![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 18, 2018, 3:06 PM IST
“ಅಯ್ಯೋ ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ಲ, ಎಲ್ಲಾ ಖರ್ಚಾಗಿ ಹೋಗುತ್ತಿದೆ’ ಅಂತ ದೊಡ್ಡವರು ಹೇಳ್ಳೋದನ್ನು ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ನಿಮ್ಮ ಕೈಯಲ್ಲಿ ದುಡ್ಡು ನಿಲ್ಲದೆ, ಎಡ ಕೈಯಿಂದ ಬಲ ಕೈಗೆ ಆರಾಮಾಗಿ ಗಾಳಿಯಲ್ಲಿ ತೇಲಿಕೊಂಡು ಹೋಗಿಬಿಟ್ಟರೆ ಹೇಗಿರುತ್ತೆ ಅಲ್ವಾ?! ಗಾಳಿಯಲ್ಲಿ ನೋಟನ್ನು ತೇಲಿಸೋದು ಹೇಗೆ ಅನ್ನೋ ಜಾದೂ ಇಲ್ಲಿದೆ ನೋಡಿ.
ಬೇಕಾಗುವ ವಸ್ತುಗಳು: ಕಪ್ಪು ದಾರ, ಪಾರದರ್ಶಕ ಗಮ್ ಟೇಪ್, ಸ್ಟ್ರಾ, ನೋಟು
ಪ್ರದರ್ಶನ: ಜಾದೂಗಾರ ಕೈಯಲ್ಲಿ ಒಂದು ನೋಟನ್ನು ಹಿಡಿದುಕೊಂಡಿರುತ್ತಾನೆ. ಆ ನೋಟು ನಿಧಾನವಾಗಿ ಗಾಳಿಯಲ್ಲಿ ತೇಲುತ್ತಾ ಇನ್ನೊಂದು ಕೈ ಕಡೆಗೆ ಚಲಿಸುತ್ತದೆ. ಹೀಗೆ ಜಾದೂಗಾರ ಆ ನೋಟನ್ನು ಬಲಗೈ ಇಂದ ಎಡ ಕೈ ಕಡೆಗೆ, ಎಡದಿಂದ ಬಲದ ಕಡೆಗೆ ಚಲಿಸುವಂತೆ ಮಾಡುತ್ತಾನೆ.
ತಯಾರಿ: ಇದೊಂದು ಕೈ ಚಳಕದ ಜಾದೂ. ಮೊದಲಿಗೆ ಸ್ಟ್ರಾ ಅನ್ನು 2 ತುಂಡುಗಳನ್ನಾಗಿ ಕತ್ತರಿಸಿ, ನೋಟಿನ ಹಿಂಭಾಗದಲ್ಲಿ ಟೇಪ್‌ನ ಸಹಾಯದಿಂದ ಅಂಟಿಸಿ. ನಂತರ ಆ ಸ್ಟ್ರಾ ಒಳಕ್ಕೆ ಕಪ್ಪು ದಾರವನ್ನು ತೂರಿಸಿ, ದಾರದ ಕೊನೆಯಲ್ಲಿ ಕುಣಿಕೆಯಂತೆ ಮಾಡಿ ಗಂಟು ಹಾಕಿ. ಆ ಗಂಟಿನೊಳಗೆ ನಿಮ್ಮ ಹೆಬ್ಬೆರಳನ್ನು ತೂರಿಸಿ, ಕೈಗಳನ್ನು ದೂರ ಮಾಡುತ್ತಾ, ನಿಧಾನವಾಗಿ ನೋಟನ್ನು ಒಂದು ಕೈಯಿಂದ, ಇನ್ನೊಂದು ಕೈ ಕಡೆಗೆ ಜಾರಿಸುತ್ತಾ ಬನ್ನಿ. ಪ್ರೇಕ್ಷಕರಿಗೆ ಕಪ್ಪು ದಾರ ಕಾಣದೇ ಇರುವುದರಿಂದ (ಈ ಜಾದೂ ಮಾಡುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರೆ, ಜೊತೆಗೆ ಕತ್ತಲಿದ್ದರೆ ಇನ್ನೂ ಒಳ್ಳೆಯದು), ನೋಟು ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. ಈ ಜಾದೂವನ್ನು ಪರಿಚಿತರ ಮುಂದೆ ಪ್ರದರ್ಶಿಸುವುದಕ್ಕೆ ಮುನ್ನ ಅನೇಕ ಬಾರಿ ಇದನ್ನು ಮಾಡಬೇಕು.
ವಿನ್ಸೆಂಟ್ ಲೋಬೋ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.