ತಪ್ಪು ಮಾಡಿರೋನು ನೀನು ಸಾರೀ ಕೇಳಿರೋಳು ನಾನು!
Team Udayavani, Dec 5, 2017, 1:38 PM IST
ಮೊನ್ನೆ ನೀನೇ ಸಿನಿಮಾಕ್ಕೆ ಕರೆದೆ. ಬರಲ್ಲ ಅನ್ನಲು ನಂಗೆ ಕಾರಣವೇ ಇರಲಿಲ್ಲ. ಖುಷಿಯಿಂದಲೇ ನಡೆದುಬಂದೆ. ಮೂಲೇಲಿ ಕೂರೋಣ ಅಂದೆಯಲ್ಲ, ಅದಕ್ಕೂ ನನ್ನ ತಕರಾರು ಇರಲಿಲ್ಲ. ಆದ್ರೆ ಸಿನಿಮಾ ಶುರುವಾದದ್ದೇ ತಡ, ನಿನ್ನ ತುಂಟಾಟ ಶುರುವಾಯಿತು.
ಪದ್ದು ಡಿಯರ್,
ಹೌದು. ಮತ್ತೆ ನಾನೇ ಬರೀತಿದೀನಿ. ಇವತ್ತಲ್ಲ, ಇನ್ನೂ ಐದಾರು ದಿನ ನೀನು ನಂಜೊತೆ ಮಾತಾಡಲ್ಲ. ಫೋನ್ ಮಾಡಲ್ಲ. ಮೇಲ್ ಕಳ್ಸೊಲ್ಲ. ಮುದ್‌ಮುದ್ದಾಗಿ ನಗಲ್ಲ. ಸುಮುಮ್ನೆ ರೇಗಲ್ಲ. ಮಿಸ್ ಕಾಲ್ ಕೊಟ್ಟು ಕಾಡಲ್ಲ. ಸದ್ದಿಲ್ಲದೆ ಮುತ್ತಿಟ್ಟು ಸಾರಿ ಕೇಳಲ್ಲ. ನಮ್ಮಮ್ಮಂಗೆ ಗೊತ್ತಾಗದ ಹಾಗೆ ಮಲ್ಲಿಗೆ ಹೂ ತಂದುಕೊಡಲ್ಲ. ಅಸಲಿಗೆ ನೀನು ಒಂದಿಡೀ ವಾರ ನಮ್ಮ ಮನೆಗೆ ಬರೋದೇ ಇಲ್ಲ. ಇಷ್ಟೆಲ್ಲ ಗೊತ್ತಿರೋದ್ರಿಂದಲೇ ನಾನೇ ಬರೀತಿದೀನಿ. ಸಾರಿ ಪದ್ದೂ, ಸಾರಿ.
ನಿಂಗೇ ಗೊತ್ತಲ್ಲ, ತಪ್ಪು ನಿನ್ನದೇ ಇದೆ. ಆದರೆ ಸಾರಿ ಕೇಳ್ತಿರೋಳು ನಾನು! ನೀನು ತಪ್ಪು ಮಾಡಿರೋದೂ ಅಲ್ಲದೆ, ಮುನಿದು ಕೂತಿದೀಯ. ಮಾತು ಬಿಟ್ಟಿದೀಯ. ಒಳ್ಳೇ ಹಳ್ಳಿ ಗುಗ್ಗು ನೀನು. ಹೋಗೊಗೆ ಎಂದು ಗುಮು ಗುಮು ಅಂತ ರೇಗಿದೀಯ. ಮದುವೆ ಆಗೋಕೆ ಮುಂಚೆ ಒಂದು ಮುತ್ತು ಕೊಟ್ರೆ ಆಕಾಶ ಬಿದ್ದೋಗುತ್ತಾ ಅಂತ ಈಗ ಕೂಡ ಕೇಳ್ತಾನೇ ಇದೀಯ. ಇದು ನ್ಯಾಯವಾ ದೊರೇ ?
ನಮು ಎಂಗೇಜ್ಮೆಂಟ್ ಆಗಿದೆ. ಮೂರು ತಿಂಗಳ ನಂತರ ಮದುವೆ ಅಂತ ಕೂಡ ನಿರ್ಧಾರವೂ ಆಗಿದೆ. ಹೀಗಿರುವಾಗ, ನಾವು ಜತೆ ಜತೆಯಾಗಿ ಸಿನಿಮಾಕ್ಕೆ ಹೋದರೆ, ಪಾರ್ಕಲ್ಲಿ ಹರಟೆ ಹೊಡೆದ್ರೆ, ಫ್ರೆಂಡ್ಸ್ ಮನೆಗಳಿಗೆ ಒಟ್ಟಾಗಿ ಹೋಗಿಬಂದ್ರೆ ತಪ್ಪೇನೂ ಇಲ್ಲ. ಇದು ನಿನ್ನ ವಾದ ತಾನೆ? ಅದನ್ನ ನಾನೂ ಒಪ್ತಿàನಿ. ನಿನ್ನ ಒತ್ತಾಯದ ಮೇರೆಗೆ, ಡಿಗ್ರಿ ಮುಗಿಯುವ ಮೊದಲೇ ನಾನು ಮದುವೆ ಆಗೋಕೆ ಒಪ್ಪಿದೀನಿ.
