ಎಸ್ಕೇಪ್ ಟ್ರಿಕ್
Team Udayavani, Jun 6, 2019, 6:10 AM IST
ನೀವೆಲ್ಲಾ ಜಗತøಸಿದ್ಧ ಜಾದೂಗಾರ ಹೌದಿನಿಯ ಎಸ್ಕೇಪ್ ಟ್ರಿಕ್ ಬಗ್ಗೆ ಕೇಳಿರಬಹುದು. ಆತನನ್ನು ಸರಪಳಿಗಳಿಂದ ಬಂಧಿಸಿದರೂ ಕ್ಷಣಾರ್ಧದಲ್ಲಿ ಬಿಡಿಸಿಕೊಂಡು ಬರುತ್ತಿದ್ದನಂತೆ. ಈಗ ನಿಮಗೂ ಅಂತಹದೇ ಒಂದು ಸರಳ ತಂತ್ರವೊಂದು ಇಲ್ಲಿದೆ.
ಇಬ್ಬರು ಪ್ರೇಕ್ಷಕರನ್ನು ಕರೆದು ಒಂದು ಉದ್ದವಾದ ಹಗ್ಗವನ್ನು ಪರೀಕ್ಷಿಸಲು ಕೊಡಿ. ನಂತರ ನಿಮ್ಮ ಸಹಾಯಕನನ್ನು ಕರೆದು ಹಗ್ಗವನ್ನು ಮುಂದುಗಡೆಯಿಂದ ಆತನ ಸೊಂಟದ ಸುತ್ತ ಬರುವಂತೆ ತೆಗೆದುಕೊಂಡು ಬಂದು ಬೆನ್ನ ಹಿಂದೆ ಗಂಟು ಹಾಕುವಂತೆ ನಟಿಸಿ. ಈಗ ಹಗ್ಗದ ಒಂದೊಂದು ತುದಿಯನ್ನೂ ಒಂದೊಂದು ಬದಿಯಿಂದ ತೆಗೆದುಕೊಂಡು ಹೋಗಿ ಮೊದಲೇ ವೇದಿಕೆಗೆ ಬಂದಿದ್ದ ಪ್ರೇಕ್ಷಕರಲ್ಲಿ ಒಬ್ಬೊಬ್ಬರಿಗೆ ಒಂದೊಂದು ತುದಿಯನ್ನು ಕೊಟ್ಟು ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ. ಇದನ್ನು ಮಾಡುವಾಗ ಆ ಪ್ರೇಕ್ಷಕರು ನಿಮ್ಮ ಸಹಾಯಕನ ಎದುರಲ್ಲಿರಬೇಕು ಹಾಗು ಸುಮಾರು ಮೂರು ಅಡಿಗಳಷ್ಟಾದರೂ ಅಂತರದಲ್ಲಿರುವಂತೆ ನೋಡಿಕೊಳ್ಳಿ. ಈಗ ನೀವು ಒನ್, ಟೂ, ತ್ರೀ ಎಂದು ಹೇಳುವಷ್ಟರಲ್ಲಿ ಹಗ್ಗವು ಸಹಾಯಕನ ಸೊಂಟದ ಮೂಲಕ ಹೊರಬಂದಿರುತ್ತದೆ!
ಇದರ ರಹಸ್ಯ ಇಷ್ಟೆ, ಚಿತ್ರವನ್ನು ಸರಿಯಾಗಿ ಗಮನಿಸಿ. ನೀವು ಹಗ್ಗವನ್ನು ಬೆನ್ನ ಹಿಂದೆ ಕಟ್ಟುವಂತೆ ನಟಿಸುತ್ತಿರುವಾಗ ನಿಮ್ಮ ಸಹಾಯಕ ಹಗ್ಗವನ್ನು ತನ್ನ ಹೆಬ್ಬೆರಳಿನಿಂದ ಹಿಡಿದಿರುತ್ತಾನೆ. ಅಸಲಿಗೆ ಗಂಟು ಹಾಕುವುದೇ ಇಲ್ಲ. ನಂತರ ಮೇಲೆ ವಿವರಿಸಿದಂತೆ ಮಾಡಿದ ಬಳಿಕ ನೀವು ಒನ್, ಟೂ, ತ್ರೀ ಎಂದು ಹೇಳುವಷ್ಟರಲ್ಲಿ ಸಹಾಯಕ ಒಂದು ಹೆಜ್ಜೆ ಹಿಂದಕ್ಕೆ ಹೋಗುತ್ತಾನೆ ಮತ್ತು ಅದೇ ಸಮಯಕ್ಕೆ ಸರಿಯಾಗಿ ಹೆಬ್ಬೆರಳುಗಳಿಂದ ಹಗ್ಗವನ್ನು ಜಾರಿಸಿಬಿಡುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.