ಅಂತರಿಕ್ಷಕ್ಕೂ ಒಬ್ಬ ಕೆಲಸದಾಳು!
Team Udayavani, Oct 17, 2019, 5:50 AM IST
ಇತ್ತೀಚಿಗೆ ಅಂತರಿಕ್ಷದ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ ಅವನಿಗೆ ಬೋರ್ ಆಗಿರಲಿಲ್ಲ. ಅಷ್ಟು ಮಾತ್ರವೇಕೆ, ಹಸಿವು- ಬಾಯಾರಿಕೆಗಳೂ ಆಗಿರಲಿಲ್ಲ.
ರಷ್ಯಾದ ಸೂಯೆಝ್ ಅಂತರಿಕ್ಷ ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಗಗನಯಾತ್ರಿಗಳನ್ನು ಪಿಕಪ್ ಮಾಡುವ, ಡ್ರಾಪ್ ಮಾಡುವ ಕೆಲಸದಲ್ಲಿ ನಿರತವಾಗಿದೆ. 2011ರ ತನಕ ಅಮೆರಿಕದ ನೌಕೆಯೂ ಸೂಯೆಝ್ಗೆ ಸಾಥ್ ನೀಡುತ್ತಿತ್ತು. ಅದು ಕೆಟ್ಟ ನಂತರ ರಷ್ಯಾದ ಗಗನಯಾತ್ರಿಗಳನ್ನು ಮಾತ್ರವಲ್ಲದೆ ಇತರೆ ದೇಶಗಳ ಗಗನಯಾತ್ರಿಗಳೂ ಸೂಯೆಝ್ ನೌಕೆಯ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇತ್ತೀಚಿಗೆ ಇದೇ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ ಅವನಿಗೆ ಬೋರ್ ಆಗಿರಲಿಲ್ಲ. ಅಷ್ಟು ಮಾತ್ರವೇಕೆ, ಹಸಿವು- ಬಾಯಾರಿಕೆಗಳೂ ಆಗಿರಲಿಲ್ಲ. ಅವನೆಂಥಾ ಮನುಷ್ಯ ಎಂದು ನಿಮಗನ್ನಿಸಿದ್ದರೆ ನಿಮ್ಮ ಅನುಮಾನ ನಿಜ. ಈ ಪ್ರಯಾಣಿಕ ಮನುಷ್ಯನಲ್ಲ, ಯಂತ್ರ ಮಾನವ. ಆತನ ಹೆಸರು ಫೆಡೋರ್.
ಯಂತ್ರಮಾನವನನ್ನು ಸುಮ್ಮನೆಯೇ ಅಂತರಿಕ್ಷಕ್ಕೆ ಕಳಿಸಿಲ್ಲ. ಅಲ್ಲಿ ಫೆಡೋರ್‌ಗೆ ಏನು ಕೆಲಸ ಗೊತ್ತಾ? ಸಹಾಯಕನ ಕೆಲಸ. ಅಂದರೆ ಭೂಮಿಯಿಂದ ಕಳಿಸಲ್ಪಡುವ ಗಗನಯಾತ್ರಿಗಳಿಗೆ ಸಹಾಯ ಮಾಡುವ ಕೆಲಸ. ಏನಾದರೂ ಅವಘಡ ನಡೆದ ಸಂದರ್ಭದಲ್ಲಿ ಗಗನಯಾತ್ರಿಗಳ ಹುಡುಕಾಟ ಕಾರ್ಯಾಚರಣೆ ಮತ್ತು ಅವರು ಸುರಕ್ಷಿತವಾಗಿ ಭೂಮಿಗೆ ಮರಳಲು ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಈ ರೋಬಾಟ್ ಮಾಡುತ್ತದೆ. ಕೃತಕ ಬುದ್ದಿಮತ್ತೆಯನ್ನು ಹೊಂದಿರುವ ಈ ರೋಬಾಟ್ ಕಾರ್ ಡ್ರೈವಿಂಗ್ ಮಾಡುತ್ತದೆ, ಮನುಷ್ಯರೊಂದಿಗೆ ಕೊಂಚ ಸಂಭಾಷಣೆಯನ್ನೂ ನಡೆಸುತ್ತದೆ. ಅಷ್ಟೇ ಯಾಕೆ ಹಾಸ್ಯ ಚಟಾಕಿಯನ್ನೂ ಹಾರಿಸಬಲ್ಲುದು.
