ಕುಟ್ಟಿದಾಗ ಮುಚ್ಚಳ ಸೃಷ್ಟಿ
Team Udayavani, Sep 6, 2018, 6:00 AM IST
ಯಾವುದಾದರೂ ವಸ್ತು ಕಳೆದುಹೋದಾಗ ಮನೆಯೆಲ್ಲಾ ಹುಡುಕಾಡುತ್ತೇವೆ. ಬ್ಯಾಗು, ಪ್ಲಾಸ್ಟಿಕ್ ಚೀಲ ಎಲ್ಲವನ್ನೂ ತಡಕಾಡುತ್ತೇವೆ. ಆಗಲೂ ಸಿಗದಿದ್ದಾಗ ಬ್ಯಾಗನ್ನು ಉಲ್ಟಾ ಮಾಡಿ ಕೊಡವುತ್ತೇವೆ. ಆಗ, ನಾವು ಹುಡುಕುತ್ತಿದ್ದ ವಸ್ತು ಅದರೊಳಗಿದ್ದರೆ ಕೆಳಕ್ಕೆ ಬೀಳುತ್ತದೆ. ಹಾಂ, ಈ ವಿಷಯ ಇಲ್ಲೇಕೆ ಬಂತೆಂದರೆ, ಇವತ್ತು ಹೇಳಿಕೊಡುತ್ತಿರುವ ಜಾದೂ ಅದೇ ರೀತಿಯದ್ದು. ಖಾಲಿ ಬಾಟಲಿಯ ತಳಕ್ಕೆ ಗುದ್ದಿ, ಮುಚ್ಚಳವನ್ನು ಸೃಷ್ಟಿಸುವಂಥದ್ದು.
ಬೇಕಾಗುವ ವಸ್ತು: ತಂಪು ಪಾನೀಯದ ಖಾಲಿ ಪ್ಲಾಸ್ಟಿಕ್ ಬಾಟಲಿ, ಚಾಕು, ಗಮ್‌ಟೇಪ್
ಪ್ರದರ್ಶನ: ಜಾದೂಗಾರನ ಬಳಿ ಖಾಲಿ ಪ್ಲಾಸ್ಟಿಕ್ ಬಾಟಲಿಯೊಂದು ಇರುತ್ತದೆ. ಅದಕ್ಕೆ ಮುಚ್ಚಳ ಇರುವುದಿಲ್ಲ. ಜಾದೂಗಾರ ಅದನ್ನೆತ್ತಿಕೊಂಡು, ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ಖಾಲಿ ಬಾಟಲಿಯ ಮೇಲೆ ಜೋರಾಗಿ ಕುಟ್ಟುತ್ತಾನೆ. ಇದ್ದಕ್ಕಿದ್ದಂತೆ, ಬಾಟಲಿಯ ಮುಚ್ಚಳವು ಠಣ್ಣೆಂದು ಕೆಳಕ್ಕೆ ಬೀಳುತ್ತದೆ. ಬಾಟಲಿಯೊಳಗೆ ಮುಚ್ಚಳ ಹೇಗೆ ಬಂತು?
ತಯಾರಿ: ಈ ಜಾದೂ ಪ್ರದರ್ಶನಕ್ಕೆ ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯದ ಖಾಲಿ ಬಾಟಲಿಯನ್ನೇ ಬಳಸಬೇಕು. ಯಾಕೆಂದರೆ, ಅಂಥ ಬಾಟಲಿಗಳ ಮೇಲೆ ಕಂಪನಿಯ ಹೆಸರು ಬರೆದಿರುವ ಲೇಬಲ್ ಒಂದನ್ನು ಅಂಟಿಸಿರುತ್ತಾರೆ. ನಮ್ಮ ಜಾದೂವಿಗೆ ಅಗತ್ಯವಾಗಿ ಬೇಕಾಗಿರುವುದೇ ಅದು. ಪ್ರದರ್ಶನಕ್ಕೂ ಮೊದಲು ಆ ಲೇಬಲ್ ಅನ್ನು ಜೋಪಾನವಾಗಿ, ಹರಿಯದಂತೆ ತೆಗೆಯಿರಿ. ನಂತರ ಬಾಟಲಿಯ ಮೇಲೆ ಚಾಕುವಿನಿಂದ ಸ್ವಲ್ಪ ಅಗಲವಾದ ರಂಧ್ರ ಮಾಡಿ. ಆ ರಂಧ್ರದೊಳಗೆ ಬಾಟಲಿಯ ಮುಚ್ಚಳವನ್ನು ಹಾಕಿ, ಗಮ್‌ನ ಸಹಾಯದಿಂದ ಅಂಟಿಸಿ. ನಂತರ ಲೇಬಲ್ ಅನ್ನು ಪುನಃ ಬಾಟಲಿಯ ಮೇಲೆ ಅಂಟಿಸಿ. ಪ್ರೇಕ್ಷಕರಿಗೆ ಲೇಬಲ್ ಒಳಗಿನ ರಹಸ್ಯ ತಿಳಿಯುವುದಿಲ್ಲ. ಆಮೇಲೆ, ಬಾಯಲ್ಲಿ ಮಂತ್ರ ಜಪಿಸಿದಂತೆ ಮಾಡುತ್ತಾ ಜೋರಾಗೊಮ್ಮೆ ಬಾಟಲಿಯ ಮೇಲೆ ಕುಟ್ಟಿ. ಆ ಪೆಟ್ಟಿನ ರಭಸಕ್ಕೆ, ಬಾಟಲಿಗೆ ಅಂಟಿಕೊಂಡಿದ್ದ ಮುಚ್ಚಳ ಕೆಳಕ್ಕೆ ಬೀಳುತ್ತದೆ. ಮುಚ್ಚಳವು ಬಾಟಲಿಯೊಳಗೆ ಬಂದದ್ದು ಹೇಗೆಂದು ನೋಡುಗರು ಅಚ್ಚರಿಪಡುತ್ತಾರೆ.
ವಿನ್ಸೆಂಟ್ ಲೋಬೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.