ಎಲ್ಲೆಲ್ಲೂ ಇರುವೆ ನಾ ಕೆಂಜಿರುವೆ 


Team Udayavani, May 11, 2017, 11:35 AM IST

vismaya2.jpg

ನಿಮಗೆ ಇರುವೆಗಳ ಬಗ್ಗೆ ಗೊತ್ತಾ? ಅಯ್ಯೋ ಇರುವೆಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ಎಂದು ಒಂದೇ ಪೆಟ್ಟಿಗೆ ಕಡ್ಡಿ ಮುರಿದಂತೆ ಹೇಳಿಬಿಡಬಹುದು. ಆದರೆ ಇರುವೆ, ಎಷ್ಟು ಮೊಗೆದರೂ ನಮ್ಮಲ್ಲಿ ಕುತೂಹಲವನ್ನು ಹುಟ್ಟಿಸುತ್ತಲೇ ಇರುವ ಜೀವಿ. ಇರುವೆ ಕುರಿತ ಈ ಲೇಖನ ಓದುತ್ತಿರುವಂತೇ ತಾವು ಇರುವೆ ಕೈಲಿ ಕಚ್ಚಿಸಿಕೊಂಡ ಘಟನೆಯೂ ನೆನಪಾಗಿರುತ್ತದೆ. ಒಮ್ಮೆ ನಮ್ಮ ಮನೆ ಮುಂದೆಯು ಕೆಂಜಿರುವೆಗಳ ಜಾತ್ರೆ ನೆರೆದಿತ್ತು. ಅವುಗಳು ಮೈಮೇಲೆ ಹತ್ತಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತಾ ಫೋಟೋ ತೆಗೆಯಲು ಶುರು ಮಾಡಿದೆ. ಈ ಇರುವೆಗಳು ಇಷ್ಟೊಂದು ಗುಂಪು ಕಟ್ಟಿ ಏನು ಮಾಡ್ತವೆ? ಎಲ್ಲಿ ಹೋಗ್ತವೆ? ಅಂತ ಬೆರಗಾಗಿ ಅವುಗಳನ್ನು ಫಾಲೋ ಮಾಡಬೇಕು ಅಂತ ಪ್ಲಾನ್‌ ಮಾಡಿದೆ. 

