ದೇಹದೊಳಗೊಂದು ಗಡಿಯಾರವಿದೆ!


Team Udayavani, Apr 20, 2017, 3:45 AM IST

GADIYARA.jpg

ನಮ್ಮ ದೈನಂದಿನ ಜೀವನ ಒಂದು ಬಗೆಯ ಕ್ರಮಬದ್ಧತೆಗೆ ಒಗ್ಗಿ ಹೋಗಿರುತ್ತದೆ. ರಾತ್ರಿಯಲ್ಲಿ ನಿದ್ದೆ, ಹಗಲಿನಲ್ಲಿ ಕೆಲಸ, ಅವುಗಳ ಮಧ್ಯೆ ಶೌಚ, ಸ್ನಾನ, ತಿಂಡಿ, ಊಟ, ಉಪಾಹಾರ, ಮನರಂಜನೆ ಮುಂತಾದ ಚಟುವಟಿಕೆಗಳು ಅಭ್ಯಾಸದಂತೆ ನಡೆದುಹೋಗುತ್ತವೆ. ಆದರೆ ಇವುಗಳ ಕ್ರಮದಲ್ಲಿ ಅಥವಾ ಸಮಯದಲ್ಲಿ ವ್ಯತ್ಯಾಸವಾದರೆ ಮಾತ್ರ ಇನ್ನಿಲ್ಲದ ಕಿರಿಕಿರಿ ಉಂಟಾಗುತ್ತದೆ. ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರವೇ(ಬಯೋಲಾಜಿಕಲ್‌ ಕ್ಲಾಕ್‌) ಇದಕ್ಕೆ ಕಾರಣ.

ಸಾಮಾನ್ಯವಾಗಿ ರಸ್ತೆ, ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭಸುವುದು ತಡರಾತ್ರಿಯಲ್ಲಿ ಅಥವಾ ಬೆಳಗಿನ ಜಾವದಲ್ಲಿ. ದೇಹ ನಿದ್ದೆ ಅಥವಾ ವಿಶ್ರಾಂತಿ ಬಯಸುತ್ತಿದ್ದರೂ ವಾಹನಚಾಲನೆಯಂಥ ಅತ್ಯಂತ ಜಾಗರೂಕತೆಯ ಕೆಲಸಕ್ಕೆ ಅದನ್ನು ಒತ್ತಾಯಪೂರ್ವಕವಾಗಿ ತೊಡಗಿಸುವುದೇ ಇದಕ್ಕೆ ಕಾರಣ. ಇದೇ ರೀತಿ ಹಗಲಿನ ಲವಲವಿಕೆಯ ಸಮಯದಲ್ಲಿ ಬಲವಂತವಾಗಿ ವಿಶ್ರಮಿಸುವ ಅಥವಾ ನಿದ್ರಿಸುವ ಪ್ರಯತ್ನವೂ ಸಫ‌ಲವಾಗುವುದಿಲ್ಲ. ಇವೆಲ್ಲ ನಿಸರ್ಗದ ಜಾಯಮಾನಕ್ಕೆ ಒಗ್ಗದ ಕ್ರಿಯೆಗಳಾಗಿರುವುದೇ ಕಾರಣ.

ಎಲ್ಲ ಜೀವಿಗಳಂತೆ ನಮ್ಮ ದೇಹವೂ ನಿಸರ್ಗದ ಒಂದು ಕೂಸು. ಸ್ವಾಭಾವಿಕವಾಗಿಯೇ ಅದು ನೈಸರ್ಗಿಕ ಪರಿಸರದ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ವಿಶೇಷವಾಗಿ ಹಗಲು- ರಾತ್ರಿಗಳು ಜೀವಿಗಳ ವರ್ತನೆಯ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತವೆ. ಜೀವಿಗಳ ದೇಹದಲ್ಲಿನ ಜೈವಿಕ ಗಡಿಯಾರ ಈ ನೈಸರ್ಗಿಕ ಕ್ರಿಯೆಗೆ ಒಳಪಟ್ಟು ಸ್ಪಂದಿಸುವುದೇ ಇದಕ್ಕೆ ಕಾರಣ.

ದೇಹದ ಸಮಸ್ತ ಚಟುವಟಿಕೆಗಳೂ ನೇರವಾಗಿ ಅಥವಾ ಪರ್ಯಾಯವಾಗಿ ಮೆದುಳಿನ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಉಸಿರಾಟ, ಜೀರ್ಣಕ್ರಿಯೆ, ಚಯಾಪಚಯ (ಮೆಟಬಾಲಿಸಮ್‌)ಗಳಂತಹ ಅನಿಯಂತ್ರಿತ ಕ್ರಿಯೆಗಳಾಗಲೀ ಅಥವಾ ಅಗತ್ಯಕ್ಕೆ ತಕ್ಕಂತೆ ವರ್ತಿಸುವ ಕಣ್ಣು, ಕೈಕಾಲುಗಳ ಚಲನೆಯಂತಹ ನಿಯಂತ್ರಿತ ಕಾರ್ಯಗಳಾಗಲಿ, ಮೆದುಳಿನ ಅರಿವಿಗೆ ಬಾರದೆ ನಡೆಯುವುದಿಲ್ಲ. ಇವು ಸುಸಂಬದ್ಧವಾಗಿ ನಡೆಯುವುದಕ್ಕೆ ದೇಹದಲ್ಲಿ ವ್ಯವಸ್ಥಿತ, ಕಾಲಬದ್ಧ ಕಾರ್ಯನಿರ್ವಹಣಾ ವ್ಯವಸ್ಥೆ ಬೇಕೇ ಬೇಕು. ಇಂತಹ ವ್ಯವಸ್ಥೆಯೇ ಜೈವಿಕ ಗಡಿಯಾರ.

