ತಂದೆಯ ಉಪಾಯ


Team Udayavani, Mar 22, 2018, 5:14 PM IST

tandeya.jpg

ರಾಮಪುರದಲ್ಲಿ ಮೇರಿ ಎಂಬ ತರುಣಿ ವಾಸವಾಗಿದ್ದಳು. ಅವಳಿಗೆ ಬಹಳ ಬೇಗ ಸಿಟ್ಟು ಬರುತ್ತಿತ್ತು. ಅದೇ ಕಾರಣಕ್ಕೆ ಅನೇಕರು ಅವಳ ಬಳಿ ಮಾತನಾಡುತ್ತಲೇ ಇರಲಿಲ್ಲ. ಅವಳ ಇನ್ನೊಂದು ಗುಣ ಎಂದರೆ ಪ್ರತಿಯೊಂದರಲ್ಲಿಯೂ ತಪ್ಪು ಹುಡುಕುವುದು. ಹೀಗಾಗಿ ಅವಳಿಗೆ ಯಾವ ವಸ್ತುಗಳೂ, ಯಾವ ಸಂಗತಿಗಳೂ ಖುಷಿ ಕೊಡುತ್ತಿರಲಿಲ್ಲ. ಒಮ್ಮೆ ತನ್ನ ಮೇಲೆಯೇ ಬೇಸರ ಬಂದಿತು.

ಮೇರಿ, ತನ್ನ ತಂದೆ ಬಳಿ ಹೋಗಿ “ಅಪ್ಪಾ, ನಾನು ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದಂತೆ, ಇನ್ನೊಂದು ಸಮಸ್ಯೆ ಎದುರಾಗುತ್ತದೆ. ನನ್ನ ಸಮಸ್ಯೆಗಳಿಗೆ ಕೊನೆಯೇ ಇಲ್ಲವೇನೋ ಎಂದೆನಿಸುತ್ತಿದೆ’ ಎಂದು ಅತ್ತಳು. ತಂದೆಗೆ ಅವಳ ಪರಿಸ್ಥಿತಿ ಕಂಡು ಮರುಕವಾಯಿತು. ಅವಳನ್ನು ಸಮಾಧಾನಿಸುತ್ತಾ ತಂದೆ ಮೂರು ಒಲೆಗಳ ಮೇಲೆ ಒಂದೊಂದು ಪಾತ್ರೆಯಲ್ಲಿ ನೀರು ಕಾಯಲಿಟ್ಟರು.

ಮೂರರಲ್ಲೊಂದು ಪಾತ್ರೆಯಲ್ಲಿ ಆಲೂಗಡ್ಡೆ, ಇನ್ನೆರಡರಲ್ಲಿ ಮೊಟ್ಟೆ ಮತ್ತು ಚಹಾ ಎಲೆಗಳನ್ನು ಹಾಕಿದನು. ಮೇರಿಗೆ ಸಿಟ್ಟು ಬಂದಿತು “ಇದನ್ನೆಲ್ಲ ಯಾಕೆ ಮಾಡುತ್ತಿದ್ದೀರಿ? ನನಗೆ ಅರ್ಥವಾಗುತ್ತಿಲ್ಲ’ ಎಂದಳು ಮೇರಿ ಸಿಡುಕುತ್ತಾ. ತಂದೆ 15 ನಿಮಿಷ ತಾಳು ಎಂದರು. ಮೇರಿಗೆ ತಾಳ್ಮೆಯೇ ಇರಲಿಲ್ಲ. ಕ್ಷಣ ಕ್ಷಣಕ್ಕೂ ಅವಳ ಚಡಪಡಿಕೆ ಹೆಚ್ಚುತ್ತಿತ್ತು. 

