ಸೀಟ್ ಬೆಲ್ಟ್ ಕಥೆ
Team Udayavani, Mar 5, 2020, 5:28 AM IST
ಹಿಂದಿನ ಕಾರುಗಳಲ್ಲಿ ಸೀಟ್ ಬೆಲ್ಟ್ ಇರುತ್ತಿರಲಿಲ್ಲ. ಇಂದಿನ ಕಾರುಗಳಲ್ಲಿ ಸೀಟ್ ಬೆಲ್ಟ್ ಇದ್ದರೂ ಕೆಲವರು ಅದನ್ನು ಬಳಸುತ್ತಿಲ್ಲ ಎನ್ನುವುದು ವಿಪರ್ಯಾಸ!
ಇಂದು ಗಂಟೆಗೆ ನೂರಾರು ಕಿ.ಮೀ. ಹೋಗುವ ಕಾರುಗಳು ಸಾಮಾನ್ಯವಾಗಿವೆ. ಬಹಳ ಹಿಂದೆ ಕಾರುಗಳು ಈಗಿನಷ್ಟು ವೇಗಯುತವಾಗಿರಲಿಲ್ಲ. ಗಂಟೆಗೆ 20- 30 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದರೂ, ಆಗಿನ ಕಾಲದಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ಪ್ರಾಣಾಂತಿಕವಾಗಿರುತ್ತಿದ್ದವು. ಏಕೆಂದರೆ ಅಂದಿನ ಕಾರುಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿರಲಿಲ್ಲ. ಅಲ್ಲದೆ ಕಾರುಗಳು ತುಂಬಾ ದೊಡ್ಡಕ್ಕಿರುತ್ತಿದ್ದವು.
ವೈದ್ಯರ ಆಗ್ರಹ
1885ರಲ್ಲಿ ಅಮೆರಿಕದ ಎಡ್ವರ್ಡ್ ಕ್ಲಾಗ್‌ಹಾರ್ನ್ ಎಂಬಾತ ಮೊತ್ತ ಮೊದಲ ಬಾರಿಗೆ ಬೆಲ್ಟ್ ನ ಪೇಟೆಂಟ್ ಪಡೆದನು. ಪೇಟೆಂಟ್ ಎಂದರೆ ಹಕ್ಕುಸ್ವಾಮ್ಯ. ಯಾವ ವಸ್ತುವಿಗೆ ಪೇಟೆಂಟ್ ಪಡೆಯಲಾಗಿರುತ್ತದೆಯೋ ಆ ವಸ್ತುವನ್ನು ಇನ್ನೊಬ್ಬ ವ್ಯಕ್ತಿ ಬಳಕೆ ಮಾಡಲು ಸಾಧ್ಯವಿಲ್ಲ. ಪೇಟೆಂಟ್ ಯಾರ ಹೆಸರಿನಲ್ಲಿ ಇರುತ್ತದೆಯೋ ಆತನ ಅನುಮತಿಯನ್ನು ಪಡೆದ ನಂತರವೇ ಆ ವಸ್ತುವನ್ನು ಬಳಸಬಹುದು. 1930ನೇ ಇಸವಿಯಲ್ಲಿ ವೈದ್ಯರು ಕಾರುಗಳಲ್ಲಿ ಸೀಟ್‌ಬೆಲ್ಟನ್ನು ಅಳವಡಿಸುವಂತೆ ಆಗ್ರಹಿಸತೊಡಗಿದರು. ಅಲ್ಲಿಯ ತನಕ ಸೀಟ್ ಬೆಲ್ಟಾಗಳು ಕೇವಲ ರೇಸ್ ಕಾರುಗಳಲ್ಲಿ ಮಾತ್ರವೇ ಇರುತ್ತಿತ್ತು. ಆದರೆರಸ್ತೆ ಮೇಲಿನ ಬಹುತೇಕ ಅಪಘಾತಗಳಲ್ಲಿ ಹೆಚ್ಚಿನ ಪ್ರಮಾಣ ಸೀಟು ಬೆಲ್ಟಾ ಇದ್ದಿದ್ದರೆ ತಡೆಯಬಹುದಿತ್ತು ಎಂಬುದು ಆ ವೇಳೆಗಾಗಲೇ ವೈದ್ಯರ ಗಮನಕ್ಕೆ ಬಂದಿತ್ತು. ಹೀಗಾಗಿಯೇ ಅವರು ಕಾರು ತಯಾರಕರಲ್ಲಿ ಸೀಟು ಬೆಲ್ಟನ್ನು ಕಡ್ಡಾಯವಾಗಿ ನೀಡುವಂತೆ ಆಗ್ರಹಿಸತೊಡಗಿದ್ದರು.
