ತಾಯಂದಿರ ದಿನದ ಸ್ಥಾಪಕಿಯ ಅಳಲು
Team Udayavani, Nov 7, 2019, 3:05 AM IST
ಪ್ರತಿ ವರ್ಷ ಮೇ 10ರಂದು ತಾಯಂದಿರ ದಿನವೆಂದು ಆಚರಿಸಲಾಗುತ್ತದೆ. ಆ ಪರಿಪಾಠವನ್ನು ಶುರುಮಾಡಿದ್ದು ಆ್ಯನ್ನಾ ಜಾರ್ವಿಸ್ ಎಂಬ ಮಹಿಳೆ. ಅಮೆರಿಕ ಪ್ರಜೆಯಾದ ಆ್ಯನ್ನಾ ಅಲ್ಲಿ ಸಮಾಜಸೇವಕಿಯಾಗಿ ಹೆಸರು ಮಾಡಿದಾಕೆ. ಅಲ್ಲದೆ ಅನ್ಯಾಯದ ವಿರುದ್ಧ ಪ್ರತಿಭಟನೆಗಳಲ್ಲೂ ಪಾಲ್ಗೊಳ್ಳುತ್ತಿದ್ದವಳು. ಅವರ ತಾಯಿಗೆ ಒಟ್ಟು 11 ಮಂದಿ ಮಕ್ಕಳು. ಅವರು 1905ರಲ್ಲಿ ತೀರಿಕೊಂಡರು. ಆ ಸಮಯದಲ್ಲಿಯೇ ಆ್ಯನ್ನಾ ಅವರಿಗೆ ತಮ್ಮ ತಾಯಿ ತೀರಿಕೊಂಡ ದಿನವನ್ನು ಅವರ ನೆನಪಿನಲ್ಲಿ “ತಾಯಂದಿರ ದಿನ’ವನ್ನಾಗಿ ಆಚರಿಸಬೇಕೆಂಬ ಯೋಚನೆ ಮೊಳೆತಿದ್ದು. ಅಲ್ಲಿಂದ ಮುಂದೆ ಸಿವಿಲ್ ಯುದ್ಧದಲ್ಲಿ ಮಡಿದ ಸೈನಿಕರ ತಾಯಂದಿರ ದಿನ ಎಂದು ಆಚರಿಸುವ ಬಗ್ಗೆ ಪ್ರಚಾರ ಮಾಡಿದಾಗಲೇ “ತಾಯಂದಿರ ದಿನ’ದ ಬಗ್ಗೆ ಸುದ್ದಿ ಹಬ್ಬಿದ್ದು. ನಂತರ 1914ರ ಸಮಯದಲ್ಲಾಗಲೇ ಮೇ 10ರಂದು ಅಮೆರಿಕವಾಸಿಗಳು ತಾಯಂದಿರ ಹಬ್ಬವನ್ನು ಆಚರಿಸಲು ಶುರುಮಾಡಿದ್ದರು.
ಬಹಳ ಬೇಗ ತಾಯಂದಿರ ದಿನ ಜನರ ನಡುವೆ ಪ್ರಚಾರ ಪಡೆಯಿತು. ಮಾರುಕಟ್ಟೆಯಲ್ಲಿ ಚಾಕಲೇಟ್ ಸಂಸ್ಥೆಗಳು, ಗ್ರೀಟಿಂಗ್ಸ್ ಮುಂತಾದ ಉಡುಗೊರೆ ತಯಾರಕ ಕಂಪನಿಗಳು ಈ ದಿನವನ್ನು ಚೆನ್ನಾಗಿಯೇ ಬಳಸಿಕೊಂಡವು. ಈ ಕಂಪನಿಗಳು ಚೆನ್ನಾಗಿ ಲಾಭ ಮಾಡಿಕೊಂಡವು. ಅದರಿಂದ ಪ್ರೇರಣೆ ಪಡೆದ ಇನ್ನಷ್ಟು ಸಂಸ್ಥೆಗಳು ಬೆಳೆದು ತಾಯಂದಿರ ದಿನವೆಂದರೆ ಲಾಭದಾಯಕ ಎನ್ನುವಂಥ ವಾತಾವರಣ ಸೃಷ್ಟಿಯಾಯಿತು. ಇದನ್ನು ಆ್ಯನ್ನಾ ನಿರೀಕ್ಷಿಸಿರಲಿಲ್ಲ. “ತಾಯಂದಿರ ದಿನ’ದ ಹಿಂದಿನ ನಿಜವಾದ ಉದ್ದೇಶವೇ ಮರೆಮಾಚಿದಂತಾಗಿ ಜನರನ್ನು ಕೊಳ್ಳುಬಾಕ ಸಂಸ್ಕೃತಿ ಆವರಿಸಿಕೊಳ್ಳುತ್ತಿರುವುದನ್ನು ಕಂಡು ಅವರಿಗೆ ಬೇಸರವಾಯಿತು. ಹೀಗಾಗಿ “ತಾಯಂದಿರ ದಿನ’ವನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದರು. ತಾಯಂದಿರ ದಿನವನ್ನು ಶುರುಮಾಡಿದಾಕೆಯೇ ಅದನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದ್ದು ಅಚ್ಚರಿಯ ಸಂಗತಿಯೇ ಸರಿ!
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.