15 ನಿಮಿಷಗಳ ನಂತರ ತಂದೆ ಆಲೂಗಡ್ಡೆ, ಮೊಟ್ಟೆ ಹಾಗೂ ಚಹಾ ಎಲೆಗಳನ್ನು ನೀರಿನಿಂದ ಹೊರಗೆ ತೆಗೆದು ತಟ್ಟೆಯಲ್ಲಿ ಹಾಕಿಟ್ಟರು. “ನೀನೀಗ ಏನು ಬದಲಾವಣೆಯನ್ನು ಗಮನಿಸಿದೆ?’ ಎಂದು ತಂದೆ ಕೇಳಿದರು. ಮೇರಿ ಒಂದು ನಿಮಿಷ ಯೋಚಿಸಿ “ಆಲೂಗಡ್ಡೆ ಬೆಂದು ಮೃದುವಾಗಿದ್ದರೆ, ಮೊಟ್ಟೆಯು ಗಟ್ಟಿಯಾಗಿತ್ತು ಮತ್ತು ಚಹಾದ ಎಲೆಯು ಪರಿಮಳ ಸೂಸುತ್ತಿದೆ.’ ಅದನ್ನು ಬಿಟ್ಟು ಇನ್ನೇನು ಹೇಳಲೂ ಅವಳಿಗೆ ತಿಳಿಯಲಿಲ್ಲ.

ಅವಳನ್ನು ಅಬಿನಂದಿಸಿದ ತಂದೆ “ಸರಿಯಾಗಿ ಗಮನಿಸಿದ್ದೀಯಾ ಮಗಳೇ…  ಆಲೂಗಡ್ಡೆ, ಮೊಟ್ಟೆ ಮತ್ತು ಚಹಾದ ಎಲೆಗಳು ಎದುರಿಸಿದ್ದು ಒಂದೇ ರೀತಿಯ ಪರಿಸ್ಥಿತಿಯಾದರೂ ಆ ಪರಿಸ್ಥಿತಿಗೆ ಅವು ಪ್ರತಿಕ್ರಿಯಿಸಿದ ರೀತಿ ಮಾತ್ರ ವಿಭಿನ್ನ. ಗಟ್ಟಿಯಾಗಿದ್ದ ಆಲೂಗಡ್ಡೆ ಬಿಸಿನೀರಿನಲ್ಲಿ ತನ್ನ ಗಟ್ಟಿತನವನ್ನು ಕಳೆದುಕೊಂಡುಮೃದುವಾಯಿತು. ಇದಕ್ಕೆ ತದ್ವಿರುದವಾಗಿ ಹೊರಗೆ ಮೃದುವಾಗಿದ್ದ ಮೊಟ್ಟೆಯು ಬಿಸಿನೀರಿನಲ್ಲಿ ಗಡುಸಾಯಿತು.

ಚಹಾದ ಎಲೆಯಂತೂ ವಿಶಿಷ್ಟವಾಗಿ ಪ್ರತಿಕ್ರಿಯಿಸಿ, ತಾನಿದ್ದ ನೀರನ್ನೇಬದಲಾಯಿಸಿ ಅದಕ್ಕೆ ಬಣ್ಣಮತ್ತುರುಚಿಯನ್ನುತುಂಬಿತು. ಅದೇ ರೀತಿ ಜೀವನದಲ್ಲಿ ಎಂಥಾ ಸಂಕಷ್ಟಗಳೇ ಬಂದರೂ ಅವುಗಳಿಗೆ ನಾವು ಸಕರಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ತಂದೆ ಮೇರಿಗೆ ತಿಳಿ ಹೇಳಿದರು. ಇಷ್ಟು ದಿನ ಪ್ರತಿಯೊಂದಕ್ಕೂ ದೂರು ಹೇಳುತ್ತಿದ್ದ ಮೇರಿ ಬದಲಾದಳು. ತಂದೆ ಹೇಳಿದ್ದು ಅವಳ ಮನಸ್ಸಿನಲ್ಲಿ ನಾಟಿತು.

ಅನುವಾದ: ಸುಮನ್‌ ದುಬೈ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.