ಸದ್ಯ, ಯಂತ್ರ ಮಾನವ ಫೆಡೋರ್‌ನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಂತರಿಕ್ಷದಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ವಿಧಿಸಿ ಅದರ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗುತ್ತಿದೆ. ಶೂನ್ಯ ಗುರುತ್ವಾಕರ್ಷಣ ಪ್ರದೇಶದಲ್ಲಿ ಫೆಡೋರ್ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂದು ರಷ್ಯಾದ ವಿಜ್ಞಾನಿಗಳ ತಂಡ ಕಾತರದಿಂದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಭವಿಷ್ಯದಲ್ಲಿ ಫೆಡೋರ್‌ನ ನಂತರ ಬರುವ ಆತನ ತಮ್ಮಂದಿರು ಖಂಡಿತವಾಗಿಯೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಲಿವೆ. ಅಂತರಿಕ್ಷ ನೌಕೆಯ ಚಾಲನೆ ಸೇರಿದಂತೆ, ಗಗನಯಾತ್ರಿಗಳಿಗೂ ಕ್ಲಿಷ್ಟಕರವೆನಿಸುವ ಕೆಲಸಗಳನ್ನು ಅದು ನಿರ್ವಹಿಸಲಿದೆ.
ಫೆಡೋರ್ ಮೊದಲಿಗನಲ್ಲ
ಅಂತರಿಕ್ಷಕ್ಕೆ ಕಳುಹಿಸಲ್ಪಟ್ಟ ರೋಬಾಟ್‌ಗಳಲ್ಲಿ ಫೆಡೋರ್ ಮೊದಲಿಗನೇನಲ್ಲ. ಈ ಹಿಂದೆ ಅಮೆರಿಕ, ಯುರೋಪ್ ಕೂಡಾ ರೋಬಾಟ್‌ಗಳನ್ನು ಕಳಿಸಿತ್ತು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ “ರೋಬೋನಾಟ್’ ಎಂಬ ರೋಬಾಟ್ ಕಳಿಸಿತ್ತು. ತನ್ನ ದೇಶದ ಗಗನಯಾತ್ರಿಗಳ ದಿನನಿತ್ಯದ ಕೆಲಸಗಳಿಗೆ ಸಹಾಯ ಮಾಡುವುದು ಅದರ ಕೆಲಸವಾಗಿತ್ತು. ಅಲ್ಲದೆ ಆ್ಯಸ್ಟ್ರೋ ಬೀಸ್ ಎಂಬ ರೋಬಾಟ್‌ಅನ್ನು ಅಮೆರಿಕ ಈ ಹಿಂದೆ ಅಂತರಿಕ್ಷಕ್ಕೆ ಕಳಿಸಿತ್ತು. ಅದರ ಕೆಲಸ ರಿಪೇರಿ ಮಾಡುವಾಗ ನಟ್ಟು ಬೋಲ್ಟಾಗಳು ಮತ್ತಿತರ ಚಿಕ್ಕಪುಟ್ಟ ಸಲಕರಣೆಗಳು, ಬಿಡಿಭಾಗಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು. ಅದರ ಜೊತೆಗೆ ಗಗನನೌಕೆಯಲ್ಲಿ ಇಂಗಾಲ ಆಮ್ಲದ ಪ್ರಮಾಣ ಎಷ್ಟಿದೆ ಎಂದು ಸೂಚಿಸುವುದನ್ನೂ ಅದು ಮಾಡುತ್ತಿತ್ತು.
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.