ಮುಗಿಲೆತ್ತರದ ಕಟ್ಟಡ!
Team Udayavani, Oct 31, 2019, 4:31 AM IST
ಪ್ರಪಂಚದ ಅತಿ ಎತ್ತರದ ಕಟ್ಟಡ ಯಾವುದು ಗೊತ್ತಾ? ದುಬೈನಲ್ಲಿರುವ ಬುರ್ಜ್ ಖಲೀಫಾ! ದುಬೈ ತಲುಪಲು ಇನ್ನೂ 95 ಕಿ.ಮೀ ಇದೇ ಎನ್ನುವಾಗಲೇ ಈ ಕಟ್ಟಡ ಕಾಣುತ್ತದೆ! ಅಷ್ಟು ಎತ್ತರವಿದೆ ಈ ಕಟ್ಟಡ…
ದುಬೈ ಪಟ್ಟಣ ಇನ್ನೂ 95 ಕಿಲೋಮೀಟರ್ ದೂರ ಇರುವಾಗಲೇ ಹೊಳೆಯುವ ಶಿಖರವೊಂದು ಪ್ರವಾಸಿಗರ ಗಮನ ಸೆಳೆಯುತ್ತದೆ. ಅದರ ಹೆಸರು ಬುರ್ಜ್ ಖಲೀಫಾ. ವಿಶ್ವದಲ್ಲೇ ಇದು ಅತಿ ಎತ್ತರದ ಕಟ್ಟಡ ಎಂಬ ದಾಖಲೆ ಅದರದ್ದು. ಅದು, 2,717 ಅಡಿ ಎತ್ತರವಿದೆ. 2004ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿ 2010ರಲ್ಲಿ ಪೂರ್ಣಗೊಂಡಿತ್ತು. ಅರಬ್ ಸಂಯುಕ್ತ ರಾಷ್ಟ್ರಗಳ ಅಧ್ಯಕ್ಷರಾದ ಖಲೀಫ ಬಿನ್ ಜಾಯಿದ್ ನಕ್ಸಾನ್, ಇದರ ನಿರ್ಮಾತೃ.
ಒಳಗೆ ಏನೇನಿದೆ?
ಬೆರಗುಗೊಳಿಸುವ ತಂತ್ರಜ್ಞಾನಕ್ಕೆ ಸಾಕ್ಷ್ಯವಾಗಿರುವ ಬುರ್ಜ್ ಕಟ್ಟಡದ ತಳಪಾಯ 50 ಮೀಟರ್ ಆಳವಿದೆ. ಕಟ್ಟಡದಲ್ಲಿ 162 ಅಂತಸ್ತುಗಳಿವೆ. ನೆಲದ ತಳದಲ್ಲಿ ಎರಡು ಅಂತಸ್ತುಗಳಿವೆ. ಕಾಲ್ನಡಿಗೆಯಲ್ಲಿ ಏರುವುದಾದರೆ 2,909 ಮೆಟ್ಟಿಲುಗಳನ್ನೇರಬೇಕು. 57 ಲಿಫ್ಟ್ಗಳಿವೆ. 124ನೆಯ ಮಹಡಿಯಲ್ಲಿರುವ ವೀಕ್ಷಣಾ ಗೋಪುರ ತಲುಪಲು ಇದಕ್ಕೆ ಒಂದು ನಿಮಿಷ ಸಾಕಾಗುತ್ತದೆ. ನೆನಪಿಡಿ, ಇದು 1,483 ಅಡಿ ಎತ್ತರದಲ್ಲಿರುವ ಈ ಕಟ್ಟಡದಲ್ಲಿ ಎಂಟು ಎಸ್ಕಲೇಟರ್‌ಗಳೂ ಇವೆ. 304 ಹೋಟೆಲುಗಳು, 900 ಅಪಾರ್ಟ್‌ಮೆಂಟ್‌ಗಳಿವೆ.
