ಕಾರ್ಡ್ ಎಸ್ಕೇಪ್
Team Udayavani, Jun 20, 2019, 5:00 AM IST
ಜಾದೂಗಾರ, ಪ್ರೇಕ್ಷಕರಿಂದ ಒಂದು ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಅದರ ಮಧ್ಯದಲ್ಲಿ ಪಂಚಿಂಗ್ ಮೆಶಿನ್ ಸಹಾಯದಿಂದ ಒಂದು ತೂತನ್ನು ಮಾಡುತ್ತಾನೆ. ಹಾಗೆಯೇ ತನ್ನಲ್ಲಿರುವ ಒಂದು ಚಿಕ್ಕ ಕವರಿಗೂ ಕೂಡ ಮಧ್ಯಭಾಗದಲ್ಲಿ ಒಂದು ತೂತನ್ನು ಮಾಡುತ್ತಾನೆ. ವಿಸಿಟಿಂಗ್ ಕಾರ್ಡನ್ನು ಕವರಿನಲ್ಲಿಟ್ಟು ಕವರನ್ನು ಅಂಟಿಸುತ್ತಾನೆ. ನಂತರ ಒಂದು ದಾರವನ್ನು ಕವರ್ ಮತ್ತು ಕಾರ್ಡಿನ ತೂತಿನಿಂದ ಪೋಣಿಸುತ್ತಾನೆ. ನಂತರ ದಾರದ ತುದಿಗಳನ್ನು ಇಬ್ಬರು ಸಹಾಯಕರಿಗೆ ಕೊಟ್ಟು ಎಳೆದಾಗ ವಿಸಿಟಿಂಗ್ ಕಾರ್ಡ್ ಹರಿಯದೆ ದಾರದಿಂದ ಹೊರ ಬರುತ್ತದೆ.
ತಂತ್ರ:
ಚಿತ್ರವನ್ನು ಸರಿಯಾಗಿ ಗಮನಿಸಿ. ಕವರಿನ ಇನ್ನೊಂದು ತುದಿಯನ್ನು ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಿ. ಕವರಿನಲ್ಲಿ ಕಾರ್ಡನ್ನು ಹಾಕುವಾಗ ಅದರ ಅರ್ಧದಷ್ಟು ಭಾಗ ಹೊರಬಂದಿರಬೇಕು. ಈ ಭಾಗವನ್ನು ಪ್ರೇಕ್ಷಕರಿಗೆ ಕಾಣಿಸದಂತೆ ನಿಮ್ಮ ಕೈನಿಂದ ಮುಚ್ಚಿಕೊಳ್ಳಿ. ಕವರಿನ ಬಾಯಿಯನ್ನು ಅಂಟಿಸಿ. ಈಗ ಒಂದು ದಾರವನ್ನು ಕವರಿನ ಮೇಲೆ ಮಾಡಿದ ತೂತುಗಳ ಮುಖಾಂತರ ಪೋಣಿಸಿ. ದಾರವು ಕಾರ್ಡಿನ ತೂತಿನ ಮೂಲಕ ಹೋಗದೆ ಬರೀ ಕವರಿನ ತೂತಿನ ಮುಖಾಂತರ ಹೊರಬರುತ್ತದೆ. ಕಾರ್ಡನ್ನು ಯಾರಿಗೂ ತಿಳಿಯದಂತೆ ಒಳಗೆ ತಳ್ಳಿ. ಇಬ್ಬರು ಸಹಾಯಕರನ್ನು ಕರೆದು ದಾರದ ಒಂದೊಂದು ತುದಿಯನ್ನು ಸಡಿಲವಾಗಿ ಹಿಡಿಯಲು ಹೇಳಿ. ಕವರಿನ ಮೊದಲೇ ಕತ್ತರಿಸಿದ್ದ ತುದಿಯನ್ನು ಹರಿದು ಕಾರ್ಡನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹಿಡಿದುಕೊಂಡು ದಾರವನ್ನು ಎಳೆಯಲು ಹೇಳಿ. ಅವರು ಎಳೆಯುತ್ತಿದ್ದಂತೆ ಕಾರ್ಡನ್ನು ಒಮ್ಮೆಲೆ ಹೊರಗೆ ಎಳೆಯಿರಿ. ಕಾರ್ಡು ಹರಿಯದೆ ದಾರದ ಮೂಲಕ ಹೊರಬಂದಿದ್ದನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಪಡುತ್ತಾರೆ.
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.