ಷೆ ನೆಪದಲ್ಲಿ ನಾನು ಮೈಸೂರಿಗೆ ಬಂದೆ. ನಿಜ ಹೇಳಬೇಕೆಂದರೆ, ನಿನ್ನನ್ನು ನೋಡಲೆಂದೇ ಮೈಸೂರಿಗೆ ಬಂದಿದ್ದೆ! ನನ್ನ ಅದೃಷ್ಟಕ್ಕೆ, ಪರೀಕ್ಷೆ ಬರೆಯಲು ನಾವಿಬ್ಬರೂ ಒಂದೇ ಕೊಠಡಿಯಲ್ಲಿ ಕೂರಬೇಕಾಯ್ತು. ಅವತ್ತು ಅರ್ಧ ಸಮಯ ನಿನ್ನನ್ನು ನೋಡುವುದರಲ್ಲಿ, ಇನ್ನರ್ಧ ವೇಳೆಯನ್ನು ಪರೀಕ್ಷೆ ಬರೆಯುವುದರಲ್ಲಿ ಕಳೆದೆ! ಪ್ರಶ್ನೆ ಪತ್ರಿಕೆ ನೋಡಿದಾಗಲೇ ಗೊತ್ತಾಗಿತ್ತು ನನಗೆ ಇಲ್ಲಿ ಸೀಟ್‌ ಸಿಗುವುದಿಲ್ಲ ಅಂತ! 

ಈ ನಡುವೆ ಧೈರ್ಯ ಮಾಡಿ ನಿನ್ನ ಬಳಿ ಪ್ರೇಮನಿವೇದನೆ ಮಾಡಿಕೊಂಡೆ. ಅದನ್ನು ನೀನು ನಯವಾಗಿ ತಿರಸ್ಕರಿಸಿಬಿಟ್ಟೆ. ಆದರೂ, ಸ್ನೇಹಿತನೆಂದೇ ಭಾವಿಸಿ ಮೊದಲಿನಂತೆಯೇ ನಡೆದುಕೊಳ್ಳುತ್ತಿದ್ದೆ, ಮಾಮೂಲಿಯಾಗಿಯೇ ಮಾತನಾಡಿಸುತ್ತಿದ್ದೆ. ಆದರೆ ನಾನು ಮಾತ್ರ ಹಳೆಯ ಕನಸಿಗೆ ನೀರು ಎರೆಯುತ್ತಲೇ ಇದ್ದೇನೆ. ಸ್ನಾತಕೋತ್ತರ ಪದವಿಗೆ ಸೇರಿ ಒಂದೂವರೆ ವರ್ಷಗಳಾಯ್ತು. ನನ್ನ ಪ್ರೀತಿಗೆ ಈಗ ಐದು ವರ್ಷ ವಯಸ್ಸು. ನೀನು ಮಾತ್ರ ಬದಲಾಗಿಲ್ಲ. ನನ್ನ ಪ್ರೀತಿಯನ್ನು ಒಪ್ಪಿಕೊಳ್ತೀಯಾ, ಇಲ್ಲವಾ ಗೊತ್ತಿಲ್ಲ. 
ನೀನು ಸಿಗದಿದ್ದರೆ, ನಾನು ಸತ್ತೋಗುತ್ತೇನೆ ಅಂತೆಲ್ಲಾ ನಾನು ಹೇಳುವುದಿಲ್ಲ, ಏಕೆಂದರೆ ನನ್ನನ್ನು ಪ್ರೀತಿಸಲು ಸಹ ಒಂದು ಕುಟುಂಬವಿದೆ. ಆ ಕುಟುಂಬದವರ ಪ್ರೀತಿ ಪಡೆಯಲು ನಿನಗೆ ಅದೃಷ್ಟವಿಲ್ಲ ಅಂತ ಭಾವಿಸಿ ಸುಮ್ಮನಾಗುತ್ತೀನಿ. 

ಸದಾ ನಿನ್ನನ್ನೇ ಪ್ರೀತಿಸುವ ತಿಕ್ಲ
– ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.