ಅಜ್ಜನ ತೀರ್ಪು: ಟಿ.ವಿ ರಿಮೋಟ್‌ ಯಾರಿಗೆ?


Team Udayavani, Mar 7, 2019, 12:30 AM IST

s-5.jpg

ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಅಜ್ಜನಿಗೆ, ಮೊಮ್ಮಕ್ಕಳು ಟಿ.ವಿ. ರಿಮೋಟಿಗಾಗಿ ಹೊಡೆದಾಡುತ್ತಿದ್ದುದ ಕಂಡು ಗಾಬರಿಯಾಗಿತ್ತು. ಈ ಬಾರಿ ಅಪ್ಪ- ಅಮ್ಮ ಜಗಳ ಪರಿಹರಿಸುವ ಮುನ್ನ ಅಜ್ಜ “ಈ ಸಲ ಯಾರಿಗೂ ಅನ್ಯಾಯವಾಗದಂತೆ ನಾನು ತೀರ್ಪು ಹೇಳುತ್ತೇನೆ’ ಎಂದರು. ಅಪ್ಪ ಅಮ್ಮನಿಗೆ ಸದ್ಯ ತಮ್ಮ ತಲೆನೋವು ತಪ್ಪಿತಲ್ಲಾ ಎಂದು ಖುಷಿಯಾದರೆ, ಅಕ್ಕ ತಮ್ಮಂದಿರಿಬ್ಬರಿಗೂ ತಾತ ತಮ್ಮ ಪರವೇ ತೀರ್ಪು ನೀಡುತ್ತಾರೆ ಅಂತ ಸಂತೋಷ!

“ನಾನು ಕಾರ್ಟೂನ್‌ ನೋಡಲೇಬೇಕು! ಅಕ್ಕ ಅಂತಾ ಯಾವಾಗ್ಲೂ ಅನ್ಯಾಯ ಸಹಿಸೋಕೆ ಆಗಲ್ಲ. ಇವತ್ತು ನೀನು ಏನಾದರೂ ತರಲೆ ಮಾಡಿದ್ರೆ ಸುಮ್ಮನಿರಲ್ಲ’ ಎಚ್ಚರಿಸಿದ ಮೋನು. ಸೋಫಾದ ಮೇಲೆ ಕುಳಿತಿದ್ದ ಸೋನು ಮುಖ ಊದಿಸಿ, ದೊಡ್ಡದಾಗಿ ಕಣ್ಣು ಬಿಟ್ಟು  “ಅರೆ, ನನಗೆ  ಫ‌ುಟ್‌ಬಾಲ್‌ ಮ್ಯಾಚ್‌ ಬೇಕೇ ಬೇಕು. ನೀನು ಅದೇನು ಮಾಡ್ತಾ ನೋಡೇ ಬಿಡ್ತೀನಿ. ಸಣ್ಣವನು ಅಂತ ಸುಮ್ಮನಿದ್ರೆ ತಲೆ ಮೇಲೆ ಹತ್ತಿ ಕುಣೀತೀಯಾ’ ಎಂದು ಹೆದರಿಸಿದಳು!

ಅಕ್ಕ- ತಮ್ಮರದ್ದು ದಿನಾ ರಾತ್ರಿ ಎಂಟರಿಂದ ಒಂಭತ್ತರವರೆಗೆ ಈ ಗಲಾಟೆ ಇದ್ದದ್ದೇ! ಸಿಗುತ್ತಿದ್ದ ಒಂದು ತಾಸು ಟಿ.ವಿ. ಟೈಮಿನಲ್ಲಿ ರಿಮೋಟಿಗಾಗಿ ಹೊಡೆದಾಟ- ಕಿತ್ತಾಟ, ಕೆಲವೊಮ್ಮೆ ಘನಘೋರ ಯುದ್ಧವೇ ನಡೆಯುತ್ತಿತ್ತು. ಅಮ್ಮ ಯಾವಾಗಲೂ ಮೋನು ಸಣ್ಣವನು ಅಂತ ಅವನ ಪರ ವಹಿಸುತ್ತಿದ್ದಳು. ಅಪ್ಪ, ಮುದ್ದಿನ ಮಗಳು ಅಂತ ಸೋನು ಪಕ್ಷ. ಹೀಗಾಗಿ ಅಮ್ಮ ಹತ್ತಿರದಲ್ಲಿದ್ದರೆ ಮೋನುವಿನ ದನಿ ಜೋರಾದರೆ,ಅಪ್ಪನನ್ನು ಕಂಡರೆ ಸೋನುವಿನ ಕಣ್ಣಲ್ಲಿ ಗಂಗಾ-ಭವಾನಿ. ಆ ದಿನ ನಡೆದದ್ದೂ ಇದೇ. 

