ಮರದಲ್ಲಿ ನೇತಾಡುವ ಗೊಂಬೆಗಳು
Team Udayavani, Oct 4, 2018, 6:00 AM IST
ದೇವರಿಗೆ ಹರಕೆ ಕಟ್ಟಿ, ಅಶ್ವತ್ಥನ ಮರಕ್ಕೆ ಅರಿಶಿನ ದಾರ ಕಟ್ಟೋದನ್ನು ನೋಡಿರುತ್ತೀರಿ. ಆದರೆ, ಮೆಕ್ಸಿಕೋದ ಈ ದ್ವೀಪದಲ್ಲಿರೋ ಮರಗಳಿಗೆ ಹಳೆಯ ಗೊಂಬೆಗಳನ್ನು ಕಟ್ಟಲಾಗುತ್ತದೆ. ಪ್ರತಿ ಮರದಲ್ಲೂ ನೇತಾಡುತ್ತಿರೋ ಈ ಗೊಂಬೆಗಳು ಮಾತಾಡುತ್ತವೆ ಅಂತ ನಂಬುವವರೂ ಇದ್ದಾರೆ…
ಸುತ್ತಲೂ ನೀಲಿ ಸಮುದ್ರ, ಹಸಿರು ತುಂಬಿದ ಗಿಡಗಳು, ಸುಂದರ ವಾತಾವರಣ… ದ್ವೀಪ ಎಂದಾಕ್ಷಣ ಕಣ್ಮುಂದೆ ಸುಳಿಯುವ ಚಿತ್ರಣವಿದು. ಅದಕ್ಕೆಂದೇ ದ್ವೀಪ, ಪ್ರಕೃತಿ ಪ್ರಿಯರ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆದರೆ, ಪ್ರವಾಸಿಗರನ್ನು ಬೆಚ್ಚಿಬೀಳಿಸುವಂತ ದ್ವೀಪವೊಂದಿದೆ. ಅದಿರುವುದು ಮೆಕ್ಸಿಕೋದ ಕ್ಯಾನೊನ್ ಎಂಬ ಪುಟ್ಟ ಹಳ್ಳಿಯಲ್ಲಿ. ಈ ಪ್ರದೇಶ ಭಯ ಹುಟ್ಟಿಸುವಂತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಮರಗಳಲ್ಲಿ ನೇತಾಡುವ ಗೊಂಬೆಗಳು!
ಗೊಂಬೆಗಳ ಹಿಂದಿನ ಕಥೆ
ಈ ಗೊಂಬೆಗಳ ಹಿಂದೊಂದು ರೋಚಕ ಕಥೆಯಿದೆ. ಜೂಲಿಯನ್ ಸಂತಾನ ಬರೆರಾ ಎಂಬುವವರು ಒಮ್ಮೆ ಈ ದ್ವೀಪದಲ್ಲಿ ಸುತ್ತಾಡುತ್ತಿದ್ದರು. ಹೆಣ್ಣುಮಗುವೊಂದು ನೀರಿನಲ್ಲಿ ತೇಲಿಕೊಂಡು ಹೋಗುವುದು ಅವರ ಕಣ್ಣಿಗೆ ಬಿತ್ತು. ಜೊತೆಗೇ ಒಂದು ಗೊಂಬೆಯೂ ತೇಲುತ್ತಿತ್ತು. ಪ್ರಯತ್ನಪಟ್ಟರೂ ಅವರಿಗೆ ಆ ಮಗುವನ್ನು ಕಾಪಾಡಲು ಸಾಧ್ಯವಾಗಲಿಲ್ಲ, ಗೊಂಬೆ ಮಾತ್ರ ಅವರ ಕೈಗೆ ಸಿಕ್ಕಿತು. ಮಗುವನ್ನು ರಕ್ಷಿಸಲಾಗದ ಕೊರಗು ಅವರನ್ನು ಕಾಡಿದಾಗ, ಜೂಲಿಯನ್ ಆ ಗೊಂಬೆಯನ್ನು ಮೇಲಕ್ಕೆತ್ತಿ ತಂದು ಮರಕ್ಕೆ ನೇತು ಹಾಕಿದರು. ಮುಂದೆ ಇದೇ ಪರಿಪಾಠವನ್ನು ಸ್ಥಳೀಯರು ಮುಂದುವರಿಸಿಕೊಂಡು ಬಂದರು. ಇಲ್ಲಿರುವ ಗೊಂಬೆಗಳೆಲ್ಲವೂ ಜನರ ಆಪ್ತರ ನೆನಪನ್ನು ತಮ್ಮಲ್ಲೇ ಉಳಿಸಿಕೊಂಡಿವೆ.
ನೀರಿನಲ್ಲಿ ಮುಳುಗಿದ ಜೂಲಿಯನ್
ಅವರು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಎಲ್ಲೇ ಹಳೆಯ ಗೊಂಬೆಗಳನ್ನು ಕಂಡರೂ ಅವುಗಳನ್ನು ತಂದು ಈ ದ್ವೀಪದ ಮರಗಳಿಗೆ ನೇತು ಹಾಕುವುದು ಜೂಲಿಯನ್‌ರ ಹವ್ಯಾಸವಾಗಿಬಿಟ್ಟಿತು. ಅವರು ಐವತ್ತು ವರ್ಷಗಳಿಂದ ಸಂಗ್ರಹಿಸಿದ ಗೊಂಬೆಗಳೆಲ್ಲಾ ಈ ಮರಗಳಲ್ಲಿವೆಯಂತೆ. ವಿಚಿತ್ರವೆಂದರೆ, 2001ರಲ್ಲಿ ಜೂಲಿಯನ್ ಕೂಡ ಇದೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು. ಅಲ್ಲಿಂದ ಇಲ್ಲಿಯವರೆಗೂ ಇದೊಂದು ಜನಪ್ರಿಯ ಸ್ಥಳವಾಯಿತು.
ಅಲ್ಲದೆ ಅನೇಕ ಗಾಳಿಸುದ್ದಿಗಳು ಹರಡಿದವು. ಈ ಗೊಂಬೆಗಳೆಲ್ಲ ಮಾತನಾಡುತ್ತವಂತೆ. ನೀರಿನಲ್ಲಿ ಮುಳುಗಿ ಸತ್ತ ಆ ಹುಡುಗಿಯ ಆತ್ಮ, ದ್ವೀಪದಲ್ಲಿ ಸುತ್ತುತ್ತಿದೆ ಎಂದು ನಂಬುವವರೂ ಇದ್ದಾರೆ. ಈಗಲೂ ರಾತ್ರಿ ಸಮಯದಲ್ಲಿ ಈ ಪ್ರದೇಶಕ್ಕೆ ಬರಲು ಜನ ಹೆದರುತ್ತಾರೆ.
– ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!
Udupi: ಶ್ರೀ ಕೃಷ್ಣ ಮಠದಲ್ಲಿ ವೈಭವದ ಮಕರ ಸಂಕ್ರಾಂತಿ ಉತ್ಸವ ಸಂಪನ್ನ
Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!
Cast Census: ಜಾತಿಗಣತಿ ವರದಿ ಚರ್ಚೆಯ ಈಗಿನ ವಿಚಾರ, ಅಂಕಿ-ಅಂಶಗಳೆಲ್ಲ ಊಹಾಪೋಹವಷ್ಟೇ: ಸಿಎಂ
Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.