ಗೂಳಿ ಜೊತೆ ಪ್ರಾಣಪಾಯದ ಆಟ!
Team Udayavani, May 24, 2018, 6:00 AM IST
ಜಗತ್ತಿನ ರೋಮಾಂಚಕಾರಿ ಕ್ರೀಡೆಗಳಲ್ಲಿ ಗೂಳಿ ಕಾಳಗ ಕೂಡಾ ಒಂದು. ಇದನ್ನು ಕ್ರೀಡೆ ಎಂದು ಕರೆಯದೆ ಪ್ರೇಕ್ಷಣ (ಸ್ಪೆಕ್ಟಕಲ್) ಎಂದೂ ಕೆಲವರು ಕರೆಯುತ್ತಾರೆ. ಈ ಪ್ರೇಕ್ಷಣ ಗೂಳಿ ಮತ್ತು ಮಾನವನ ಮಧ್ಯೆ ನಡೆಯುತ್ತದೆ. ಇದನ್ನು ಪ್ರಪಂಚದ ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ಕಾಣಬಹುದಾಗಿದೆ. ಗೂಳಿ ಕಾಳಗದ ತವರು ಸ್ಪೇನ್. ಪ್ರಾಚೀನ ಕ್ರೀಟ್, ತೆಸಲೇ ಹಾಗೂ ರೋಂ ಚಕ್ರಾಧಿಪತ್ಯಗಳಲ್ಲೂ ಕೊರಿಯ, ಚೀನ, ಈಜಿಪ್ಟ್ಗಳಲ್ಲೂ ಕ್ರಿ.ಪೂ. 228ದಿಂದಲೂ ಇದು ರೂಢಿಯಲ್ಲಿತ್ತೆಂದು ಚಾರಿತ್ರಿಕ ದಾಖಲೆಗಳಿಂದ ತಿಳಿದುಬರುತ್ತದೆ. ಜನರು ತಮ್ಮ ತಮ್ಮ ಮನೆಗಳಲ್ಲಿ ಸಾಕಿದ್ದ ಹೋರಿಗಳಿಂದಲೇ ಹಿಂದೆ ಈ ಕಾಳಗಗಳನ್ನು ನಡೆಸುತ್ತಿದ್ದರು.
ಚರಿತ್ರೆಯ ಪುಟಗಳಿಂದ…
ಈ ಕಾಳಗದ ಚರಿತ್ರೆ ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಸೆಲ್ಟಿ ಬೇರಿಯನ್ ಜನಾಂಗ ಪ್ಯುನಿಕ್ ಯುದ್ಧಗಳಿಗಿಂತ ಮುಂಚೆಯೇ ತಮ್ಮ ಪ್ರದೇಶದ ಕಾಡುಗಳಲ್ಲಿ ವಾಸಿಸುತ್ತಿದ್ದ ದನಗಳ ಕ್ರೂರ ಸ್ವಭಾವವನ್ನು ಕಂಡುಕೊಂಡು, ಅವನ್ನು ಹಿಡಿದು, ಸಾಕಿ, ಯುದ್ಧಗಳಲ್ಲಿ ಉಪಯೋಗಿಸಿಕೊಳ್ಳುತ್ತಿದ್ದರು. ಕ್ರಿ.ಪೂ 228ರ ಇಲಿಚಿಯ ಕಾಳಗದಲ್ಲಿ ದನಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಸ್ಪೇನಿನ ಆಂಡಲೂಸಿಯ ಪ್ರದೇಶದ ಬ್ಯಾಟಿಕಾದ ವೀರರು ಈ ಗೂಳಿಗಳೊಂದಿಗೆ ಹೋರಾಡಿ ಅವನ್ನು ಕೊಲ್ಲುತ್ತಿದ್ದುದು ಅಂದಿನ ಅತಿ ರೋಮಾಂಚಕ ಸುದ್ದಿಯಾಗಿತ್ತು. ಗೂಳಿಗಳ ಕೊಂಬಿನ ಇರಿತದಿಂದ ರಕ್ಷಿಸಿಕೊಳ್ಳಲು ಐಬೀರಿಯಾದ ಜನ ಚರ್ಮದ ಕೌದಿಗಳನ್ನು ಧರಿಸುತ್ತಿದ್ದರು. 411-711ರ ಮುನ್ನೂರು ವರ್ಷ ಅವಧಿಯ ವಿಸಿಗೋತ್ ಜನಾಂಗದ ಆಳ್ವಿಕೆಯಲ್ಲಿ ಗೂಳಿಕಾಳಗ ಮತ್ತಷ್ಟು ಅಭಿವೃದ್ಧಿಯಾಗಿ ಹಲವು ಬದಲಾವಣೆಗಳನ್ನು ಹೊಂದಿತು.
