ಫ್ಲೈಟ್‌ ವಿಲೇಜ್‌


Team Udayavani, Mar 12, 2020, 5:05 AM IST

ಫ್ಲೈಟ್‌ ವಿಲೇಜ್‌

ಜೀವನದಲ್ಲಿ ಒಂದು ಅದ್ಬುತವಾದ ಕಾರು ತಗೊಳ್ಳಬೇಕು. ಜುಮ್‌ ಅಂತ ಅದರಲ್ಲಿ ಓಡಾಡಬೇಕು ಅನ್ನೋದು ಬಹುತೇಕರ ಕನಸು. ಇದರ ಮುಂದುವರಿದ ಭಾಗವಾಗಿ, ಬದುಕಲ್ಲಿ ಒಂದು ಸಲವಾದರೂ ವಿಮಾನ ಏರಬೇಕು ಅನ್ನೋ ಶ್ರೀಮಂತ ಗುರಿಯೂ ಇರುತ್ತದೆ. ಆದರೆ, ಯಾರೂ ಕೂಡ ವಿಮಾನವನ್ನೇ ತಂದು ಮನೆ ಮುಂದೆ ನಿಲ್ಲಿಸಿಕೊಳ್ಳುವ ಕನಸು ಕಾಣೋಲ್ಲ. ಅಮೇರಿಕದ ಈ ಹಳ್ಳಿಯವರಿಗೆ ಇದು ಸಾಧ್ಯವಾಗಿದೆ. ಎಲ್ಲರ ಮನೆ ಮುಂದೆ ಕಾರು, ಬೈಕಿನಂತೆ ವಿಮಾನ ನಿಂತಿದೆಯಂತೆ.

ಜೀವಿತಾವಧಿಯಲ್ಲಿ ಬ್ರಾಂಡೆಡ್‌ ಕಾರನ್ನು ಕೊಳ್ಳಬೇಕು, ಆ ಮೂಲಕ ಶ್ರೀಮಂತ ವರ್ಗದ ಗುಂಪಿಗೆ ಸೇರಬೇಕು ಅನ್ನೋದು ಸಮಾನ್ಯವಾಗಿ ಎಲ್ಲರಿಗೂ ಇರುವ ಹುಕಿ, ಕನಸು ಮತ್ತು ಗುರಿ. ಇದರಿಂದಾಗಿಯೇ ಮನೆ ಮನೆಗಳಲ್ಲೂ ಬೈಕ್‌ ಹಾಗೂ ಕಾರುಗಳು ಇರುವುದು. ಇದರಂತೆ, ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಏರುವ ಆಸೆಯಂತೂ ಇದ್ದೇ ಇರುತ್ತದೆ.

ಆದರೆ, ಮನೆ ಮುಂದೆ ಹೆಲಿಕಾಪ್ಟರ್‌ ಅಥವಾ ವಿಮಾನ ನಿಲ್ಲಿಸಬೇಕೆಂಬ ಕನಸು ಕಾಣುವುದು ಉದ್ಧಟತನವಾದೀತು. ಆದರೆ, ಅಮೆರಿಕದ ಸ್ಟ್ರೋಸ್‌ ಕ್ರಿಕ್‌ ಗ್ರಾಮದವರಿಗೆ ಇದು ಉದ್ಧಟತನವಲ್ಲ. ಏಕೆಂದರೆ, ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಒಂದೊಂದು ವಿಮಾನವಿದೆ; ನಮ್ಮಲ್ಲಿ ಕಾರು, ಬೈಕು ಇದ್ದಂತೆ. ಪ್ಲೋರಿಡಾದ ಡೇಟೋನಾ ಬೀಚ್‌ ಪ್ರದೇಶದಿಂದ ಸುಮಾರು ಹನ್ನೊಂದು ಕಿ.ಮೀ ದೂರದಲ್ಲಿ ವಿಮಾನ ಹಳ್ಳಿ ಇದೆ. ಈ ವಿಮಾನ ನಿಲ್ದಾಣದ ಹೆಸರಲ್ಲಿ ಸ್ಟ್ರೋಸ್‌ ಕ್ರಿಕ್‌ ಗೇಟೆಡ್‌ ಕಮ್ಯುನಿಟಿಯು ಗ್ರಾಮವನ್ನು ಸುಂದರವಾಗಿ ನಿರ್ಮಿಸಿದೆ. ಒಟ್ಟು, 1,300 ಮನೆಗಳು, ಇದರಲ್ಲಿ ಒಟ್ಟು ಆರು ಸಾವಿರ ಕುಟುಂಬಗಳಿವೆ. ಗ್ರಾಮದಲ್ಲಿ 700 ವಿಮಾನಗಳನ್ನು ನಿಲ್ಲಿಸುವ ಸುಸಜ್ಜಿತ ವಿಮಾನ ಶೆಡ್‌ ನಿರ್ಮಿಸಲಾಗಿದೆ. ಪ್ರತಿ ಮನೆಯಲ್ಲೂ ಕನಿಷ್ಠವೆಂದರೂ ಒಂದೊಂದು ವಿಮಾನವಿದೆ. ಕೆಲವೊಂದು ಕುಟುಂಬಗಳಲ್ಲಿ 2-3 ವಿಮಾನಗಳಿರುವುದೂ ಉಂಟು. ಇವರು ತಮ್ಮ ವಿಮಾನಗಳನ್ನು, ಮನೆಯ ಮುಂದೆ, ಕೆಲವೊಮ್ಮೆ ರಸ್ತೆಯ ಮೇಲೆ ಹಾಗೂ ಕೆಲವರು ಪ್ರತ್ಯೇಕವಾದ ಪಾರ್ಕಿಂಗ್‌ ಜಾಗವನ್ನು ಮಾಡಿಕೊಂಡು ನಿಲ್ಲಿಸುತ್ತಾರೆ; ನಮ್ಮಲ್ಲಿ ಮನೆಯ ಮುಂಭಾಗದಲ್ಲಿ ಕಾರು, ಬೈಕ್‌ ಹೇಗೆ ಅಂದವಾಗಿ ನಿಲ್ಲಿಸುತ್ತೇವೆಯೋ ಅದೇ ರೀತಿ.