ನಿರ್ಮಾಣ ಹಿಂದಿನ ಶ್ರಮ
ಎಂಭತ್ತು ದೇಶಗಳಿಂದ ಬಂದಿದ್ದ ಕಾರ್ಮಿಕರು. 22 ದಶಲಕ್ಷ ಮಾನವ ಗಂಟೆಗಳ ಕೆಲಸ. ಕೊನೆಯ ದಿನಗಳಲ್ಲಿ ದೈನಿಕ 12 ಸಾವಿರ ಕೆಲಸಗಾರರ ಶ್ರಮ ವ್ಯಯವಾಗಿದೆ. 110,000 ಟನ್ ಕಾಂಕ್ರೀಟ್, 55 ಸಾವಿರ ಟನ್ ಉಕ್ಕು ಬಳಕೆಯಾಗಿದೆ. ಈ ಕಾಂಕ್ರೀಟ್ ಒಂದು ಲಕ್ಷ ಆನೆಗಳ ತೂಕಕ್ಕೆ ಸಮನಾಗಿದೆ. ಐದು ಎ380 ವಿಮಾನಗಳ ರಚನೆಗೆ ಬೇಕಾಗುವಷ್ಟು ಅಲ್ಯುಮಿನಿಯಂ ಇದರ ಸೃಷ್ಟಿಗೆ ಉಪಯೋಗವಾಗಿದೆ. 380 ತಂತ್ರಜ್ಞರು ಶ್ರಮಿಸಿದ್ದಾರೆ. 25 ಸಹಸ್ರ ಜನರಿಗೆ ಇದರೊಳಗೆ ಸ್ಥಳಾವಕಾಶವಿದೆ.
ಪುಟ್ಟ ನಗರಿ ಇದರಲ್ಲಿದೆ
ಬುರ್ಜ್ ಖಲೀಫಾ ದಿನನಿತ್ಯ ಉರಿಸುವ ನೂರು ವ್ಯಾಟ್ ಶಕ್ತಿಯ ಬಲುºಗಳ ಸಂಖ್ಯೆ 36 ಸಾವಿರದಷ್ಟಿದೆ. ದಿನಕ್ಕೆ 250,000 ಗ್ಯಾಲನ್ ನೀರು ಬಳಕೆಗೆ ಬೇಕು. 15 ದಶಲಕ್ಷ ಗ್ಯಾಲನ್ ಮಳೆ ನೀರು ಸಂಗ್ರಹಿಸಿಡಲು ಒಳತೊಟ್ಟಿಯಿದೆ. ಒಳ ಚರಂಡಿಗಳು, ಕೊಳಾಯಿ ವ್ಯವಸ್ಥೆಗಳಿವೆ. ಕಟ್ಟಡದ ಹವಾ ನಿಯಂತ್ರಣಕ್ಕಾಗಿ ನೀರನ್ನು ಘನೀಕೃತಗೊಳಿಸಲು 46 ಮೆಗಾವ್ಯಾಟಿನ ಯಂತ್ರ ಕೆಲಸ ಮಾಡುತ್ತದೆ. ಬುರ್ಜ್ ಖಲೀಫಾದಲ್ಲಿ 1200 ಮಳಿಗೆಗಳಿವೆ. ಇದು ವಿಶ್ವದ ಅತಿ ದೊಡ್ಡ ಶಾಪಿಂಗ್ ಮಾಲ್ ಕೂಡ ಹೌದು. ವಿಶ್ವದ ಎರಡನೆಯ ಅತಿ ದೊಡ್ಡ ಅಕ್ವೇರಿಯಂ ಇದರಲ್ಲಿದೆ. ವಿಶ್ವದ ಏಳು ಹೆಸರಾಂತ ಸ್ಟಾರ್ ಹೋಟೆಲುಗಳ ಪೈಕಿ ಒಂದು ಇದರಲ್ಲಿದೆ.
– ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.