ತೇಲುವ ಬಣ್ಣದ ನೀರು
Team Udayavani, Sep 7, 2017, 10:42 AM IST
ಬೇಕಾಗುವ ವಸ್ತುಗಳು
ಬಿಸಿ ನೀರು, ಸ್ಕೆಚ್ ಪೆನ್ ಇಂಕು, ಡ್ರಾಪರ್, ಪಾರದರ್ಶಕ ಲೋಟ.
ಮಾಡುವ ವಿಧಾನ
1. ಒಂದು ಲೋಟದಲ್ಲಿ ಸುಡುವ ಬಿಸಿ ನೀರನ್ನು ಸ್ವಲ್ಪ ತೆಗೆದುಕೊಂಡು ಸ್ಕೆಚ್ ಪೆನ್ ಇಂಕಿನ ಬಣ್ಣವನ್ನು ಮಿಶ್ರ ಮಾಡಿ. ಬಿಸಿ ನೀರು ಕಡು ಬಣ್ಣವಾಗಿರಲಿ.
2. ಮತ್ತೂಂದು ಲೋಟದಲ್ಲಿ ತಣ್ಣೀರನ್ನು ತೆಗೆದುಕೊಳ್ಳಿ. ಡ್ರಾಪರ್ ತುಂಬ ಬಣ್ಣದ ಬಿಸಿ ನೀರನ್ನು ತುಂಬಿಕೊಂಡು ತಣ್ಣೀರಿನ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಹನಿ ಹನಿಯಾಗಿ ಹಾಕಿ.
3. ಈಗ ಮಕ್ಕಳಿಗೆ ಗಮನಿಸಲು ತಿಳಿಸಿ. ಬಿಸಿಯಾದ ಬಣ್ಣದ ನೀರು ತಣ್ಣೀರಿನ ಮೇಲ್ಮೆ„ನಲ್ಲಿ ತೇಲುತ್ತಿರುವುದನ್ನು ನಾವು ಗಮನಿಸುತ್ತೇವೆ.
ಇದಕ್ಕೆ ಕಾರಣವೇನು?
ಬಣ್ಣದ ಬಿಸಿ ನೀರು ತಣ್ಣೀರಿನ ಮೇಲ್ಮೆ„ನಲ್ಲಿ ತೇಲಲು ಕಾರಣ ಸಾಂದ್ರತೆ. ಬಿಸಿ ನೀರಿನ ಸಾಂದ್ರತೆ ತಣ್ಣೀರಿನ ಸಾಂದ್ರತೆಗಿಂತ ಕಡಿಮೆ ಇರುತ್ತದೆ. ಹೀಗಾಗಿ ಬಿಸಿ ನೀರು ತೇಲುವುದನ್ನು ತೋರಿಸಲು ಬಿಸಿ ನೀರಿಗೆ ಬಣ್ಣವನ್ನು ಸೇರಿಸಲಾಗಿದೆ. ಹಗುರವಾದ ಬಣ್ಣದ ನೀರಿನ ಕಣಗಳು ಕೆಳಗೆ ಚಲಿಸಲಾಗುವುದಿಲ್ಲ. ಇಮ್ಮರ್ಷನ್ ಹೀಟರ್(Immersion heate) ನಿಂದ ಪಾತ್ರೆಗಳಲ್ಲಿ ನೀರು ಕಾಯಿಸುವಾಗ ಗಮನಿಸಿ ವಿದ್ಯುತ್ ಕಾಯಿಲ್ ನ ಕೆಳಗಿನ ನೀರು ಕಾದೇ ಇರುವುದಿಲ್ಲ. ಮೇಲಿನ ನೀರು ಕಾಯ್ದು ಹಗುರವಾಗಿ ಅಲ್ಲೆ ಉಳಿಯುತ್ತದೆ. ಸಾಂದ್ರತೆ ಹೆಚ್ಚಾದ ತಣ್ಣೀರು ಕೆಳಭಾಗದಲ್ಲೆ ಉಳಿಯುತ್ತದೆ. ಸೋಲಾರ್ ವಾಟರ್ ಹೀಟರ್‌ಗಳಲ್ಲಿ ನೀರಿನ ಸಂಗ್ರಾಹಕ ತೊಟ್ಟಿ ಮೇಲಿದ್ದು ಸೂರ್ಯನ ಶಾಖದಿಂದ ನೀರು ಕಾಯಿಸುವ ಕೊಳವೆಗಳು ಕೆಳಭಾಗದಲ್ಲಿರುತ್ತವೆ. ಕಾದ ನೀರೆಲ್ಲ ಸಂಗ್ರಾಹಕ ತೊಟ್ಟಿಯ ಮೇಲ್ಪದರದಲ್ಲಿ ಸಂಗ್ರಹವಾಗುತ್ತಿರುತ್ತದೆ. ಅದಕ್ಕಿಂತ ಕಡಿಮೆ ಶಾಖವಿರುವ ಕೆಳಗಿನ ಪದರಗಳು ಪುನಃ ಪುನಃ ಕಾಯಿಸುವ ಕೊಳವೆಗಳಿಗೆ ರವಾನೆಯಾಗುತ್ತವೆ. ಹೀಗೆ ನೀರಿನ ಅಣುಗಳಿಂದ ಪ್ರಸಾರವಾಗುವ ಶಾಖವನ್ನು ಸಂವಹನ ಎನ್ನುತ್ತೇವೆ.
ಟಿ.ಎಂ. ಸೋಮಶೇಖರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.