ಇವರಿಬ್ಬರ ಗಲಾಟೆ ಕೇಳಿ ಮೇಲಿನ ರೂಮಿನಿಂದ ಅಜ್ಜ ಹೊರಬಂದರು. ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಅಜ್ಜನಿಗೆ, ಮೊಮ್ಮಕ್ಕಳ ಗಲಾಟೆ ಕೇಳಿ ಗಾಬರಿಯಾಗಿತ್ತು. ಮಕ್ಕಳು, ಸೋಫಾದ ಮೇಲೆ ನಿಂತು ಕಿರುಚಾಡುತ್ತಾ, ಹೊಡೆದಾಡುತ್ತಿದ್ದುದು ರಿಮೋಟಿಗಾಗಿ ಎಂದು ತಿಳಿದು ಸಮಾಧಾನವಾಗಿತ್ತು. ಈ ಬಾರಿ ಅಪ್ಪ- ಅಮ್ಮ ಯಾರೊಬ್ಬರ ಪರ ವಹಿಸಿ ಜಗಳ ಪರಿಹರಿಸುವ ಮುನ್ನ ಅಜ್ಜ “ಈ ಸಲ ಯಾರಿಗೂ ಅನ್ಯಾಯವಾಗದಂತೆ ನಾನು ತೀರ್ಪು ಹೇಳುತ್ತೇನೆ’ ಎಂದರು. ಅಪ್ಪ ಅಮ್ಮನಿಗೆ ಸದ್ಯ ತಮ್ಮ ತಲೆನೋವು ತಪ್ಪಿತಲ್ಲಾ ಎಂದು ಖುಷಿಯಾದರೆ, ಮಕ್ಕಳಿಗೆ ತಾತ ತಮ್ಮ ಪರವೇ ತೀರ್ಪು ನೀಡುತ್ತಾರೆ ಅಂತ ಸಂತೋಷ!

ಅಜ್ಜ, ಮೊಮ್ಮಕ್ಕಳನ್ನು ಕೂರಿಸಿಕೊಂಡು ಇಬ್ಬರ ಇಷ್ಟ-ಕಷ್ಟ ಕೇಳಿದರು. ಇಬ್ಬರೂ ಅರ್ಧರ್ಧ ಗಂಟೆ ಸಮಯ ಹಂಚಿಕೊಂಡು ಟಿ.ವಿ ನೋಡಲು ಸಾಧ್ಯವೇ ವಿಚಾರಿಸಿದರು. ಊಹೂಂ! ಇಬ್ಬರೂ ಖಡಾಖಂಡಿತವಾಗಿ ಹಾಗೆ ಮಾಡಲು ಆಗುವುದೇ ಇಲ್ಲ. ಪೂರ್ತಿ ನೋಡದಿದ್ದರೆ ಸ್ವಾರಸ್ಯವೇ ಇರುವುದಿಲ್ಲ ಎಂದುಬಿಟ್ಟರು. ಇಬ್ಬರಿಗೂ ಸ್ವಲ್ಪ ಸಮಾಧಾನ ಹೇಳಿ ಅಜ್ಜ ರಿಮೋಟ್‌ ಕೈಗೆ ತೆಗೆದುಕೊಂಡು ಎದ್ದು ನಿಂತರು. ರಿಮೋಟನ್ನು ತಮ್ಮಿಬ್ಬರಲ್ಲಿ ಯಾರ ಕೈಗೆ ಕೊಡುತ್ತಾರೆ ಎಂದು ಮಕ್ಕಳಿಗೆ ಕುತೂಹಲ. 

ಆದರೆ ಅಜ್ಜ, ರಿಮೋಟ್‌ಅನ್ನು ಯಾರಿಗೂ ಕೊಡದೆ ಟಿ.ವಿ ಆಫ್ ಮಾಡಿ “ನಿಮ್ಮಿಬ್ಬರಲ್ಲಿ ಜಗಳಕ್ಕೆ ಕಾರಣವಾಗುವುದಾದರೆ ಈ ರಿಮೋಟ್‌ ದೂರ ಇಡೋಣ. ಸುಮ್ಮನೆ ಗಲಾಟೆ ಮಾಡದೇ ನಿಮ್ಮಿಷ್ಟದ ಕತೆಪುಸ್ತಕ ಓದಿ, ಆಟ ಆಡಿ, ಚಿತ್ರ ಬಿಡಿಸಿ. ಯಾರಿಗೂ ಬೇಸರ ಬೇಡ. ಹಾಗೆ ಮಾಡಿದರೆ ದೊಡ್ಡವರು, ಸಣ್ಣವರು ಅನ್ನೋ ವ್ಯತ್ಯಾಸವೇ ಇರುವುದಿಲ್ಲ’ ಎಂದು ತಮ್ಮ ರೂಮಿಗೆ ನಡೆದೇ ಬಿಟ್ಟರು. ಮಕ್ಕಳಿಗೆ ಒಂಥರಾ ಶಾಕ್‌! ಅಂತೂ ಆ ದಿನದ ಟಿ.ವಿ ಟೈಮ್‌ ವ್ಯರ್ಥವಾಗಿ ಹೋಯಿತು. ಅರ್ಧ ಗಂಟೆಯಾದರೂ ಸಿಗುತ್ತಿದ್ದ ಕಾರ್ಟೂನ್‌/ ಮ್ಯಾಚ್‌ಯಾವುದೂ ಇಲ್ಲ. ಮೋನು- ಸೋನುಗಾದ ದುಃಖ ಅಷ್ಟಿಷ್ಟಲ್ಲ. ಇಬ್ಬರಿಗೂ ಮತ್ತೂಬ್ಬರ ಮೇಲೆ ಅಸಮಾಧಾನ.

