ಎಕ್ಸ್‌-ರೇ ಹಣೆಯಲ್ಲಿ ಭವಿಷ್ಯ


Team Udayavani, Nov 7, 2019, 3:19 AM IST

qq-1

ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್‌ ಇದು.

ಪ್ರದರ್ಶನ:
ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು ಖಾಲಿ ಕವರನ್ನು ಕೊಟ್ಟು ಯಾವುದಾದರೂ ಪ್ರಶ್ನೆಯನ್ನು ಬರೆದು ಚೀಟಿಯನ್ನು ಮಡಚಿ ಕವರಿನಲ್ಲಿ ಇಡಲು ಹೇಳುತ್ತಾನೆ. ಅವನು ಚೀಟಿ ನೋಡದೆಯೇ ಆ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಾನೆ.

ತಂತ್ರ:
ಈ ಹತ್ತು ಮಂದಿಯಲ್ಲಿ ಒಬ್ಟಾತ ನಿಮ್ಮ ಸಹಾಯಕನೇ ಆಗಿರಬೇಕು (ಇದು ನಿಮ್ಮ ಪ್ರೇಕ್ಷಕರಾರಿಗೂ ಗೊತ್ತಾಗಬಾರದು) ಮತ್ತು ಆತ ಬರೆಯುವ ಪ್ರಶ್ನೆಯನ್ನು ನೀವು ಮೊದಲೇ ತಿಳಿದಿರಬೇಕು. ಉದಾಹರಣೆಗೆ ಆತನ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಎಂದಿಟ್ಟುಕೊಳ್ಳಿ. ನೀವು ಪ್ರೇಕ್ಷಕರಿಂದ ಕವರುಗಳನ್ನು ಸಂಗ್ರಹಿಸುವಾಗ ನಿಮ್ಮ ಸಹಾಯಕನ ಕವರನ್ನು ಕೆಳಗಡೆ ಇಟ್ಟು ಉಳಿದವನ್ನು ಅದರ ಮೇಲೆ ಜೋಡಿಸಬೇಕು. ನೀವು ಸ್ಟೇಜಿನ ಮೇಲೆ ಬಂದು ಎಲ್ಲಾ ಕವರುಗಳನ್ನು ಮೇಜಿನ ಮೇಲೆ ಇಡಿ. ಈಗ ನಿಮ್ಮ ಸಹಾಯಕನ ಕವರು ಕೆಳಗಡೆ ಇರುತ್ತದೆ. ಮೇಲಿನ ಕವರನ್ನು ತೆಗೆದು ನಿಮ್ಮ ಹಣೆಯ ಹತ್ತಿರ ಹಿಡಿಯಿರಿ. ಧ್ಯಾನ ಮಾಡುತ್ತಿರುವವರಂತೆ ನಟಿಸಿ, ಇದರ ಒಳಗೆ ಇರುವ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಅಂತ ನಿಮ್ಮ ಸಹಾಯಕ ಬರೆದಿಟ್ಟ ಪ್ರಶ್ನೆಯನ್ನು ಹೇಳಿ ಕವರಿನ ಒಳಗಿರುವ ಚೀಟಿಯನ್ನು ನೋಡಿ “ಯೆಸ್‌, ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು?’ ಅಂತ ಹೇಳುತ್ತಾ ಚೀಟಿಯನ್ನು ಕವರಿನ ಒಳಗೆ ಹಾಕಿ ಕಿಸೆಗೆ ಹಾಕಿಕೊಳ್ಳಿ. ನಿಮ್ಮ ಸಹಾಯಕ ಎದ್ದು ನಿಲ್ಲುತ್ತಾನೆ. “ಅವನು ಚೆನ್ನಾಗಿ ಓದಿದ್ರೆ ಪಾಸ್‌ ಆಗೋದು ಗ್ಯಾರೆಂಟಿ’ ಅಂತ ತಮಾಷೆಯ ಉತ್ತರ ಕೊಟ್ಟು ಎರಡನೆಯ ಕವರನ್ನು ನಿಮ್ಮ ಹಣೆ ಹತ್ತಿರ ಇಟ್ಟು ಮೊದಲು ಮಾಡಿದಂತೆಯೇ ನಟನೆಯನ್ನು ಮಾಡುತ್ತಾ ಮೊದಲನೇ ಕವರಿನ ಚೀಟಿಯಲ್ಲಿ ನೀವು ನೋಡಿದ ಪ್ರಶ್ನೆಯನ್ನು ಓದಿ ಹೇಳಿ. ನಂತರ ಆ ಕವರಿನ ಚೀಟಿಯನ್ನು ನೋಡಿ ಯೆಸ್‌ ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು ಅಂತ ಹೇಳಿ ನಿಮಗೆ ತೋಚಿದ ಯಾವುದಾದರೂ ಗಮ್ಮತ್ತಿನ ಉತ್ತರವನ್ನು ಕೊಡಿ. ಅಂದರೆ ಪ್ರತಿ ಬಾರಿಯೂ ಹಣೆಯ ಹತ್ತಿರ ಕವರನ್ನು ಇಟ್ಟು ಉತ್ತರ ಹೇಳುವಾಗ ಹಿಂದಿನ ಕವರಿನಲ್ಲಿದ್ದ ಚೀಟಿಯ ಪ್ರಶ್ನೆಯನ್ನು ಹೇಳಬೇಕು. ಕೊನೆಯ ಕವರು ಅಂದರೆ ನಿಮ್ಮ ಸಹಾಯಕನ ಕವರಿನಲ್ಲಿರುವ ಪ್ರಶ್ನೆಯನ್ನು ಹೇಳುವಾಗ ಅದರ ಹಿಂದಿನ, ಅಂದರೆ ಒಂಭತ್ತನೇ ಕವರಿನ ಚೀಟಿಯಲ್ಲಿದ್ದ ಪ್ರಶ್ನೆಯನ್ನು ಹೇಳಬೇಕು. ನೀವು ಮಾತಿನಲ್ಲಿ ಜಾಣರಾದರೆ ತಮಾಷೆಯ ಉತ್ತರಗಳನ್ನು ಕೊಡುತ್ತಾ ಪ್ರೇಕ್ಷಕರನ್ನು ಅಚ್ಚರಿಯ ಜತೆಗೆ ನಗೆಗಡಲಲ್ಲಿ ತೇಲಿಸಬಹುದು.

– ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.