ಕಾರ್‌ ಕಾರ್‌ ಇಲ್ನೋಡಿ ಕಾರ್‌


Team Udayavani, Sep 28, 2017, 10:47 AM IST

ch5.jpg

ಫ್ರಾನ್ಸ್‌ಗೆ ಭೇಟಿ ನೀಡಿದವರು ವಿಶ್ವದ ಪ್ರತಿಷ್ಠಿತ ಮ್ಯೂಸಿಯಂಗಳಲ್ಲಿ ಒಂದಾದ ಷ್ಲುಂಫ್ ಕಾರು ಸಂಗ್ರಹಾಲಯವನ್ನು ನೋಡದೆ ಬರುವುದಿಲ್ಲ. ಅಲ್ಸೇಸ್‌ ಪ್ರದೇಶದ ಮ್ಯೂಲ್ಹೌಸ್‌ ಪಟ್ಟಣದಲ್ಲಿರುವ 2 ಲಕ್ಷ ಚದರ ಅಡಿ ಪರಿಧಿಯ ಕಟ್ಟಡದಲ್ಲಿರುವುದು ಬರೀ ಕಾರುಗಳೇ! ಯುರೋಪಿನ ಹೆಸರಾಂತ ಕಂಪನಿಗಳು ತಯಾರಿಸಿದ ಬಹುತೇಕ ಕಾರುಗಳ ಮಾದರಿ ಸೇರಿದಂತೆ ಜಗತ್ತಿನ ಕಾರಿನ ಮಾದರಿಗಳು ಇಲ್ಲಿವೆ.

112 ವಿಧದ ಒಟ್ಟು 580 ಕಾರುಗಳಿದ್ದು ಅವೆಲ್ಲವೂ ಚಾಲನೆಗೆ ಸಮರ್ಥವಾಗಿವೆ. ಕಾರಿನ ಸಂಗ್ರಹ ಶುರುವಾಗಿದ್ದು 1957ರಲ್ಲಿ. ಅನಿವಾರ್ಯ ಕಾರಣಗಳಿಂದ 1977ರಲ್ಲಿ ಸಂಗ್ರಹ ಸ್ಥಗಿತಗೊಳಿಸಬೇಕಾಯ್ತು. ಇಲ್ಲದಿದ್ದರೆ ಇಂದು ಅಲ್ಲಿ ಸಹಸ್ರಾರು ಮಾದರಿಯ ಕಾರುಗಳಿರುತ್ತಿದ್ದವು. ಹಾಗಿದ್ದರೂ ಜಗತ್ತಿನ ಪ್ರತಿಷ್ಠಿತ ಕಾರು ಸಂಗ್ರಹಾಲಯಗಳ ಸಾಲಿನಲ್ಲಿ ಷ್ಲುಂಫ್ ಮೊದಲಿದೆ. 

ಹೇಗೆ ಶುರುವಾಯಿತು?
ಈ ಸಂಗ್ರಹಾಲಯ ಸ್ಥಾಪಿಸಿದ್ದು, ಇಟಲಿಯ ಕಾನ್ಸ್‌ ಷ್ಲುಂಫ್ ಮತ್ತು ಫ್ರಿಟ್ಸ್‌ ಷ್ಲುಂಫ್ ಸಹೋದರರು. ತಾಸಿಗೆ 480 ಕಿ. ಮೀ ಸಾಮರ್ಥ್ಯದ ಬುಗಾಟ್ಟಿ ಕಾರಿನೊಂದಿಗೆ 1942ರಲ್ಲಿ ಸಂಗ್ರಹ ಶುರುವಾಯ್ತು. 1957ರ ಬಳಿಕ ಬೇರೆ ಬೇರೆ ಕಾರುಗಳನ್ನು ಸಂಗ್ರಹಾಲಯ ಸೇರಿದವು. 1963ರಲ್ಲಿ ಅಮೆರಿಕದ ಷೇಕ್‌ಸ್ಪಿಯರ್‌ ಎಂಬ ಸಂಗ್ರಾಹಕನಿಂದ 30 ಕಾರುಗಳನ್ನು ಸಂಗ್ರಹಿಸಿದರು. ಫ್ರಾನ್ಸ್‌ನ ಬೇರೆ ಬೇರೆ ಕಂಪನಿಗಳ 102 ಕಾರುಗಳು ಸೇರಿಕೊಂಡವು.

ಸ್ವಿಜರ್ಲಂಡ್‌, ಇಂಗ್ಲೆಂಡ್‌, ಇಟಲಿ, ಜರ್ಮನಿ, ಅಮೆರಿಕಗಳ ಕಾರುಗಳೂ ಸಂಗ್ರಹವಾದವು. ಅಂತಾರಾಷ್ಟ್ರೀಯ ಕಾರು ಸಂಗ್ರಾಹಕರ ಕ್ಲಬ್‌ ಒಂದನ್ನು ಸ್ಥಾಪಿಸಿ ಅದರ ಸದಸ್ಯರ ಮೂಲಕ ಕೆಲವು ಕಾರುಗಳನ್ನು ವಿನಿಮಯವೂ ಮಾಡಿಕೊಂಡರು. ಮೊದಲು ಜವಳಿ ಕಾರ್ಖಾನೆಯಲ್ಲೇ ಕಾರು ಸಂಗ್ರಹವಾಗುತ್ತಿತ್ತು. ಕೊಂಡ ಕಾರುಗಳನ್ನು ಸುಸ್ಥಿಯಲ್ಲಿಡಲು ಷ್ಲುಂಫ್ ಸಹೋದರರು ಒಂದು ಗ್ಯಾರೇಜನ್ನೂ ತೆರೆದರು. ಪ್ರತಿ ಕಾರನ್ನೂ ಚಾಲನೆಗೆ ಅನುಕೂಲಗೊಳಿಸಿದರು. ಕಾರು ಖರೀದಿಗಾಗಿ ಹತ್ತು ವರ್ಷಗಳಲ್ಲಿ 12 ಮಿಲಿಯನ್‌ ಫ್ರೆಂಚ್‌ ಫ್ರಾಂಕ್‌ಗಳಾಯಿತಂತೆ. 

