ಹಿರಿಮಗನ ದೂರದೃಷ್ಠಿ
Team Udayavani, Feb 9, 2017, 3:45 AM IST
ಒಂದೂರಿನಲ್ಲಿ ರಾಮರಾಯ ಎಂಬವರಿಗೆ ಮೂರು ಮಕ್ಕಳಿರುತ್ತಾರೆ. ಅವರಿಗೆ ವಿದ್ಯೆ, ಶಿಸ್ತು ನೀಡಿ ಸುಖವಾಗಿ ಸಾಕಿರುತ್ತಾರೆ. ಹೀಗೆ ದೊಡ್ಡವರಾದ ಮೇಲೆ ಅವರ ಜ್ಞಾನ ಪರೀಕ್ಷೆ ಮಾಡಬೇಕೆಂದು ಮೂವರನ್ನು ಕರೆದು ಅಯ್ನಾ ಮಕ್ಕಳಿರಾ, ನನಗೆ ವಯಸ್ಸಾಯಿತು. ನಿಮ್ಮಗೆ ಓದು, ಬರಹ ಎಲ್ಲವನ್ನು ಕಲಿಸಿ ವಿದ್ಯಾವಂತರನ್ನಾಗಿ ಮಾಡಿದ್ದೇನೆ. ಹಾಗಾಗಿ ನಿಮ್ಮ ವಿದ್ಯೆಗಿಂತ ಜ್ಞಾನ ಎಷ್ಟಿದೆ ಎಂಬುದನ್ನು ನಾನು ಪರೀಕ್ಷಿಸಬೇಕು ಎಂದನು. ಮೂವರು ಒಪ್ಪಿದರು.
ನೀವು ಮೂವರಿಗೂ ಒಂದೊಂದು ಚಿನ್ನದ ಬಳೆ ನೀಡುತ್ತೇನೆ. ಅದನ್ನು ಸದ್ವಿನಿಯೋಗದಿಂದ ಬಳಸಿಕೊಳ್ಳಿ. ಮೂರು ತಿಂಗಳ ಕಾಲಾವಧಿ ನೀಡುತ್ತೇನೆ ಎಂದು ಚಿನ್ನದ ಬಳೆಯನ್ನು ನೀಡಿ ಶುಭವಾಗಲಿ ಎಂದು ಹಾರೈಸಿ ಕಳಿಸುತ್ತಾನೆ.
ನಂತರ ಮೂವರು ಒದೊಂದು ದಿಕ್ಕಿಗೆ ಹೊರಡುತ್ತಾರೆ. ಮೂರು ತಿಂಗಳ ನಂತರ ಕಿರಿಯವ ಬಂದು ನಾನು ಪೂರ್ವದ ದಿಕ್ಕಿನಲ್ಲಿ ಸಾಗಿ ಅಲ್ಲಿರುವ ಸಾಧುಗಳ ಬಳಿ ಶಿಷ್ಯನಾಗಿ ಉತ್ತಮ ನೀತಿಗಳನ್ನು ಕಲಿತೆ. ಗುರು ಕಾಣಿಕೆಗೆ ಬಳೆ ಅರ್ಪಿಸಿದೆ ಎಂದನು. ರಾಮರಾಯ ಬೇಷ್ ಎಂದು ಬೆನ್ನು ತಟ್ಟಿದ. ಮರುದಿನ ಮಧ್ಯಮದವ ಬಂದು ನಾನು ಬಳೆಯನ್ನು ಮಾರಿ. ಬಂದ ಹಣವನ್ನು ಬಡವರಿಗೆ, ನಿರಾ]ತರಿಗೆ ಹಂಚಿದೆ. ಅವರು ನನ್ನನ್ನು ಪ್ರೀತಿ ಆದರಗಳಿಂದ ಸತ್ಕರಿಸಿದರು ಎಂದ. ಜನರ ಮೆಚ್ಚುಗೆ ಪಡೆದನೆಂದು ಸಂತಸಗೊಂಡ ರಾಮರಾಯ.
ಆದರೆ ಹಿರಿಯ ಮಗ ವರ್ಷವಾದರೂ ಬರಲಿಲ್ಲ. ಅಷ್ಟರಲ್ಲಿ ತನ್ನಿಬ್ಬರೂ ಮಕ್ಕಳಿಗೂ ಮದುವೆ ಮಾಡಿದ. ಇಂದಲ್ಲ ನಾಳೆ ಬರುತ್ತಾನೆಂದು ಕಾದರೂ ಎರಡು, ಮೂರು ವರ್ಷವಾದರೂ ಬರಲಿಲ್ಲ. ತಂದೆ ಹುಡುಕಿಕೊಂಡು ಹೊರಟ. ತಂದಿದ್ದ ಹಣವೆಲ್ಲ ಖಾಲಿಯಾಗಿ ಒಂದೂರಿನಲ್ಲಿ ತಂಗಿದ.