ಹೀಗಾಗಿ, ಈ ಗ್ರಾಮವೇ ಒಂದು ವಿಮಾನ ನಿಲ್ದಾಣದಂತೆ ಕಾಣಿಸುತ್ತದೆ. ಇಲ್ಲಿನ ಜನರು, ವಿಮಾನಗಳ ಸುಗಮ ಸಂಚಾರಕ್ಕೆ ವಿಶೇಷ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದು, ಇದರ ಮೂಲಕ ಯಾವ ಮನೆಯ ವಿಮಾನವು ಎಲ್ಲಿ ಓಡಾಡುತ್ತಿದೆ, ಯಾವುದು ರನ್‌ ವೇಯಲ್ಲಿ ಬಂದು ಇಳಿಯುತ್ತಿದೆ ಎಂದು ಸುಲಭವಾಗಿ ಮಾಹಿತಿ ಪಡೆಯುತ್ತಾರೆ. ಇದರಿಂದಾಗಿ ಎಲ್ಲರ ಪ್ರಯಾಣವೂ ಸುಖಕರ. ಹೆಚ್ಚು ವಿಮಾನವಿದ್ದರೂ ಅಪಘಾತಗಳು ನಡೆಯುವುದಿಲ್ಲ. ಇದು ಗ್ರಾಮಸ್ಥರೇ ನಿರ್ಮಿಸಿದ ಖಾಸಗಿ ವಿಮಾನ ನಿಲ್ದಾಣವಾಗಿದ್ದು, ರಾತ್ರಿಯ ವೇಳೆ ವಿಮಾನಗಳು ಇಳಿಯಲು ಹಾಗೂ ನೆಗೆಯಲು ಅನುಕೂಲವಾಗುವಂತೆ ವಿದ್ಯುತ್‌ ದೀಪಗಳ ಅಳವಡಿತ ರನ್‌ ವೇ ವ್ಯವಸ್ಥೆಯನ್ನೂ ಗ್ರಾಮದ ಜನರೇ ಮಾಡಿಕೊಂಡಿದ್ದಾರೆ. ಸುಮಾರು ಹದಿನಾಲ್ಕು ಕಿಲೋಮೀಟರ್‌ ಉದ್ದದ ಸುಸಜ್ಜಿತ ಟ್ಯಾಕ್ಸಿ ವೇ, ವಿಮಾನಗಳಿಗೆ ಇಂಧನ ತುಂಬುವ ವ್ಯವಸ್ಥೆ, ಅವುಗಳ ದುರಸ್ತಿಗೆ ಸ್ಟೇಷನ್‌, ರೆಸ್ಟೋರೆಂಟ್‌ ಮತ್ತು ಸುಸಜ್ಜಿತವಾದ ಕಚೇರಿಗಳನ್ನೂ ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದಾರೆ.

