ಪುಟಾಣಿ ನ್ಯೂಸ್ ಆ್ಯಂಕರ್‌ಗಳು!
Team Udayavani, Nov 16, 2017, 6:20 AM IST
ಪುಟಾಣಿ ಮಕ್ಕಳು ಸಮಸ್ಯೆಗಳ ಕುರಿತು ಪ್ಯಾನಲ್ ಡಿಸ್ಕಶನ್ ನಡೆಸಿದರೆ ಹೇಗಿರುತ್ತೆ? ಹಾಂ, ಇಂಥ ವಿಭಿನ್ನ ಐಡಿಯಾದ ಶೋ ಒಂದು ಸಿದ್ಧವಾಗಿದೆ. “ದ ಚಿಲ್ಡ್ರನ್ಸ್ scrappy ನ್ಯೂಸ್ ಸರ್ವಿಸ್’ ಹೆಸರಿನ ಇಂಡಿಯನ್ ಶೋನ ಸಂಪೂರ್ಣ ಜವಾಬ್ದಾರಿ ಮಕ್ಕಳದ್ದೇ ಆಗಿದೆ. ಇಬ್ಬರು ಪುಟಾಣಿ ನಿರೂಪಕರು ಈ ಶೋ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿದಂತೆ ಭಾರತದ ಆಯ್ದ ನಗರಗಳಿಂದ ಪುಟಾಣಿ ವರದಿಗಾರರು ತಮಗೆ ಕುತೂಹಲವೆನಿಸಿದ ಸಂಗತಿಗಳನ್ನು, ಸಮಸ್ಯೆಗಳನ್ನು ಚಿತ್ರೀಕರಣ ನಡೆಸಿ ವರದಿ ಮಾಡುತ್ತಾರೆ. ಅದರ ಕುರಿತು ಕೇಂದ್ರ ಕಚೇರಿ ಮುಂಬೈನ ಸ್ಟುಡಿಯೋನಲ್ಲಿ ಮಕ್ಕಳು ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.
ಒಂದು ಗಂಟೆಯ ಅವಧಿಯ ಶೋ ಇದಾಗಿದ್ದು, ಆಟದ ಮೈದಾನಕ್ಕೆ ಜಾಗದ ಕೊರತೆ, ಸಮುದ್ರವನ್ನು ಸೇರುತ್ತಿರುವ ಪ್ಲಾಸ್ಟಿಕ್ ಇವೇ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೊಡ್ಡವರನ್ನೂ ನ್ಯೂಸ್‌ರೂಂಗೆ ಆಹ್ವಾನಿಸಲಾಗುತ್ತದೆ. ಸದ್ಯ ಈ ತಂಡದವರು ಬೆಂಗಳೂರಿನಲ್ಲಿ ಈ ವಾರವಿಡೀ ಸ್ಥಳೀಯ ಸಮಸ್ಯೆಗಳ ಕುರಿತು ಜನರನ್ನು ಮಾತನಾಡಿಸಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಅವರದೇ ವೆಬ್‌ಸೈಟಿನಲ್ಲಿ, ಅಂದರೆ “www.scrappynews.com’ನಲ್ಲಿ ವೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara ಉಪ ಅರಣ್ಯ ಸಂಕ್ಷಣಾಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ;ರತ್ನಾಕರ ಹೊನಗೋಡು ಎಚ್ಚರಿಕೆ
Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.