ಕಾರ್ಡ್ ಪತ್ತೆ ಹಚ್ಚುವುದು
Team Udayavani, Jan 30, 2020, 4:17 AM IST
ನಿಮಗೆ ಜಾದೂವಿನಲ್ಲಿ ಚಪ್ಪಾಳೆ ಗಿಟ್ಟಿಸಲು, ಪ್ರೇಕ್ಷಕರಲ್ಲಿ ಬೆರಗು ಮೂಡಿಸುವ ಸರಣಿ ಪ್ರಯತ್ನದಲ್ಲಿ ಮತ್ತೆ ಕಾರ್ಡ್‌ನ ಯಕ್ಷಣಿ ಬಗ್ಗೆ ಹೇಳುತ್ತೇನೆ. ಇಸ್ಪೀಟ್ ಕಾರ್ಡಿನಲ್ಲಿ ಹೇಗೆಲ್ಲಾ, ಏನೆಲ್ಲಾ ರೋಮಾಂಚನ ಮೂಡಿಸಬಹುದು ಗೊತ್ತಾ? ನೋಡಲು ಸುಲಭ ಅನಿಸಿದರೂ. ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಿದ್ದಲ್ಲಿ ನೀವು ಗ್ಯಾರಂಟಿ ಪ್ರೇಕ್ಷಕರನ್ನು ಆಶ್ಚರ್ಯದ ಸಮುದ್ರದಲ್ಲಿ ತೇಲಿಸಿಬಿಡುತ್ತೀರಿ.
ಕಾರ್ಡಿನ ಆಟ ಹೀಗೆ ಶುರು ಮಾಡಿ. ಜಾದೂಗಾರ ಇಸ್ಪೀಟ್ ಕಾರ್ಡಿನ ಎಲೆಗಳನ್ನು ತನ್ನ ಕೈಯಲ್ಲಿ ಹರಡಿಕೊಳ್ಳಬೇಕು. ನಂತರ, ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು ಯಾವುದಾದರೂ ಒಂದು ಕಾರ್ಡ್‌ಅನ್ನು ತೆಗೆದು ಅದನ್ನು ನೆನಪಿಟ್ಟುಕೊಂಡು, ಪುನಃ ಕಾರ್ಡ್‌ಗಳ ಜೊತೆ ಸೇರಿಸಲು ಹೇಳಬೇಕು. ಮಾತ್ರವಲ್ಲ ಅದನ್ನು ಜಾದೂಗಾರನಿಗೆ ತೋರಿಸಬಾರದು ಅಂತಹೇಳಬೇಕು. ಪ್ರೇಕ್ಷಕನು ಹಾಗೆಯೇ ಮಾಡುತ್ತಾನೆ. ಜಾದೂಗಾರ ಕ್ಷಣಾರ್ಧದಲ್ಲಿ ಆ ಕಾರ್ಡ್ ಅನ್ನು ಉಳಿದ ಕಾರ್ಡ್‌ಗಳ ಮಧ್ಯದಿಂದ ತೆಗೆದು ತೋರಿಸುತ್ತಾನೆ!!!???
ಇದರ ಹಿಂದಿನ ರಹಸ್ಯ ಇಷ್ಟೆ.
ಇಸ್ಪೀಟ್ ಪ್ಯಾಕಿನ ಒಂದು ಬದಿಯಲ್ಲಿ ಸ್ಕೆಚ್ ಪೆನ್ನಿನಿಂದ ಮೂರು ಗೆರೆಗಳನ್ನು ಎಳೆದು ಸಿದ್ಧವಾಗಿಟ್ಟುಕೊಳ್ಳಿರಿ (ಒಂದನೇ ಚಿತ್ರವನ್ನು ಗಮನಿಸಿ). ಪ್ರೇಕ್ಷಕ ಕಾರ್ಡ್‌ಅನ್ನು ಆರಿಸುವಾಗ ಈ ಗೆರೆಗಳು ಆತನಿಗೆ ಕಾಣಿಸದಂತೆ ಎಚ್ಚರ ವಹಿಸಿ. ಆತ ಕಾರ್ಡ್‌ಅನ್ನು ತೆಗೆದು ನೋಡುವುದರೊಳಗೆ ನಿಮ್ಮ ಕೈಯಲ್ಲಿರುವ ಕಾರ್ಡ್‌ಗಳನ್ನು ಸಮನಾಗಿ ಜೋಡಿಸಿಕೊಂಡು, ಇಡೀ ಪ್ಯಾಕನ್ನು ತಿರುಗುಮುರುಗಾಗಿ ಹಿಡಿದಿಟ್ಟುಕೊಳ್ಳಿ. ಇದನ್ನು ಬಹಳ ಉಪಾಯವಾಗಿ ಮಾಡಬೇಕು. ಸ್ವಲ್ಪ ಯಡವಟ್ಟಾದರೂ ಕಷ್ಟವೇ. ನಂತರ, ಆರಿಸಿದ ಕಾರ್ಡ್‌ಅನ್ನು ಪ್ಯಾಕ್‌ನಲ್ಲಿ ಇಷ್ಟ ಬಂದ ಕಡೆ ಇಡಲು ಹೇಳಿ. ಈಗ ಆತನ ಕಾರ್ಡ್‌ಅನ್ನು ಗುರುತಿಸುವುದು ಬಹಳ ಸುಲಭ. ಆತನ ಕಾರ್ಡ್ ಇರುವಲ್ಲಿ ಪ್ಯಾಕಿನ ಒಂದು ಬದಿಯಲ್ಲಿ ಮೂರು ಗೆರೆಗಳು ತುಂಡಾಗಿರುತ್ತವೆ. ಇನ್ನೊಂದು ಬದಿಯಲ್ಲಿ ಮೂರು ಚುಕ್ಕೆಗಳಿರುತ್ತವೆ (ಎರಡನೇ ಚಿತ್ರವನ್ನು ಗಮನಿಸಿ).
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.