ಪೇಟೆಂಟ್ ರಹಿತ
ಮೊದಲ ಆಧುನಿಕ ಸೀಟ್ ಬೆಲ್ಟನ್ನು ಆವಿಷ್ಕರಿಸಿದ್ದು ನಿಲ್ಸ್ ಬೋಹ್ಲಿನ್ ಎಂಬ ಎಂಜಿನಿಯರ್. ಅವರು ಹೆಸರಾಂತ ಆಟೋಮೊಬೈಲ್ ಸಂಸ್ಥೆ ವೋಲ್ವೋನಲ್ಲಿ ಕೆಲಸ ಮಾಡುತ್ತಿದ್ದರು. ಈ ಸೀಟ್ ಬೆಲ್ಟನ್ನು ಸಂಸ್ಥೆ ಪೇಟೆಂಟ್ ಪಡೆದು ಬೇರೆ ಯಾವ ಕಾರು ಕಂಪನಿಗಳೂ ಅದನ್ನು ಬಳಸದಂತೆ ಮಾಡಬಹುದಿತ್ತು. ಆದರೆ, ಅವರು ಪೇಟೆಂಟ್ ಪಡೆದುಕೊಳ್ಳಲಿಲ್ಲ. ಇದರಿಂದಾಗಿ ಈ ಆವಿಷ್ಕಾರವನ್ನು ಇತರೆ ಕಾರು ಕಂಪನಿಯವರೂ ಬಳಸಿಕೊಳ್ಳುವಂತಾಯಿತು. ಉಪಕರಣಗಳನ್ನು ಆವಿಷ್ಕರಿಸಲು ಬುದ್ಧಿಮತ್ತೆ ಇದ್ದರೆ ಸಾಲದು, ಅದು ಸರ್ವರಿಗೂ ಸಿಗಲಿ ಎನ್ನುವ ಅಂತಃಕರಣವೂ ಇರಬೇಕು! ಇಂದು, ಜಗತ್ತಿನಾದ್ಯಂತ ಕೋಟ್ಯಂತರ ಜನರ ಪ್ರಾಣಗಳು ಈ ಆವಿಷ್ಕಾರದಿಂದ ಉಳಿದಿವೆ ಎನ್ನುವುದು ಸೀಟ್ ಬೆಲ್ಟ್ ನ ಹೆಗ್ಗಳಿಕೆ.
ಇನ್ನೊಂದು ಸಮಸ್ಯೆ
ಕಾರುಗಳು ಸೀಟ್ ಬೆಲ್ಟಿನೊಡನೆ ಬಂತು ಎನ್ನುವುದೇನೋ ಸರಿ. ಆದರೆ ಇ°ಂದು ಸಮಸ್ಯೆ ಇದೇ ವೇಲೆ ಎದುರಾಗಿತ್ತು. ಚಾಲಕರು ಸೀಟ್‌ಬೆಲ್ಟನ್ನು ಧರಿಸುತ್ತಿರಲಿಲ್ಲ. ಆಗ ಸರ್ಕಾರ ಅದನ್ನು ಕಾನೂನಿನಡಿ ಕಡ್ಡಾಯ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿತು. ಸೀಟ್ ಬೆಲ್ಟಾ ತೊಡದೆ ವಾಹನ ಚಲಾಯಿಸುವುದು ನಿಯಮ ಉಲ್ಲಂ ಸಿದಂತೆ ಎಂದು ದಂಡವನ್ನು ಹೇರಿತು. ಸೀಟ್ ಬೆಲ್ಟ್ ತೊಡುವುದನ್ನು ಕಡ್ಡಾಯ ಮಾಡಿದ ಮೊದಲ ದೇಶ ಜೆಕೋಸ್ಲೋವಾಕಿಯ.
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.