ನೀನು ಬೈಕ್ ಓಡಿಸುವಾಗ ಬೇಕೆಕು ಅಂತಲೇ ಹೆಗಲು ತಬ್ಬಿ ಕೂತ್ಕೊàತೀನಿ. ಒಂದು ಬೈಕನ್ನ, ಇನ್ನೊಂದು ಬಸ್ಸನ್ನ ನೀನು ಓವರ್‌ಟೇಕ್ ಮಾಡಿದಾಗ ನೀನು ಬೆಚ್ಚಿ ಬೀಳುವ ಹಾಗೆ ಮುತ್ತುಕೊಟ್ಟಿದ್ದೆ. ಇಲ್ಲ, ನಾನು ಎಲ್ಲೂ ಸಭ್ಯತೆಯ ಚೌಕಟ್ಟು ಮೀರಲಿಲ್ಲ. ಅಂಥ ನನ್ನನ್ನ ನೀನು ಹೇಗೆ ನಡೆಸಿಕೊಂಡೆ ಹೇಳು? ಮೊನ್ನೆ ನೀನೇ ಸಿನಿಮಾಕ್ಕೆ ಕರೆದೆ. ಬರಲ್ಲ ಅನ್ನಲು ನಂಗೆ ಕಾರಣವೇ ಇರಲಿಲ್ಲ. ಖುಷಿಯಿಂದಲೇ ನಡೆದುಬಂದೆ.
ಮೂಲೇಲಿ ಕೂರೋಣ ಅಂದೆಯಲ್ಲ, ಅದಕ್ಕೂ ನನ್ನ ತಕರಾರು ಇರಲಿಲ್ಲ. ಆದ್ರೆ ಸಿನಿಮಾ ಶುರುವಾದದ್ದೇ ತಡ, ನಿನ್ನ ತುಂಟಾಟ ಶುರುವಾಯಿತು. ನಾನು ಮೌನವಾಗಿದ್ದಷ್ಟೂ ನಿನ್ನ ತರ್ಲೆತನ ಹೆಚ್ಚುತ್ತಲೇ ಹೋಯಿತು. ಹೋಗಲಿ ಅಂತ ಅದನ್ನೆಲ್ಲ ಸಹಿಸಿಕೊಂಡರೆ- ಸಿನಿಮಾ ಮುಗಿದದ್ದೇ ತಡ, ಲಾಲ್‌ಭಾಗ್ ಕಡೆಗೆ ಬೈಕು ತಿರುಗಿಸಿದೆಯಲ್ಲ, ಅಲ್ಲಾದ್ರೂ ಗಂಭೀರವಾಗಿ ಇರಬಾರ್ದಾ ನೀನು ? ಶುದ್ಧ ರೋಡ್ ರೋಮಿಯೋ ಥರಾ ಆಡಿಬಿಟ್ಟೆ..
ಸ್ಟುಪಿಡ್, ನಂಗೆ ವಿಪರೀತ ಸಿಟ್ಟು ಬಂದದ್ದೇ ಆಗ. ಮೊದಲೇ ಹೇಳಿದ್ದೆನಲ್ಲ- ಸಿಟ್ಟು ಬಂದಾಗ ನಂಗೆ ಕಂಟ್ರೋಲ್ ಮಾಡಿಕೊಳ್ಳಲು ಆಗಲ್ಲ. ಅಂಥ ಸಂದರ್ಭದಲ್ಲೆಲ್ಲ ಮುಲಾಜಿಲ್ಲದೆ ಬೈದು ಬಿಡ್ತೇನೆ. ಪ್ರಾಮಿಸ್, ನನಗೆ ನಾಟಕ ಆಡೋಕೆ ಬರಲ್ಲ. ಮನಸ್ಸಿಗೆ ಬೇಸರ ಆಗಿದ್ರೂ ತೋರಿಕೆಯ ಮುಖವಾಡ ಧರಿಸಿ ನಗುತ್ತಾ ಮಾತಾಡೋಕೂ ಬರಲ್ಲ. ಗಂಭೀರವಾಗಿ ಇದ್ದಾಗ ನಮ್ಮ ವ್ಯಕ್ತಿತ್ವಕ್ಕೆ ಒಂದು ಮೆರುಗು ಬರುತ್ತೆ.
ಅಂಥದೊಂದು ಡಿಗ್ನಿಫೈಡ್ ಭಾವವನ್ನು ನಾನು ಯಾವತ್ತೂ ಇಷ್ಟಪಡ್ತೇನೆ. ಎಲ್ಲಿ ಏನು ತಪ್ಪಾಗಿದೆ ಅಂತ ನೀನು ಈಗಾದ್ರೂ ಅರ್ಥ ಮಾಡಿಕೊಂಡ್ರೆ ಸಾಕು, ನನಗೆ ಅಷ್ಟೇ ಸಾಕು. ಈ ಪತ್ರ ಓದಿದ ನಂತರ ಒಂದ್ಸಲ ಮಾತಾಡ್ಬೇಕು, ಇನ್ನೊಂದ್ಸಲ ಲೈಟಾಗಿ ಜಗಳ ಮಾಡ್ಬೇಕು. ಅವಳಿಗೆ ಆವಾಜ್ ಹಾಕೆಕು ಅಂತೆಲ್ಲಾ ನಿನಗೆ ಅನಿಸಿರುತ್ತೆ. ಸಂಕೋಚ ಯಾಕೆ? ಕಾಲ್ ಮಾಡು….
ನೀನೇ ಕರೆದಂತೆ
ಅತ್ತೆ ಮಗಳು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.