ಶ್ರೀಮಂತರಿಗಾಗಿ ಪ್ರತ್ಯೇಕ ಕಾಳಗ
ಲುಸಿಟಾನೋಸ್ (ಪೋರ್ಚುಗೀಸ್) ಜನಾಂಗದವರು ಈ ಕ್ರೀಡೆಯನ್ನು ಪ್ರಚುರಗೊಳಿಸಿ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಆಫ್ರಿಕದ ಮುಸ್ಲಿಮರು 711ರಲ್ಲಿ ಆಂಡಲೂಸಿಯ ಪ್ರದೇಶವನ್ನು ಗೆದ್ದು, ಅಲ್ಲಿನ ಆಕರ್ಷಕ ಗೂಳಿಕಾಳಗಕ್ಕೆ ತಮ್ಮ ಸಂಸ್ಕೃತಿಯ ಸೊಗಸಿಗೆ ತಕ್ಕಂತೆ ಮಾರ್ಪಾಡುಗೊಳಿಸಿದ್ದರು. ಇವರು ಪ್ರಸಿದ್ಧ ಸವಾರರಾಗಿದ್ದುದರಿಂದ ಗೂಳಿ ಕಾಳಗದಲ್ಲೂ ಕಾಳಗಪಟುಗಳು ಕುದುರೆಯ ಮೇಲೆ ಕುಳಿತು ಭರ್ಜಿ ಹಿಡಿದು ಹೋರಾಟ ನಡೆಸುತ್ತಿದ್ದರು. ಇವರ ಸೇವಕರು ನೆಲದ ಮೇಲೆ ನಿಂತು ಉಳಿದ ಗೌಣಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಜೀರ್ಣವಾಗಿದ್ದ ಗ್ರೀಕ್ ಪ್ರೇಕ್ಷಕಾಂಗಣಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳ ಸೊಗಸನ್ನವರು ಹೆಚ್ಚಿಸಿದರು. ಮೂರಿಷ್ ದಳವಾಯಿಗಳ ಹಾಗೂ ಐಬೀರಿಯನ್ ಶ್ರೀಮಂತರ ನಡುವೆ ಸ್ಪರ್ಧಾತ್ಮಕ ಕಾಳಗಗಳು ವಿಶೇಷವಾಗಿ ನಡೆಯುತ್ತಿದ್ದುವು. ಈ ಪ್ರೇಕ್ಷಣಗಳು ದೊಡ್ಡ ದೊಡ್ಡ ನಗರಗಳನ್ನು ಬಿಟ್ಟು ಉಳಿದೆಡೆ ಪೇಟೆ ಬೀದಿಯ ಚೌಕಗಳಲ್ಲಿ ಇಲ್ಲವೆ ಊರ ಹೊರಬಯಲಿನಲ್ಲಿ ನಡೆಯುತ್ತಿದ್ದುವು.