ಏನ್‌ ಮಾಡುತ್ತಿತ್ತು ಕೆಂಜಿರುವೆ ಗ್ಯಾಂಗು:
ಒಂದಷ್ಟು ಇರುವೆಗಳ ಗುಂಪು ಗಟ್ಟಿಮುಟ್ಟಾದ ಚಿಗುರೆಲೆಯೊಂದನ್ನು ಹಿಡಿದುಕೊಂಡು, ತಮ್ಮ ಕುಡಿಮೀಸೆಯಿಂದ ಮತ್ತೂಂದು ಎಲೆಯೊಂದನ್ನು ಹಿಡಿದು ಕೂತಿರುವ ಗುಂಪಿಗೆ ಏನೋ ಸಂದೇಶ ರವಾನಿಸುತ್ತಿತ್ತು. ಒಟ್ಟಾರೆ ಆ ಎರಡೂ ತಂಡಗಳು ಆ ಎಲೆಗಳನ್ನು ಒಟ್ಟಾಗಿಸಲು ಸತತವಾಗಿ ಪ್ರಯತ್ನಿಸುತ್ತಾ, ಆ ಎಲೆ ತಮ್ಮ ಮೀಸೆ ತುದಿಯಿಂದ ಕೈ ಜಾರಿ ಹೋದರೂ ಚೂರು ಕುಗ್ಗದೇ ಮತ್ತೆ ತಮ್ಮ ಕಾರ್ಯ ಮುಂದುವರೆಸಿದವು. ಅವುಗಳು ಗೂಡು ಕಟ್ಟಲು ಪ್ಲ್ರಾನ್‌ ಮಾಡುತ್ತಿವೆ ಅಂತ ಗೊತ್ತಾಯಿತು. ಕೆಂಜಿರುವೆಗಳು ಸಾಮಾನ್ಯವಾಗಿ ಚಿಗುರೆಲೆಗಳನ್ನೇ ಆಯ್ದುಕೊಂಡು ಗೂಡು ಕಟ್ಟಲು ಮುಖ್ಯ ಕಾರಣವೆಂದರೆ ಚಿಗುರೆಲೆಗಳನ್ನು ಹೆಣೆಯೋದು ಸುಲಭ ಮತ್ತು ಅದು ಬೇಗ ಉದುರಿ ಹೋಗದು ಎನ್ನುವ ಕಾರಣಕ್ಕಾಗಿಯೇ. ಸುಮಾರು ಹತ್ತರಿಂದ ಇಪ್ಪತ್ತು ಎಲೆಗಳಿಲ್ಲದೇ ಹೋದರೆ ಇವುಗಳ ಗೃಹ ನಿರ್ಮಾಣ ಕಾರ್ಯ ನೆರವೇರುವುದಿಲ್ಲ. ತಾವು ಆಯ್ದುಕೊಂಡ ಎಲೆಗಳನ್ನು ಬಲು ತ್ರಾಸದಿಂದ ಪರಸ್ಪರ ಹತ್ತಿರತ್ತಿರ ತಂದ ಮೇಲೆ ಹೆಣ್ಣು ಇರುವೆಗಳು ತಮ್ಮ ಮರಿಗಳನ್ನು ಬಾಯಲ್ಲಿ ಕಚ್ಚಿ ಹಿಡಿದು ಆ ಮರಿಗಳಿಂದ ಹೊರಸೂಸುವ  ಬೆಳ್ಳಗಿನ ರೇಶೆ¾ ದಾರಗಳಿಂದ ಆ ಎಲೆಗಳನ್ನು ಸಾವಕಾಶವಾಗಿ ಹೆಣೆಯುತ್ತವೆ. ಕೆಲಸಗಾರ ಇರುವೆಗಳು ಹೆಣ್ಣು ಇರುವೆಗಳಿಗೆ‌ ಸಾಥ್‌ ಕೊಟ್ಟು ಗೂಡನ್ನು ಸುಂದರಗೊಳಿಸುತ್ತವೆ. ಹೀಗೆ ಶುರುವಾಗುವ ಕೆಂಜಿರುವೆಗಳ ಮನೆ ಕಟ್ಟುವ ಕೆಲಸ ಮುಗಿಯಲು ಸುಮಾರು ಐದು ಗಂಟೆಗಳು ತಗಲುತ್ತದೆ. ಅಷ್ಟೊಂದು ತಾಳ್ಮೆ, ಹಿಡಿದ ಕೆಲಸವನ್ನು ಛಲ ಬಿಡದೇ ಮಾಡುವ ಗಟ್ಟಿತನ, ಇವೆಲ್ಲ ನಮಗೂ ಮಾದರಿ ಅಲ್ವಾ?

ಗೂಡು ಬರೀ ಗೂಡಲ್ಲವೋ ಅಣ್ಣಾ:
ಒಂದೊಂದು ಗೂಡುಗಳಲ್ಲಿಯೂ ಸಾಮಾನ್ಯವಾಗಿ ಐದು ಲಕ್ಷಕ್ಕಿಂತಲೂ ಜಾಸ್ತಿ ಕೆಂಜಿರುವೆಗಳು ಮೊಟ್ಟೆ ಇಟ್ಟು ಸಂಸಾರ ಮಾಡುತ್ತದಂತೆ. ನಾನು ಹಾಗೇ ನೋಡುತ್ತಾ ನಿಂತಿದ್ದೆ. ಆ ಕ್ರೋಟಾನು ಗಿಡದಲ್ಲಿ ಕೆಂಜಿರುವೆಗಳು ಆಗಲೇ ಎರಡು ಗೂಡು ಕಟ್ಟುತಚತಿದ್ದವು. ಸ್ವಲ್ಪ ಆಚೆ ತಿರುಗಿದರೆ ಮತ್ತೂಂದು ಕೆಂಬಣ್ಣದ ಎಲೆಗಳಿಂದ ಕಟ್ಟಿದ ಬಂಗಲೆ ಕಂಡಿತು.

