ಕುಣಿಕೆ ಕಟ್ಟದೆ ಬಾಟಲಿ ಎತ್ತಬಲ್ಲಿರಾ?
Team Udayavani, Aug 16, 2018, 11:54 AM IST
ಬಾವಿಯಿಂದ ನೀರು ಸೇದಬೇಕಾಗಿ ಬಂದಾಗ ಬಿಂದಿಗೆಯ ಬಾಯಿಗೆ ಹಗ್ಗವನ್ನು ಬಿಗಿದು ಕೆಳಕ್ಕೆ ಇಳಿಸಿ ಮೇಲಕ್ಕೆತ್ತುತ್ತಿದ್ದರು. ಆದರೆ ಕುಣಿಕೆ ಬಿಗಿಯದೆ ಯಾವುದೇ ವಸ್ತುವನ್ನು ಎತ್ತುವುದನ್ನು ನೋಡಿದ್ದೀರಾ? ಈ ಮ್ಯಾಜಿಕ್ ಅದರ ಕುರಿತೇ ಆಗಿದೆ.
ಬೇಕಾಗುವ ವಸ್ತು: ಸಣ್ಣ ಬಾಯಿಯ ಅಪಾರದರ್ಶಕ ಗಾಜಿನ ಬಾಟಲಿ, ಪ್ಲಾಸ್ಟಿಕ್ ಹಗ್ಗ ಮತ್ತು ಸಿಲ್ವರ್ ಪೇಪರ್.
ಪ್ರದರ್ಶನ: ಮೇಜಿನ ಮೇಲೆ ಒಂದು ಗಾಜಿನ ಬಾಟಲಿ ಇದೆ. ಜಾದೂಗಾರ ಅದರೊಳಗೆ ಪ್ಲಾಸ್ಟಿಕ್ ಹಗ್ಗವನ್ನು ಹಾಕಿ, ಒಂದು ಸಲ ಉಲ್ಟಾ ಮಾಡುತ್ತಾನೆ. ನಂತರ, ಬಾಟಲಿಯನ್ನು ಸೀದಾ ಮಾಡಿ ಆ ಹಗ್ಗವನ್ನು ಮೇಲಕ್ಕೆತ್ತಿದಾಗ, ಬಾಟಲಿಯೂ ಮೇಲಕ್ಕೆದ್ದು ಬರುತ್ತದೆ. ಅದು ಹೇಗೆ ಸಾಧ್ಯವಾಯ್ತು?
ತಯಾರಿ: ಪ್ರದರ್ಶನಕ್ಕೂ ಮೊದಲು, ಸಿಲ್ವರ್ ಪೇಪರ್ ಅನ್ನು ಮುದ್ದೆ ಮಾಡಿ ಬಾಟಲಿಯೊಳಗೆ ಹಾಕಿ. ಆ ಪೇಪರ್ ಉಂಡೆ, ಬಾಟಲಿಯ ಕುತ್ತಿಗೆಯ ಅರ್ಧದಷ್ಟಾದರೂ ಅಗಲವಿರಬೇಕು. ಆನಂತರ ಬಾಟಲಿಯೊಳಗೆ ಹಗ್ಗವನ್ನು ಹಾಕಿ, ಉಲ್ಟಾ ಮಾಡಿ. ಆಗ ಆ ಪೇಪರ್ ಉಂಡೆ, ಬಾಟಲಿಯ ಕುತ್ತಿಗೆಯವರೆಗೆ ಬಂದು ನಿಲ್ಲುತ್ತದೆ. ಬಾಟಲಿ ಮತ್ತು ಪೇಪರ್ ಉಂಡೆಯ ನಡುವೆ ಹಗ್ಗ ಸಿಕ್ಕಿ ಹಾಕಿಕೊಳ್ಳುತ್ತದೆ. ನಂತರ ಬಾಟಲಿಯನ್ನು ಸೀದಾ ಮಾಡಿದಾಗ, ಹಗ್ಗದ ಜೊತೆಗೆ ಬಾಟಲಿಯೂ ಮೇಲಕ್ಕೆದ್ದು ಬರುತ್ತದೆ. ಹಾಂ, ಅಪಾರದರ್ಶಕ ಬಾಟಲಿಯಾದ್ದರಿಂದ ನಿಮ್ಮ ರಹಸ್ಯ ಬಯಲಾಗುವುದಿಲ್ಲ!
* ವಿನ್ಸೆಂಟ್ ಲೋಬೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.