ಎಲ್ಲವೂ ಗಿಳಿಗೋಸ್ಕರ!
Team Udayavani, Feb 15, 2018, 12:15 PM IST
ರಾಜು, ಶಂಕರ, ನಾರಾಯಣ ಮೂವರೂ ಗೆಳೆಯರು. ಅವರಿಗೆ ಪಕ್ಷಿಗಳೆಂದರೆ ಪ್ರಾಣ. ಒಂದು ದಿನ ರಾಜುಗೆ ಎರಡು ಗಿಳಿಮರಿ ಸಿಕ್ಕವು. ಅದನ್ನು ಮನೆಗೆ ತಂದು ಅವನು ಸಾಕತೊಡಗಿದನು. ಮುದ್ದಾಗಿದ್ದ ಗಿಳಿ ಮರಿಗಳನ್ನು ಕಂಡು ನಾರಾಯಣನಿಗೆ ತನ್ನ ಬಳಿ ಇಲ್ಲವಲ್ಲ ಎಂದು ಬೇಸರವಾಯಿತು.
ಅದೇ ದಿನ ಸಂಜೆ ನಾರಾಯಣ ಪಕ್ಷಿಯನ್ನು ಹಿಡಿಯಲು ಬಲೆಯೊಂದಿಗೆ ಕಾಡಿಗೆ ಹೋದ. ಇವನು ಹಾಕಿದ್ದ ಬಲೆಗೆ ಮರಿಗುಬ್ಬಿಯೊಂದು ಸೆರೆಯಾಗಿತ್ತು. ಆ ಗುಬ್ಬಿಮರಿಯನ್ನು ನಾರಾಯಣ ಜೋಪಾನವಾಗಿ ಮನೆಗೆ ಕರೆತಂದ. ಮರುದಿನ ತನ್ನ ಗೆಳೆಯರ ಮುಂದೆ ಗುಬ್ಬಚ್ಚಿಯನ್ನು ತೋರಿಸೋಣ ಎಂದು ಅದಕ್ಕೆ ಅಲಂಕಾರ ಮಾಡಿದ. ಮರುದಿನ ಗುಬ್ಬಚ್ಚಿಯನ್ನು ಕಂಡು ಗೆಳೆಯರೆಲ್ಲಾ ಬಿದ್ದೂ ಬಿದ್ದು ನಕ್ಕರು. ನಾರಾಯಣನಿಗೆ ಅವಮಾನವಾದಂತಾಯಿತು.
ಕಡೆಗೆ ನಾರಾಯಣ ಏನಾದರೂ ಮಾಡಿ ತಾನೂ ಗಿಳಿ ಮರಿಯೊಂದನ್ನು ಹಿಡಿಯಬೇಕೆಂದುಕೊಂಡ. ಆದರೆ ಅದು ಬಹಳ ಕಷ್ಟ ಎನ್ನುವುದು ಅವನ ಅನುಭವಕ್ಕೆ ಬಂತು. ಕಡೆಗೆ ತನ್ನ ಬಳಿಯಿದ್ದ ಗುಬ್ಬಚ್ಚಿಗೇ ಹಸಿರು ಬಣ್ಣ ಹಚ್ಚಿ ಇದು ಹೊಸ ಪ್ರಭೇದದ ಪಕ್ಷಿಯೆಂದು ಸ್ನೇಹಿತರಿಗೆ ಪರಿಚಯಿಸುವ ಉಪಾಯ ಮಾಡಿದ.
ಮರುದಿನ ಗಿಳಿಯಂತಹ ಗುಬ್ಬಿ ಮರಿಯನ್ನು ಶಾಲೆಗೆ ತೆಗೆದುಕೊಂಡು ಹೋದ. ಸಹಪಾಠಿಗಳೆಲ್ಲಾ ಅದನ್ನೇ ಆಷcರ್ಯದಿಂದ ನೋಡುತಿರಲು ನಾರಾಯಣ ತನ್ನ ಉಪಾಯ ಫಲಿಸಿತೆಂದು ಜಂಭದಿಂದ ನಡೆದ. ಅದೇ ಸಮಯಕ್ಕೆ ಗುಬ್ಬಿಯೊಂದು ಹಾರಿ ಬಂತು. ಅದು ಚೀಂವ್ ಚೀಂವ್ ಎಂದು ಚಿಲಿಪಿಲಿಗುಟ್ಟಿದಾಗ ನಾರಾಯಣನ ಗುಬ್ಬಿಯೂ ಚೀಂವ್ಗುಟ್ಟಿತು. ಅದನ್ನು ಕಂಡು ಎಲ್ಲರೂ ನಕ್ಕರು. ನಾರಾಯಣನಿಗೆ ಮತ್ತೆ ಅವಮಾನವಾದಂತಾಗಿ ಅತ್ತುಬಿಟ್ಟನು.
ಗೆಳೆಯರೆಲ್ಲಾ ಅವನನ್ನು ಸಮಾಧಾನಿಸಿದರು. ರಾಜು ತನ್ನ ಬಳಿಯಿದ್ದ ಎರಡು ಗಿಳಿಗಳಲ್ಲಿ ಒಂದನ್ನು ನಾರಾಯಣನಿಗೆ ನೀಡಿದ. ಇದರಿಂದ ನಾರಾಯಣನಿಗಾದ ಸಂತಸ ಅಷ್ಟಿಷ್ಟಲ್ಲ. ಅವನು ಗಿಳಿಯನ್ನು ಇಡೀ ಶಾಲೆಗೇ ತೋರಿಸಿ ಖುಷಿಪಟ್ಟನು.
– ಅಶೋಕ ವಿ. ಬಳ್ಳಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.