ಕಾಳಗ ನಡೆಯುತ್ತಿದ್ದ ಸ್ಥಳಗಳು
ಗೂಳಿಕಾಳಗ ನಡೆಯುವ ಪ್ರೇಕ್ಷಕಾಂಗಣವನ್ನು ವೃತ್ತಾಕಾರವಾಗಿ ನಾಲ್ಕು ಅಡಿ ಎತ್ತರದ ಹಲಗೆಗಳಿಂದ ನಿರ್ಮಿಸುತ್ತಾರೆ. ಇದರ ಹೆಸರು ಪ್ಲಾಜçಾ ಡಿ ಟೋರಸ್ ಎಂದು. ನಾಲ್ಕುನೂರಕ್ಕೂ ಹೆಚ್ಚು ಪ್ರೇಕ್ಷಕಾಂಗಣಗಳು ಸ್ಪೇನ್ ಒಂದರಲ್ಲೇ ಇವೆ. ಮ್ಯಾಡ್ರಿಡ್ ಮತ್ತು ಬಾರ್ಸಿಲೋನ ನಗರಗಳ ಪ್ರೇಕ್ಷಕಾಂಗಣಗಳನ್ನು 28,000 ಜನ ಕುಳಿತು ನೋಡುವಂತೆ ನಿರ್ಮಿಸಿದ್ದಾರೆ. ಮೆಕ್ಸಿಕೊ ನಗರದಲ್ಲಿ 1945-46ರಲ್ಲಿ ಉದ್ಘಾಟನೆಗೊಂಡ ಪ್ರೇಕ್ಷಕಾಂಗಣ 50 ಸಾವಿರ ಜನ ಕುಳಿತು ನೋಡುವಷ್ಟು ಬೃಹತ್ತಾಗಿದೆ. ಇವುಗಳಲ್ಲಿ ರೋಂ ನ ಕೊಲೊಸ್ಸೆಯಂ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.
ಗೂಳಿ ಮತ್ತು ಕಾಳಗಪಟುಗಳಿಗೆ ವಿಶೇಷ ತರಬೇತಿ
ಕಾಳಗದ ಗೂಳಿಗಳ ಅಭಿವೃದ್ಧಿಗಾಗಿಯೇ ಪ್ರತ್ಯೇಕ ತಳಿ ಸಾಕಣಾಕೇಂದ್ರಗಳಿವೆ. ಪ್ರಖ್ಯಾತ ವಂಶದ ತಳಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಾರೆ. ಮಿ ಉರ ಮತ್ತು ಸೆವಿಲ್ ತಳಿಗಳು ಬಹು ಪ್ರಸಿದ್ಧ. ತಳಿಗಳನ್ನು ಸಾಕುತ್ತಿದ್ದ ದನಗಾವಲುಗಳಲ್ಲೇ ಚಿಕ್ಕ ಚಿಕ್ಕ ಅಖಾಡಗಳನ್ನು ನಿರ್ಮಿಸಿಕೊಂಡು ಅಲ್ಲಿ ಶಿಕ್ಷಣ ಪಡೆಯುವ ಕಾಳಗ ಪಟುಗಳು ಪ್ರತಿವಾರವೂ ಗೂಳಿಗಳೊಂದಿಗೆ ಹೋರಾಟ ನಡೆಸುತ್ತಾರೆ. ಕಾಳಗದಲ್ಲಿ ಹಲವು ಪ್ರಸಿದ್ಧ ಕಾಳಗಪಟುಗಳು ತೀವ್ರತರವಾದ ಗಾಯಗಳನ್ನು ಮಾಡಿಕೊಂಡಿರುವುದೂ ಉಂಟು. ಮೂರು ವರ್ಷಗಳ ದೀರ್ಘ, ಕಠಿಣ ತರಬೇತಿಯ ಅನಂತರ ಗೂಳಿಗಳನ್ನು ವಾರ್ಷಿಕ ಸಮಾರಂಭಗಳ ಅಖಾಡದಲ್ಲಿ ಬಿಡುತ್ತಾರೆ. ಹೀಗೆ ಅಖಾಡಕ್ಕೆ ಬಿಡುವ ಗೂಳಿಯ ಕನಿಷ್ಠ ತೂಕ 542 ಕೆಜಿ ಅಥವಾ 1194 ಪೌಂಡುಗಳಿರಬೇಕು. 4 ರಿಂದ 5 ವರ್ಷ ವಯಸ್ಸಾಗಿರಬೇಕಲ್ಲದೆ ದಷ್ಟಪುಷ್ಟ ಮೈಕಟ್ಟನ್ನು ಪಡೆದು ಹರಿತವಾದ ಕೊಂಬುಗಳೂ ಇರಬೇಕು.
ವೆಂಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.