ಯಾವ್ಯಾವ ಕಾರುಗಳಿವೆ? 
ಮರ್ಸಿಡಿಸ್‌ ಬೆಂಝ್, ಬುಗಾಟ್ಟಿ ಮಾಸೆರೋಟಿ, ಯುದ್ಧಪೂರ್ವದ ಪ್ರಿಕ್ಸ್‌, ರಾಯಲ್‌, ರೋಯಾಲ್‌ ಎಸ್‌ಡೆಲ್‌, ಎಬಿಸಿ, ಅಲ್ಫಾರೋಮಿಯಾ, ಅಮಿಲ್ಕರ್‌, ಸಿಕೊಲೊ, ಪೋರ್ಷೆ, ರಾವೆಲ್‌, ಗೋರ್ಡೆನೀಸ್‌ ಬ್ಲೂ ಹೀಗೆ ನಾವು ಹೆಸರೇ ಕೇಳಿರದ ಕಂಪನಿಗಳ ನಾನಾ ಗಾತ್ರ, ವೈಶಿಷ್ಟ್ಯದ ಕಾರುಗಳಿವೆ ಇಲ್ಲಿ. 1942ರಲ್ಲಿ ಪಾಲ್‌ ಅಲೈìನ್ಸ್‌ ವಿನ್ಯಾಸಗೊಳಿಸಿದ ಅಲ್ಯುಮಿನಿಯಂ ಕವಚದ ಕೋಳಿ ಮೊಟ್ಟೆಯ ಆಕಾರದ ಕಾರೂ ಇವುಗಳಲ್ಲೊಂದು.    

ಪ್ರತಿಭಟನೆಯಿಂದ ತೆರವಾಯಿತು ವಸ್ತು ಸಂಗ್ರಹಾಲಯ 
ಆದರೆ 1977ರಲ್ಲಿ ಕಾರ್ಮಿಕ ಸಂಘಟನೆ, ಷ್ಲುಂಫ್ ಸಹೋದರರ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ನೌಕರರನ್ನು ವೇತನದ ವಿಷಯದಲ್ಲಿ ಎತ್ತಿ ಕಟ್ಟಿದರು. 2000 ಕಾರ್ಮಿಕರು ಲಾಕೌಟ್‌ ಮಾಡಿ ಪ್ರತಿಭಟನೆ ನಡೆಸಿದರು. ಅಮೂಲ್ಯವಾದ ಒಂದು ಕಾರನ್ನು ಸುಟ್ಟು ಹಾಕಿದರು. ಸಹೋದರರು ಅವರ ಬೇಡಿಕೆಗಳನ್ನು ಈಡೇರಿಸಲಾಗದೆ ಸ್ವಿಟ್ಜರ್‌ಲೆಂಡ್‌ಗೆ ಪಲಾಯನ ಮಾಡಿದರು.

ಕಾರ್ಮಿಕರು ಕಾರು ಸಂಗ್ರಹಾಲಯವನ್ನು ಬಾಗಿಲು ತೆರೆದು ಪ್ರದರ್ಶನಕ್ಕಿಟ್ಟರು. ಮೊದಲ ವರ್ಷ 80 ಸಾವಿರ ಜನರು ಶುಲ್ಕ ಕೊಟ್ಟು ಈ ಅದ್ಭುತ ಸಂಗ್ರಹವನ್ನು ವೀಕ್ಷಿಸಿದರು. ನಂತರ ಫ್ರಾನ್ಸ್‌ ಸರಕಾರ ಇದೊಂದು ರಾಷ್ಟ್ರೀಯ ಪರಂಪರೆಯ ಐತಿಹಾಸಿಕ ಸಂಗ್ರಹವೆಂದು ಪರಿಗಣಿಸಿ ಕಾರು ಸಂಗ್ರಹಾಲಯವನ್ನು ವಶಕ್ಕೆ ತೆಗೆದುಕೊಂಡಿತು. 1982ರಲ್ಲಿ ಅಟೊಮೊಬೈಲ್‌ ಮ್ಯೂಸಿಯಂ ಎಂಬ ಹೆಸರಿನಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿತು.

1999ರಲ್ಲಿ ಸರಕಾರವು ಷ್ಲುಂಫ್ ಸಹೋದರರ ಕಾರ್ಖಾನೆಯ ಹೊರಭಾಗದಲ್ಲಿ ಕಾರುಗಳ ಸಂಗ್ರಹಕ್ಕೆ ವಿಶಾಲವಾದ ಆಧುನಿಕ ಸೌಲಭ್ಯಗಳಿರುವ ಸ್ಥಳವನ್ನು ಏರ್ಪಡಿಸಿ ಅವರ ತಾಯಿಗೆ ಈ ಸಂಗ್ರಹಾಲಯವನ್ನು ಸಮರ್ಪಿಸಿದೆ. ಹತ್ತು ವರ್ಷಗಳಲ್ಲಿ 4 ದಶಲಕ್ಷ ಜನ ಸಂಗ್ರಹವನ್ನು ವೀಕ್ಷಿಸಿದ್ದಾರೆ. ರಜಾ ದಿನಗಳ ಹೊರತು ಎಲ್ಲ ದಿನಗಳಲ್ಲೂ ಅದರ ವೀಕ್ಷಣೆಗೆ ಅವಕಾಶವಿದೆ. 

* ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.