ಮರುದಿನ ಎಂದಿನಂತೆ ಸೋನು- ಮೋನು ಶಾಲೆಗೆ ಹೋಗಿ ಬಂದರು. ಸಂಜೆ ಆಟ, ಹೋಂವರ್ಕ್‌ ಮುಗಿಸಿದ್ದಾಯ್ತು. ಎಂಟುಗಂಟೆಗೆ ಟಿ.ವಿ ಹಾಕೋಣ ಎಂದರೆ ರಿಮೋಟ್‌ ಅಜ್ಜನ ಹತ್ತಿರವಿತ್ತು. ಧೈರ್ಯ ಮಾಡಿ ಕೇಳಿದ್ದಕ್ಕೆ ಸಿಕ್ಕ ಉತ್ತರ “ಗಲಾಟೆ ಮಾಡದೇ ನೋಡುವುದಾದರೆ ಟಿ.ವಿ ಹಾಕಬಹುದು. ಇಬ್ಬರಲ್ಲಿ ಯಾರೇ ಗಲಾಟೆ ಮಾಡಿದರೂ ಟಿ.ವಿ ಆಫ್ ಮಾಡ್ತೀನಿ. ಈಗ ಯಾರು ಯಾವ ಕಾರ್ಯಕ್ರಮ ಮೊದಲು ನೋಡ್ತೀರಾ ಅಂತ ಮೊದಲೇ ನಿರ್ಧರಿಸಿ’. ಅಜ್ಜನ ಮಾತು ಕೇಳಿ ಸೋನು- ಮೋನುಗೀಗ ಸಂಕಟ! ಆದರೂ ಟಿ.ವಿ ಟೈಮ್‌ ವೇಸ್ಟ್‌ ಆಗುವುದನ್ನು ಸಹಿಸಲಾಗಲಿಲ್ಲ. ಇಬ್ಬರೂ ಮುಖ ಮುಖ ನೋಡಿಕೊಂಡರು. 

ಕಡೆಗೆ ಸೋನು “ಇವತ್ತು ನಿನ್ನ ಕಾರ್ಟೂನ್‌ ನೋಡೋಣ, ನಾಳೆ ನನ್ನ ಜತೆ ಪೂರ್ತಿ ಫ‌ುಟ್‌ಬಾಲ್‌ ಮ್ಯಾಚ್‌ ನೋಡ್ತೀಯಾ?’ ಎಂದು ಕೇಳಿದಳು. ಮೋನು ಖುಷಿಯಿಂದ “ಆಯ್ತು ಆಯ್ತು’ ಎಂದು ಕುಣಿಯುತ್ತಲೇ ಒಪ್ಪಿಕೊಂಡ. ಈಗ ಒಂದು ದಿನ ಮೋನು ಪೂರ್ತಿ ಕಾಟೂìನು ನೋಡಿದರೆ, ನಂತರದ ದಿನ ಸೋನು ಪೂರ್ತಿ ಫ‌ುಟ್‌ಬಾಲ್‌ ಮ್ಯಾಚ್‌ ನೋಡುತ್ತಾಳೆ. ಈಗೀಗ ಮೋನುಗೆ ಫ‌ುಟ್‌ಬಾಲ್‌ ಆಟದ ಬಗ್ಗೆ ಆಸಕ್ತಿ ಬಂದಿದ್ದರೆ, ಸೋನುಗೆ ಕಾಟೂìನ್‌ ಇಷ್ಟವಾಗುತ್ತಿದೆ. ಒಟ್ಟಿನಲ್ಲಿ ಅಜ್ಜನ ತೀರ್ಪಿನಿಂದ ಮನೆಯಲ್ಲಿ ಶಾಂತಿ ನೆಲೆಸಿರುವುದಷ್ಟೇ ಅಲ್ಲದೆ ಅಕ್ಕ ತಮ್ಮಂದಿರ ನಡುವೆ ದೋಸ್ತಿಯೂ ಬೆಳೆದಿದೆ.

 ಡಾ.ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.