ಈ ಸ್ಟ್ರೋಸ್‌ ಕ್ರಿಕ್‌ ವಿಮಾನ ನಿಲ್ದಾಣವನ್ನು ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ನೌಕಾ ಸೇನೆಯ ಎರಡು ವಿಮಾನಕ್ಕೆ ನಿಲ್ದಾಣಗಳಾಗಿ ನಿರ್ಮಿಸಲಾಗಿತ್ತು. ಇಲ್ಲಿ ಸುಮಾರು 4000/ 176 ಅಡಿ ಉದ್ದದ ಸುಸಜ್ಜಿತವಾದ ನಾಲ್ಕು ರನ್‌ ವೇಗಳಿವೆ. ಇದನ್ನು ಅಮೆರಿಕದ ನೌಕಾ ಸೇನೆಯು 1946ರಲ್ಲಿ ತನ್ನ ಸೇವೆಯಿಂದ ಕೈಬಿಟ್ಟಿತ್ತು.ಈಗ ಗ್ರಾಮಸ್ಥರು ಬಳಸುತ್ತಿದ್ದಾರೆ.

ಡೇಟೋನಾ ಬೀಚ್‌ ಪ್ರಸಿದ್ಧ ಅಂತಾರಾಷ್ಟ್ರೀಯ ರೇಸಿಂಗ್‌ ರಸ್ತೆಯನ್ನು ಹೊಂದಿದೆ. ಇಲ್ಲಿರುವ ಮರಳಿನ ಬೀಚಿನಲ್ಲಿ ಪ್ರವಾಸಿಗರು ಮೋಜಿಗಾಗಿ ಕಾರ್‌ ಮತ್ತು ಬೈಕ್‌ ರೇಸಿಂಗ್‌ ನಡೆಸುತ್ತಾರೆ.

ಒಂದೇ ಕಡೆ ಬೈಕ್‌, ಕಾರು ಮತ್ತು ವಿಮಾನಗಳು ಸಮ್ಮಿಳಿತಗೊಂಡಿರುವುದು ಇಲ್ಲಿನ ವಿಶೇಷ. ಗ್ರಾಮದ ಒಟ್ಟು ನಿವಾಸಿಗಳ ಸಂಖ್ಯೆ ಸುಮಾರು 60,000 ಇದ್ದು, ಈ ಗ್ರಾಮಕ್ಕೆ ವರ್ಷವೊಂದರಲ್ಲಿ ಸುಮಾರು ಎಂಬತ್ತು ಲಕ್ಷದಷ್ಟು ಪ್ರವಾಸಿಗರು ಇಲ್ಲಿ ವಿವಿಧ ಮೋಜಿನ ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ನೋಡಲು ಆಗಮಿಸುತ್ತಾರೆ. ಈ ಗ್ರಾಮದ ಕೆಲವೊಂದು ಮನೆಗಳಲ್ಲಿ, ವಿಮಾನಗಳನ್ನು ನಿಲ್ಲಿಸಲು ಅಗತ್ಯವಿರುವ ಮೂರು ಗೋಡೆಗಳುಳ್ಳ ವಿವಿಧ ಗಾತ್ರದ ಶೆಡ್‌ ನಿರ್ಮಿಸಿದ್ದಾರೆ. ಕೆಲವೊಬ್ಬರು ಇತರರಿಗೆ ವಿಮಾನ ನಿಲ್ಲಿಸಲು ಬಾಡಿಗೆಗೆ ಶೆಡ್‌ಗಳನ್ನು ಕೊಡುತ್ತಾರೆ. ಈ ವಿಮಾನ ನಿಲ್ದಾಣವು ಸ್ಟ್ರೋಸ್‌ ಕ್ರೀಕ್‌ ಪ್ರಾಪರ್ಟಿ ಓನರ್ಸ್‌ ಅಸೋಸಿಯೇಷನ್‌ನ ಮಾಲೀಕತ್ವದಲ್ಲಿದೆ. ವಾರ್ಷಿಕ ಸುಮಾರು 25,000 ಬಾರಿ ಇಲ್ಲಿ ವಿಮಾನಗಳು ಗಗನಕ್ಕೆ ನೆಗೆದು ಮತ್ತೆ ಇಳಿಯುತ್ತವೆ. ವಿಮಾನಗಳು ಬಿಳಿಯ ಹೊಗೆಯ ಮೂಲಕ ಬಾನಂಗಳದಲ್ಲಿ I Love You, Will You Marry Me ಎಂಬ ಬರಹಗಳನ್ನು ವರ್ಣರಂಜಿತವಾಗಿ ಬಿಡಿಸುವುದನ್ನು ಇಲ್ಲಿನ ಸಮುದ್ರ ಕಿನಾರೆಯಲ್ಲಿ ನಿಂತು ನೋಡುವುದೇ ಒಂದು ಸಂಭ್ರಮ.

ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

Udaya-Jadugar

ಹೌದಿನಿಯ ಎಸ್ಕೇಪ್‌ ಜಾದೂ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.