ನಾಣ್ಯ ತುಂಟತನ ಮಾಡುತ್ತಾ?
Team Udayavani, Oct 11, 2018, 6:00 AM IST
ಪ್ರದರ್ಶನ:
ಒಂದು ಖಾಲಿ ಬೆಂಕಿ ಪೊಟ್ಟಣದಲ್ಲಿ ಒಂದು ನಾಣ್ಯವನ್ನು ಹಾಕಿ. ಇನ್ನೊಂದು ಖಾಲಿ ಬೆಂಕಿ ಪೊಟ್ಟಣವನ್ನು ಪ್ರೇಕ್ಷಕರಿಗೆ ತೋರಿಸಿ. ಈಗ ನಾಣ್ಯ ಹಾಕಿರುವ ಬೆಂಕಿ ಪೊಟ್ಟಣ ಮತ್ತು ಖಾಲಿಯಿರುವ ಬೆಂಕಿ ಪೊಟ್ಟಣ ಎರಡನ್ನೂ ಒಟ್ಟಿಗೆ ಉದ್ದುದ್ದವಾಗಿ ಒತ್ತಿ ಹಿಡಿದು ಮಂತ್ರವನ್ನು ಹೇಳುತ್ತಾ ಅಲುಗಾಡಿಸಿದಾಗ, ಏನಾಶ್ಚರ್ಯ!!! ನಾಣ್ಯವಿರುವ ಬೆಂಕಿಪೊಟ್ಟಣದಿಂದ ನಾಣ್ಯ ಮಾಯ! ಆ ತುಂಟ ನಾಣ್ಯ ಇನ್ನೊಂದು ಬೆಂಕಿ ಪೊಟ್ಟಣದೊಳಕ್ಕೆ ಬಂದು ಕುಳಿತುಬಿಟ್ಟಿದೆ. ಹೇಗೆ!!?
ಬೇಕಾಗಿರುವ ವಸ್ತುಗಳು:
ಒಂದು ನಾಣ್ಯ, ಎರಡು ಖಾಲಿ ಬೆಂಕಿ ಪೊಟ್ಟಣಗಳು
ಮಾಡುವ ವಿಧಾನ:
ಎರಡು ಮ್ಯಾಚ್ ಬಾಕ್ಸ್ನ ಮೇಲೆ 1 ಮತ್ತು 2 ಎಂದು ಬರೆದು ಗುರುತಿಸಿ. ಎರಡೂ ಬೆಂಕಿ ಪೊಟ್ಟಣಗಳ ಒಳಗಿನ ತಳ್ಳುವ ಬಾಕÕ…ನ ಒಂದು ಬದಿಯಲ್ಲಿ (ಚಿತ್ರ 2ರಲ್ಲಿ ತೋರಿಸಿರುವಂತೆ) ನಾಣ್ಯ ಸಲೀಸಾಗಿ ಹೊರಗೆ ಹೋಗುವಷ್ಟು ರಂಧ್ರ ಮಾಡಿ. ಈಗ 1 ಎಂದು ಬರೆದಿರುವ ಬೆಂಕಿ ಪೊಟ್ಟಣದಲ್ಲಿ ನಾಣ್ಯವನ್ನು ಹಾಕಿ. ಎರಡೂ ಬೆಂಕಿ ಪೊಟ್ಟಣಗಳ ರಂಧ್ರ ಇರುವ ಭಾಗ ಒಂದಕ್ಕೊಂದು ಅಂಟುವಂತೆ ಹತ್ತಿರ ತಂದು ಚಿತ್ರ 3ರಲ್ಲಿ ತೋರಿಸಿರುವಂತೆ ಒತ್ತಿ ಹಿಡಿಯಿರಿ. ಈಗ ಮಂತ್ರವನ್ನು ಹೇಳುತ್ತಾ ಎರಡೂ ಪೊಟ್ಟಣಗಳನ್ನು ಹುಷಾರಾಗಿ ಅಲುಗಾಡಿಸಿದಾಗ ನಾಣ್ಯ 1ನೇ ಬೆಂಕಿ ಪೆಟ್ಟಿಗೆಯ ರಂಧ್ರದಿಂದ 2ನೇ ಬೆಂಕಿಪೆಟ್ಟಿಗೆಯೊಳಕ್ಕೆ ಸೋರುವುದು. ನಂತರ ನಿಧಾನವಾಗಿ ಒಂದನೇ ಮ್ಯಾಚ್ ಬಾಕ್ಸ್ ತೆರೆದು ತೋರಿಸಿದರೆ, ಅಲ್ಲಿ ನಾಣ್ಯವಿರುವುದಿಲ್ಲ. ಆಶ್ಚರ್ಯಗೊಂಡ ನಿಮ್ಮ ಪ್ರೇಕ್ಷಕರಿಗೆ ಈಗ ಎರಡನೇ ಮ್ಯಾಚ್ ಬಾಕ್ಸ್ ನಲ್ಲಿ ನಾಣ್ಯ ಬಂದಿರುವುದನ್ನು ಓಪನ್ ಮಾಡಿ ತೋರಿಸಿ ಚಪ್ಪಾಳೆ ಗಿಟ್ಟಿಸಿ.
ಈ ಮ್ಯಾಜಿಕ್‌ಗೆ ವಿಡಿಯೊ ಲಿಂಕ್: goo.gl/8zpVXA
ನಿರೂಪಣೆ- ಗಾಯತ್ರಿ ಯತಿರಾಜ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.