ದೇಹದ ವಿವಿಧ ಭಾಗಗಳಲ್ಲಿನ ಈ ವ್ಯವಸ್ಥೆಯನ್ನು ಮೆದುಳಿನಲ್ಲಿರುವ ಪ್ರಮುಖ ಕೇಂದ್ರೀಕೃತ ಜೈವಿಕ ಗಡಿಯಾರ ಸಮಗ್ರ ರೀತಿಯಲ್ಲಿ ನಿಯಂತ್ರಿಸುತ್ತದೆ. ದೇಹದ ಆಂತರಿಕ ಮತ್ತು ಬಾಹ್ಯವರ್ತನೆ ಸಮಯಾನುಸಾರವಾಗಿರುವುದಕ್ಕೆ ಇದೇ ಕಾರಣ. 

ಮಾನವನಂತೆಯೇ ಇತರ ಪ್ರಾಣಿಪಕ್ಷಿಗಳ ವರ್ತನೆಗಳೂ ಹೀಗೇ ಇರುವುದನ್ನು ನಾವು ಕಾಣಬಹುದು. ಬೆಳಗಾಗುತ್ತಿದ್ದಂತೆ ಕೋಳಿ ಕೂಗತೊಡಗುತ್ತದೆ. ಹಕ್ಕಿಗಳ ಚಿಲಿಪಿಲಿ ಪ್ರಾರಂಭವಾಗುತ್ತದೆ. ಕಾಗೆಗಳು ಕಾ…ಕಾ.. ಎಂದು ಕೂಗುತ್ತಾ ಹಾರಾಡತೊಡಗುತ್ತವೆ. ಕೊಟ್ಟಿಗೆಯಲ್ಲಿ ಹಸು ಕರುಗಳು ಅಂಬಾ ಎಂದು ಕರೆಯಲಾರಂಭಿಸುತ್ತವೆ. ಮೂಕಪ್ರಾಣಿಗಳ ಈ ಎಲ್ಲ ವರ್ತನೆಗೂ ಜೈವಿಕ ಗಡಿಯಾರವೇ ಪ್ರೇರಣೆ. 

ಸಸ್ಯ ಸಂಕುಲವೂ ಇದಕ್ಕೆ ಹೊರತಾಗಿಲ್ಲ. ಬೆಳಗಾಗುತ್ತಿದ್ದಂತೆ ಮಲ್ಲಿಗೆ, ಪಾರಿಜಾತ, ಗುಲಾಬಿಯಂಥ ಹೂವುಗಳು ಗಿಡದಲ್ಲಿ ಅರಳಿ ಘಮಘಮಿಸತೊಡಗುತ್ತವೆ. ಕೇವಲ ರಾತ್ರಿಯಲ್ಲೇ ಅರಳುವ ಬ್ರಹ್ಮಕಮಲದಂತಹ ಹೂವುಗಳೂ ಉಂಟು. ಋತುಮಾನಕ್ಕೆ ಅನುಗುಣವಾಗಿ ಚಿಗುರುವ, ಹೂ ಬಿಡುವ, ಕಾಯಿ ಬಿಟ್ಟು ಹಣ್ಣಾಗಿಸುವ ಗಿಡಮರಗಳ ವರ್ತನೆ ಅವುಗಳಲ್ಲಿನ ಜೈವಿಕ ಗಡಿಯಾರದ ಪ್ರಭಾವಕ್ಕೆ ಇನ್ನೊಂದು ನಿದರ್ಶನ ಎನ್ನಬಹುದು.ಇಷ್ಟೇ ಅಲ್ಲ, ಬಾಲ್ಯ, ಯೌವನ, ವೃದ್ಧಾಪ್ಯಗಳಂತಹ ದೈಹಿಕ ಬೆಳವಣಿಗೆಗಳ ಬದಲಾವಣೆಗಳಿಗೂ ಜೈವಿಕ ಗಡಿಯಾರವೇ ಕಾರಣ ಎಂದು ಸಹ ವಿಜಾnನಿಗಳು ಹೇಳುತ್ತಾರೆ.

ಇಂದಿನ ನಾಗರಿಕತೆಯ ನಾಗಾಲೋಟದಲ್ಲಿ ನಿಸರ್ಗ ನಿಯಮಗಳಿಗೆ ವಿರುದ್ಧವಾಗಿ ಅನೇಕ ಬಗೆಯ ಅಭಿವೃದ್ಧಿ ಪರ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿರುವುದು ಜೈವಿಕ ಗಡಿಯಾರದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಏರುಪೇರುಗಳಿಂದ ನೈಸರ್ಗಿಕ ಸಮತೋಲನ ತಪ್ಪುತ್ತಿದ್ದು ಭೂಕಂಪ, ಚಂಡಮಾರುತ, ಸುನಾಮಿ, ಭೀಕರ ಪ್ರವಾಹಗಳಂಥ ನೈಸರ್ಗಿಕ ವಿಕೋಪಗಳೂ ಸೇರಿದಂತೆ ಅನೇಕ ಬಗೆಯ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ, ಇದರ ಪ್ರಭಾವ ಜೈವಿಕ ಗಡಿಯಾರದ ಮೇಲೂ ಕಂಡುಬರಬಹುದಾಗಿದೆ ಎಂದೂ ತಜ್ಞರು ಎಚ್ಚರಿಸುತ್ತಿದ್ದಾರೆ. 

-ಡಿ. ವಿ. ಹೆಗಡೆ

ಟಾಪ್ ನ್ಯೂಸ್

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.