ಒಬ್ಬ ವಿಜ್ಞಾನಿ, ಮತ್ತೂಬ್ಬ ವಿದೂಷಕ
Team Udayavani, May 30, 2019, 6:00 AM IST
ಐನ್‌ಸ್ಟೀನ್ ಅದಾಗಲೇ ಸಾಪೇಕ್ಷತಾ ಸಿದ್ದಾಂತದ ಮೂಲಕ ಜಗತøಸಿದ್ಧರಾಗಿದ್ದರು. ಜಗತ್ತಿನ ಎಲ್ಲಾ ದೇಶಗಳೂ ಅವರನ್ನು ಕರೆಸಿ ಸನ್ಮಾನಿಸಲು ಹಾತೊರೆಯುತ್ತಿದ್ದ ಸಮಯ. ಸೆಲಬ್ರಿಟಿಗಳು ಅವರೊಂದಿಗೆ ಗುರುತಿಸಿಕೊಳ್ಳಲು ಮುಗಿಬೀಳುತ್ತಿದ್ದ ಕಾಲ. ಆದರೆ ಐನ್‌ಸ್ಟೀನ್ ಮಾತ್ರ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದರು. ಐನ್‌ಸ್ಟೀನ್ ರಂಥ ಮಹಾನ್ ಮೇಧಾವಿ ಭೇಟಿ ಮಾಡಲು ಇಷ್ಟಪಟ್ಟ ಆ ವ್ಯಕ್ತಿ ವಿಜ್ಞಾನಿಯೋ, ಸಂಶೋಧಕನೇ ಆಗಿರಲಿಲ್ಲ. ವಿದೂಷಕನಾಗಿದ್ದ. ಆತನೇ ಚಾರ್ಲಿ ಚಾಪ್ಲಿನ್. ಈ ವಿಚಾರವನ್ನು ಸ್ವತಃ ಐನ್‌ಸ್ಟೀನ್ ರವರೇ ಸಂದರ್ಶನವೊದರಲ್ಲಿ ಹೇಳಿದ್ದರು. ಹಾಗೆ ನೋಡಿದರೆ ಹಾಸ್ಯಮಯ ಪ್ರವೃತ್ತಿಯ ಐನ್‌ಸ್ಟೀನ್ ಚಾರ್ಲಿ ಚಾಪ್ಲಿನ್‌ರನ್ನು ಮೆಚ್ಚಿದ್ದರಲ್ಲಿ ಅಚ್ಚರಿಯಿರಲಿಲ್ಲ. ಐನ್‌ಸ್ಟೀನ್ ರ ಮನದಿಂಗಿತ ತಿಳಿದ ಹಾಲಿವುಡ್‌ನ ಯುನಿವರ್ಸಲ್ ಸ್ಟುಡಿಯೋ ಮಾಲೀಕ ಅವರಿಬ್ಬರ ಭೇಟಿಗೆ ಸೇತುವಾದರು.
ಚಾಪ್ಲಿನ್, ಐನ್‌ಸ್ಟೀನ್ ದಂಪತಿಯನ್ನು ಮನೆಗೆ ಆಹ್ವಾನಿಸಿದರು. ಅಲ್ಲಿಂದ ಶುರುವಾದ ಅವರಿಬ್ಬರ ದೋಸ್ತಿ ಕಡೆಯವರೆಗೂ ಮುಂದುವರಿಯಿತು. ಇಂದು ಚಾರ್ಲಿ ಚಾಪ್ಲಿನ್ನರ ಪ್ರಖ್ಯಾತ ಸಿನಿಮಾ “ಸಿಟಿ ಲೈಟ್ಸ್’ ಜಗತ್ತಿನ ಹೆಸರಾಂತ ನಿರ್ದೇಶಕರಿಗೆ ಸ್ಪೂರ್ತಿಯಾಗಿದೆ. 1931ರಲ್ಲಿ ಅದೇ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಾಡಾದಾಗ ಚಾಪ್ಲಿನ್ ಅವರು ಐನ್‌ಸ್ಟೀನ್ ರನ್ನೂ ಆಹ್ವಾನಿಸಿದ್ದರು. ಅಲ್ಲಿ ನಡೆದ ಸಂಭಾಷಣೆ ಇದು-ಐನ್‌ಸ್ಟೀನ್- ನೀವು ಒಂದು ಮಾತನ್ನೂ ಆಡುವುದಿಲ್ಲ. ಆದರೆ ಇಡೀ ಜಗತ್ತೇ ನಿಮ್ಮನ್ನು ಅರ್ಥ ಮಾಡಿಕೊಂಡು ಮೆಚ್ಚಿಕೊಳ್ಳುತ್ತದೆ. ನಿಮ್ಮ ಪ್ರತಿಭೆ ನಿಜಕ್ಕೂ ದೊಡ್ಡದು.
ಚಾಪ್ಲಿನ್- ಆದರೆ ನಿಮ್ಮ ಕೀರ್ತಿ ಅದಕ್ಕಿಂತ ದೊಡ್ಡದು. ನಿಮ್ಮ ಕಠಿಣ ಪ್ರಮೇಯಗಳನ್ನು, ಸಿದ್ದಾಂತಗಳನ್ನು ಅರ್ಥ ಮಾಡಿಕೊಳ್ಳದವರೂ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.