ಸಾವಿನ ಪರ್ವತ ಶ್ರೇಣಿಗೊಂದು ಸುತ್ತು!

Team Udayavani, May 17, 2018, 4:30 PM IST

savina-parvata.jpg

ಹಲಸು, ಅನಾನಸು ಹಣ್ಣಿನ ಘಮ… ಕರಿಮೆಣಸು, ಏಲಕ್ಕಿ ಘಾಟು… ಹಸಿರು ಹೊದಿಕೆಯ ರಂಗು…
ತಮಿಳುನಾಡಿನ ನಮಕ್ಕಲ್‌ ಜಿÇÉೆಗೆ ಸೇರಿದ ಕೊಲ್ಲಿ ಎನ್ನುವ ಊರಿನ ಬೆಟ್ಟ ಸಾಲುಗಳಲ್ಲಿ ಸಂಚರಿಸುತ್ತಿದ್ದರೆ ಈ ಎÇÉಾ ಅನುಭವಗಳು ಸಿಗುತ್ತವೆ. ಅಲ್ಲಿಗೆ ತಲುಪಬೇಕಾದರೆ 70 ಹೇರ್‌ಪಿನ್‌ ತಿರುವುಗಳನ್ನು ದಾಟಿ ಹೋಗಬೇಕು. ಅದರ ಥ್ರಿಲ್ಲಿಂಗ್‌ ಅನುಭವವೇ ಬೇರೆ. ಈ ಶಿಖರ ಶ್ರೇಣಿ 1000-1300 ಮೀಟರ್‌ಗಳಷ್ಟು ಎತ್ತರ ಇವೆ. ಮಲಿನಗೊಳ್ಳದೇ ಉಳಿದಿರುವ ಈ ಗಿರಿಧಾಮವನ್ನು ಹಿಂದಿನ ಕಾಲದಲ್ಲಿ “ಸಾವಿನ ಬೆಟ್ಟಗಳು’ ಎಂದು ಕರೆಯುತ್ತಿದ್ದರಂತೆ. ಸಹಜ ಪ್ರಕೃತಿ ಸೌಂದರ್ಯಕ್ಕೆ ಮನ ಒಡ್ಡುವ ಮನಸ್ಸಿರುವವರನ್ನು ಕರೆಯುವ ಈ ಗಿರಿಗಳಲ್ಲಿ ಶಾಂತ ಪರಿಸರ ಮನೆಮಾಡಿದೆ.

ಹೆಜ್ಜೆಗೊಂದು ಜಲಪಾತ
ಕಾಫಿ, ಚಹಾ, ಏಲಕ್ಕಿ ತೋಟಗಳ ಅಂದ, ಹಲಸು, ಸೀಬೆ, ಅನಾನಸ್‌ ಹಣ್ಣುಗಳನ್ನು ಈ ಪ್ರಾಂತ್ಯದಲ್ಲಿ ನೋಡಬಹುದು. ಅಷ್ಟೇ ಅಲ್ಲ ಅವುಗಳ ರುಚಿಯನ್ನೂ ಸವಿಯಬಹುದು. ಚಾರಣಕ್ಕೆ ಹೇಳಿ ಮಾಡಿಸಿದ ಹಾಗಿರುವ ಕೊಲ್ಲಿ ಬೆಟ್ಟಗಳಲ್ಲಿ “ಸೆಮ್ಮೆದುಮುಥಂಕುಲಂ’ ಸರೋವರ ಇದೆ. ಅಲ್ಲಿ ದೋಣಿ ವಿಹಾರಕ್ಕೆ ಅವಕಾಶವಿದೆ. ಅಲ್ಲದೆ ಪ್ರವಾಸಿಗರು ಸರೋವರದ ಬಳಿಯಲ್ಲೇ ಇರುವ ಉದ್ಯಾನವನದಲ್ಲಿ ಅಡ್ಡಾಡಬಹುದು. ಗಿರಿಧಾಮವನ್ನು ಸುತ್ತಲು ಹೊರಡುವವರಿಗೆ ಆಶ್ಚರ್ಯವಾಗೋದು ಖಂಡಿತ. ಏಕೆಂದರೆ ಇಲ್ಲಿ ಹೆಜ್ಜೆಗೊಂದು ಜಲಪಾತ ಸಿಗುತ್ತದೆ. 

ಸುಗ್ರೀವ ಆಳುತ್ತಿದ್ದ ಬೆಟ್ಟ
ಜಲಪಾತಗಳು ಮಾತ್ರವಲ್ಲ, ಪ್ರವಾಸಿಗರು ಹತ್ತಿರದಲ್ಲೇ ಇರುವ ಅರಪ್ಪಲೀಶ್ವರ ದೇವಾಲಯಕ್ಕೂ ಭೇಟಿ ನೀಡಬಹುದಾಗಿದೆ. ಹತ್ತಿರದ ರಾಸಿಪುರಂನಲ್ಲಿ ಪ್ರಾಚೀನ ಶಿವ ದೇವಾಲಯವೊಂದಿದೆ. ಜೈನ ದೇವಾಲಯವೂ ಇದೆ. “ಮಧುವನಂ’ ಹೆಸರಿನ ರಾಮಾಯಣದ ಸುಗ್ರೀವ ಆಳುತ್ತಿದ್ದ ಬೆಟ್ಟವೂ ಇದೆ. ನಮ್ಮಲ್ಲಿ ಆಗುಂಬೆ ಸೂರ್ಯಾಸ್ತದ ಸೌಂದರ್ಯವನ್ನು ಸವಿಯಲು ವ್ಯೂ ಪಾಯಿಂಟು ಇರುವಂತೆ ಇಲ್ಲಿ ಎರಡು ವ್ಯೂ ಪಾಯಿಂಟುಗಳಿವೆ. “ಸೀಕುಪರೈ’ ಮತ್ತು “ಸೆಲುರ್ನಾಡು’ ಹೆಸರಿನ ಈ ವ್ಯೂ ಪಾಯಿಂಟ್‌ಗಳಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವ ಮಜವೇ ಬೇರೆ. ಕಾಡು ನಾಯಿ, ಕರಡಿ, ಜಿಂಕೆ, ಹುಲಿಗಳ ನೆಲೆಯಾಗಿರುವ ಕೊಲ್ಲಿ ಬೆಟ್ಟದಲ್ಲಿ ಆಕಾಶ ಗಂಗೈ ಹೆಸರಿನ 300 ಅಡಿ ಎತ್ತರದಿಂದ ಬೀಳುವ ಜಲಪಾತವೂ ಇದೆ. 

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.