ಗಾಜು ಒಡೆದು ಹೋಯ್ತಾ?!

Team Udayavani, Jun 21, 2018, 6:00 AM IST

p-1.jpg

ಗಾಜಿನ ಬಾಗಿಲನ್ನು ತಳ್ಳದೇ, ಅದರ ಒಳಗೆ ತೂರಿಕೊಂಡು ಹೋಗಲು ನಿಮಗೆ ಸಾಧ್ಯವೇ? ಏನು, ಗಾಜಿನ ಬಾಗಿಲಿನೊಳಗೆ ತೂರಿಕೊಂಡು ಹೋಗೋದಾ? ಅಂತ ಕಣ್ಣರಳಿಸಬೇಡಿ. ಅದು ಬೇಡ ಬಿಡಿ, ಗಾಜಿನ ಲೋಟದೊಳಗೆ ಒಂದು ನಾಣ್ಯವನ್ನು ತೂರಿಸೋಕೆ ಸಾಧ್ಯವಾ?.. ಅದಕ್ಕೂ ಇಲ್ಲ ಅಂತಿದೀರ, ಹಾಗಾದ್ರೆ ನಾವು ಮಾಡಿ ತೋರಿಸುತ್ತೇವೆ ನೋಡಿ…

ಬೇಕಾಗುವ ವಸ್ತು: ಬಾಟಲಿಯ ಮುಚ್ಚಳ, ನಾಣ್ಯ ಹಾಗೂ ಗಾಜಿನ ಲೋಟ

ಪ್ರದರ್ಶನ: ಜಾದೂಗಾರನ ಬಲ ಅಂಗೈ ಮೇಲೆ ಬಾಟಲಿಯ ಮುಚ್ಚಳ ಇರುತ್ತದೆ. ಪಕ್ಕದ ಟೇಬಲ್‌ ಮೇಲೆ ಒಂದು ನಾಣ್ಯ ಹಾಗೂ ಗಾಜಿನ ಲೋಟ ಇಡಲಾಗುತ್ತದೆ. ಜಾದೂಗಾರ ಲೋಟವನ್ನು ಎತ್ತಿ, ಬಲಗೈ ಅಂಗೈ ಮೇಲಿನ ಮುಚ್ಚಳದ ಮೇಲೆ ಬೋರಲಾಗಿ ಇಡುತ್ತಾನೆ. ನಂತರ ಟೇಬಲ್‌ ಮೇಲಿರುವ ನಾಣ್ಯವನ್ನು ಜಾರಿಸುತ್ತಾ ಎತ್ತಿಕೊಂಡು, ಕೈಯನ್ನು ಗಾಜಿನ ಲೋಟದ ಮೇಲೆ ಟಪ್‌ ಟಪ್‌ ಎಂದು ಎರಡು ಬಾರಿ ಹೊಡೆಯುತ್ತಾನೆ. ಏನಾಶ್ಚರ್ಯ?! ಕೈಯಲ್ಲಿದ್ದ ನಾಣ್ಯ ಗಾಜಿನ ಲೋಟವನ್ನು ಭೇದಿಸಿ ಒಳಗೆ ಸೇರಿಕೊಂಡುಬಿಟ್ಟಿರುತ್ತದೆ. ಹಾಗಾದ್ರೆ, ನಾಣ್ಯ ಗಾಜನ್ನು ತೂರಿಕೊಂಡು ಒಳಗೆ ಹೋಗಿದ್ದಾದರೂ ಹೇಗೆ?   

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಿಮ್ಮ ಅಂಗೈ ಮೇಲಿರುವ ಮುಚ್ಚಳದಲ್ಲಿ. ಇಲ್ಲಿ ಮುಚ್ಚಳವನ್ನು ಯಾಕೆ ಬಳಸಿಕೊಳ್ಳಲಾಗಿದೆ ಗೊತ್ತಾ? ಆ ಮುಚ್ಚಳದ ಕೆಳಗೆ ಒಂದು ನಾಣ್ಯವನ್ನು ಇಡಲಾಗುತ್ತದೆ. ಅಂದರೆ, ಒಂದು ನಾಣ್ಯ ನೋಡುಗರಿಗೆ ಕಾಣಿಸುವಂತೆ ಟೇಬಲ್‌ ಮೇಲಿದ್ದರೆ, ಇನ್ನೊಂದು ನಾಣ್ಯ ಯಾರಿಗೂ ಕಾಣದಂತೆ ಮುಚ್ಚಳದ ಕೆಳಗೆ ಅಡಗಿ ಕುಳಿತಿರುತ್ತದೆ. ನೀವು, ಟೇಬಲ್‌ ಮೇಲಿರುವ ನಾಣ್ಯವನ್ನು ನಿಧಾನಕ್ಕೆ ಜಾರಿಸುತ್ತಾ ಕೈಗೆತ್ತಿಕೊಳ್ಳುವಂತೆ ಕಣRಟ್ಟು ಮಾಡಿ, ಟೇಬಲ್‌ ಕೆಳಗೆ ಬೀಳಿಸಿಬಿಡಬೇಕು. ನಂತರ ಸುಮ್ಮನೆ ಕೈಯನ್ನು ಲೋಟದ ಮೇಲೆ ಜೋರಾಗಿ ಕುಟ್ಟಿ, ಒಳಗಿರುವ ಮುಚ್ಚಳ ಅಲ್ಲಾಡುವಂತೆ ಮಾಡಿದರೆ ಸಾಕು. ಅದರ ಕೆಳಗೆ ಇರುವ ನಾಣ್ಯ ನೋಡುಗರಿಗೆ ಕಾಣಿಸುತ್ತದೆ. ಕೈಯಲ್ಲಿದ್ದ ನಾಣ್ಯವೇ ಗಾಜಿನ ಲೋಟವನ್ನು ತೂರಿಕೊಂಡು ಒಳಗೆ ಸೇರಿದೆ ಎಂದು ಪ್ರೇಕ್ಷಕರು ಭಾವಿಸುತ್ತಾರೆ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.