ಮರುದಿನ ನೋಡುತ್ತೇನೆ, ಅಲ್ಲಿ ಅಂಕು ಡೊಂಕಾದ ಪೂರಿಯ ಹಾಗೇ ಚಂದದ ಗೂಡು ನಿರ್ಮಾಣವಾಗಿತ್ತು. ಖುಷಿಯಿಂದ ನನ್ನ ಕ್ಯಾಮರಾ ಕಣ್ಣು ಝೂನ್‌ ಇನ್‌ ಆಯಿತು. ಕೆಂಜಿರುವೆಗಳ ಗುಂಪು ತಮ್ಮ ಕುಡಿ ಮೀಸೆಗಳಿಂದ ಉಳಿದ ಇರುವೆಗಳಿಗೆೆ ತಮ್ಮ ಗೃಹ‌ ಪ್ರವೇಶಕ್ಕೆ ಆಮಂತ್ರಣ ಕೊಡುತ್ತಿತ್ತೋ ಏನೋ? ರಾಶಿ ಇರುವೆಗಳು ಕ್ಷಣಾರ್ಧದಲ್ಲೇ ಜಮಾಯಿಸಿದವು ಮತ್ತು ಎಲ್ಲವೂ ದುರದುರನೇ ಮನೆಯೊಳಗೇ ಹೋದುವು. ನೋಡಿದಿರಾ ಈ ಇರುವೆಗಳ ಬದುಕನ್ನಾ.ಇದೀಗ ಬೇಸಗೆ ರಜೆ ನಿಮ್ಮ ತೋಟದ ಮನೆಯಲ್ಲಿ ಕೆಂಜಿರುವೆ ಗೂಡ ಕಂಡರೆ ದೂರದಿಂದ ಗಮನಿಸಿ. ಗೂಡು ಮುಟ್ಟಲು ಹೋಗಿ ಇರುವೆಗಳಿಂದ ಕಚ್ಚಿಸಿಕೊಂಡಿರಾ ಮತ್ತೆ..

ಮತ್ತೂ ಒಂದಿಷ್ಟು;
* ಕೆಂಜಿರುವೆಗಳ ಶಕ್ತಿ ಎಷ್ಟೆಂದರೆ ತಮಗಿಂತ ನೂರು ಪಟ್ಟು ಹೆಚ್ಚಿನ ಭಾರವನ್ನು ಎತ್ತಬಲ್ಲುದು.
*ಅವುಗಳಿಗೆ ಕಿವಿಯಿಲ್ಲ. ಹಾಗೆಂದ ಮಾತ್ರಕ್ಕೆ ಅವುಗಳನ್ನು ಕಿವುಡರೆಂದುಕೊಳ್ಳದಿರಿ. ಶಬ್ದವನ್ನು ಗ್ರಹಿಸಲು ಬೇರೆ ಮಾರ್ಗಗಳನ್ನು ಅನುಸರಿಸುತ್ತದೆ.
 * ಒಂದೊಂದು ಗೂಡುಗಳಲ್ಲಿಯೂ ಸಾಮಾನ್ಯವಾಗಿ ಐದು ಲಕ್ಷಕ್ಕಿಂತಲೂ ಜಾಸ್ತಿ ಕೆಂಜಿರುವೆಗಳು ಮೊಟ್ಟೆ ಇಟ್ಟು ಸಂಸಾರ ಮಾಡುತ್ತದೆ. 
*  ಸಿದ್ದಿಜನಾಂಗದವರು ಕೆಂಜಿರುವೆಗಳನ್ನು ಬೇಟೆಯಾಡಿ ಅಡುಗೆ ಬಳಸುತ್ತಾರೆ.
* ಕೆಂಜಿರುವೆಗಳ ಬಾಯಲ್ಲಿ ಇರುವ ಫಾರ್ಮಿಕ್‌ ಆಸಿಡ್‌ ರಾಸಾಯನಿಕವನ್ನು ಸಂಧಿವಾತ, ಕೀಲು ರೋಗಗಳ ನಿವಾರಣೆಗಾಗಿಯೂ ಬಳಸುತ್ತಾರಂತೆ.
*ಇರುವೆಗಳಲ್ಲಿ ಸುಮಾರು 12,000 ಪ್ರಭೇಧಗಳಿವೆ. ಅವುಗಳಲ್ಲಿ ಗೂಡು ಹೆಣೆಯುವ ಜಾಣ ಇರುವೆಗಳಲ್ಲಿ ಕೆಂಜಿರುವೆಗಳೇ ಮುಂದು.

– ಪ್ರಸಾದ್‌ ಶೆಣೈ ಆರ್‌. ಕೆ., ಕಾರ್ಕಳ

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.