ಅಲ್ಲಿಗೆ ಧಾವಿಸಿದ ಅಪರಿಚಿತ ಯುವಕ ರಾಮರಾಯನ ಸ್ಥಿತಿ ತಿಳಿದು, “ಅಯ್ನಾ ನೀನೇನು ಚಿಂತಿಸಬೇಡ. ನಮ್ಮೂರಿನ ನಾಯಕರು ಈ ತರ ಬರಿದಾದ ಜನಗಳಿಗೋಸ್ಕರವೇ ಒಂದು ಶಾಲೆಯನ್ನು ನಿರ್ಮಿಸಿ¨ªಾರೆ. ಅಲ್ಲಿ ನೀನು ನಮ್ಮ ನಾಯಕರು ಹೇಳಿದ ಕೆಲಸ ಮಾಡು. ಅದು ಕೃಷಿಯಾಗಿರಲಿ, ಗೋ ಸಾಕಾಣೆ ಅಥವ ಬೇರಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸು. ನಿನ್ನ ಯೋಗ ಕ್ಷೇಮಗಳನ್ನ ಅವರು ನೋಡಿಕೊಳ್ಳುತ್ತಾರೆ, ಆದರೆ ನೀನು ನಿಯತ್ತಿನಿಂದ ಶ್ರಮಿಸಿ ದುಡಿಯಬೇಕು’ ಎಂದು ತಿಳಿಸುತ್ತಾನೆ.
ಅಪರಿಚಿತನ ಮಾತಿಗೆ ಒಪ್ಪಿ ರಾಮರಾಯರು ನಾಯಕನಿರುವ ಕಡೆ ಹೋಗುತ್ತಾರೆ. ಈತನನ್ನು ಕಂಡಕೂಡಲೇ ನಾಯಕನು ಸಂತೋಷದಿಂದ ರಾಮರಾಯನ ಕಾಲಿಗೆ ಬೀಳುತ್ತಾನೆ.
ವಿಚಾರಿಸಿದಾಗ ಅವನೇ ರಾಮರಾಯನ ಹಿರಿಮಗನೆಂದು ತಿಳಿಯುತ್ತದೆ. ಅವನು ತನ್ನ ವೃತ್ತಾಂತವನ್ನು ತಂದೆಗೆ ವಿವರಿಸುತ್ತಾನೆ.
” ನೀವು ನೀಡಿದ ಬಳೆಯನ್ನು ನೀಡಿ ಒಬ್ಬ ಬಡವನಿಂದ ಜಮೀನನ್ನು ಪಡೆದೆ. ಅಲ್ಲಿ ದವಸ, ಧಾನ್ಯಗಳನ್ನ ಬಿತ್ತಿ ಕಷ್ಟ ಪಟ್ಟು ಬೆವರು ಹರಿಸಿ ದುಡಿದೆ. ಫಸಲು ಚೆನ್ನಾಗಿ ಬರಲು ಅದನ್ನು ಮಾರಾಟ ಮಾಡಿ ಒಳ್ಳೆಯ ಮತ್ತಷ್ಟು ಜಾಗ ಖರೀದಿಸಿ ಬಡವರಿಗೆ, ನಿರುದ್ಯೋಗಿಗಳಿಗೆ ಕೆಲಸ ನೀಡಿ ಆಶ್ರಯ ನೀಡುತ್ತಿದ್ದೇನೆ. ಕಾಯಕವೇ ಕೈಲಾಸವೆಂದು ಅವರು ಸ್ವಾವಲಂಬಿಗಳಾಗಿ ಬದುಕುತ್ತಿ¨ªಾರೆ’ ರಾಮರಾಯ ಮಗನ ಸಾತ್ವಿಕ ಗುಣಗಳಿಗೆ ಸೋತು ಖುಷಿಯಿಂದ ತಬ್ಬಿಕೊಳ್ಳುತ್ತಾನೆ. ಇಬ್ಬರು ಮಕ್ಕಳನ್ನು ಕರೆಸಿಕೊಂಡು ಎಲ್ಲರೂ ಸುಖದಿಂದ ಬಾಳುತ್ತಾರೆ.
ನೀತಿ: ಮಾಡುವ ಕೆಲಸದಲ್ಲಿ ಸಾತ್ವಿಕ ಚಿಂತನೆಗಳಿದ್ದರೆ ಫಲ ದೊರೆಯುತ್ತದೆ.
– ಎಡೆಯೂರು ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.