ಟೆನ್ ಟೆನ್ ಟೆನ್
Team Udayavani, Aug 29, 2019, 5:00 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1. ಇನ್ಫೋಸಿಸ್ ಸಾಫ್ಟ್ವೇರ್ ಸಂಸ್ಥೆಯ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಪೂರ್ಣ ಹೆಸರು, ನಾಗವಾರ ರಾಮರಾವ್ ನಾರಾಯಣ ಮೂರ್ತಿ.
2. ಅವರು ಹುಟ್ಟಿದ್ದು ಈಗಿನ ಚಿಕ್ಕಬಳ್ಳಾಪುರ (ಆಗಿನ ಕೋಲಾರ) ಜಿಲ್ಲೆಯ ಶಿಡ್ಲಘಟ್ಟದಲ್ಲಿ.
3. ಅವರನ್ನು “ಭಾರತದ ಮಾಹಿತಿ ತಂತ್ರಜ್ಞಾನದ ಜನಕ’ ಎಂದು ಗುರುತಿಸಲಾಗುತ್ತದೆ.
4. ಐಐಟಿ ಕಾನ್‌ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಓದಿರುವ ಅವರು, 1976ರಲ್ಲಿ ಸಾಫೊóàನಿಕ್ಸ್ ಎಂಬ ಕಂಪನಿ ಪ್ರಾರಂಭಿಸಿದ್ದರು.
5. ಆದರೆ, ಆ ಕಂಪನಿ ಒಂದೂವರೆ ವರ್ಷಗಳಲ್ಲಿಯೇ ಮುಚ್ಚಲ್ಪಟ್ಟಿತು. ಆಗ ಅವರು, ಆರು ಜನ ಸ್ನೇಹಿತರೊಡಗೂಡಿ ಇನ್ಫೋಸಿಸ್ ಕಂಪನಿಯನ್ನು ಹುಟ್ಟು ಹಾಕಿದರು.
6. ಇನ್ಫೋಸಿಸ್ ಸ್ಥಾಪನೆಗೆ ಮೂರ್ತಿ ಅವರು, ತಮ್ಮ ಮಡದಿ ಸುಧಾ ಮೂರ್ತಿ ಅವರಿಂದಲೇ 10 ಸಾವಿರ ರೂ. ಸಾಲ ಪಡೆದಿದ್ದರು.
7. 1990ರಲ್ಲಿ ಇನ್ಫೋಸಿಸ್ ನಷ್ಟಕ್ಕೆ ಸಿಲುಕಿ ಮುಚ್ಚಲ್ಪಡುವ ಸ್ಥಿತಿ ಬಂದಾಗಲೂ ಎದೆಗುಂದದ ಮೂರ್ತಿಯವರು ಮತ್ತೆ ಕಂಪನಿಯನ್ನು ಬಲಿಷ್ಟಗೊಳಿಸಿದರು.
8. ಸರಳ ಜೀವನ ನಡೆಸುವ ಮೂರ್ತಿಯವರು ಪ್ರತಿ ತಿಂಗಳು ತಪ್ಪದೇ ಖರ್ಚು ಮಾಡುವುದು ಪುಸ್ತಕ ಖರೀದಿಗೆ ಮಾತ್ರ.
9. ಮಡದಿ ಸುಧಾಗೆ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡುವ ಮೂರ್ತಿ, ಪ್ರತಿ ಬಾರಿಯೂ ಮೊದಲ ಪುಟದಲ್ಲಿ “ಟು ಯು, ಫ್ರಂ ಮಿ’ ಎಂದು ಬರೆಯುತ್ತಾರಂತೆ.
10. ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಸಂಗ್ರಹ: ಪ್ರಿಯಾಂಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.