ಕಾಲ್ಬೆರಳ ಕುಸ್ತಿ ಕಂಡಿರಾ?


Team Udayavani, Mar 29, 2018, 3:59 PM IST

kalberala.jpg

ಎಂಥೆಂಥಧ್ದೋ ಆಟೋಟದ ಸ್ಫರ್ಧೆಗಳನ್ನು ನೋಡಿದ್ದಾಯ್ತು. ಈಗ ಕಾಲಿನ ಹೆಬ್ಬೆರೆಳುಗಳ ಕುಸ್ತಿ! ಇಂಗ್ಲೆಂಡ್‌ನ‌ಲ್ಲಿ ಇಂಥದ್ದೊಂದು ವಿಚಿತ್ರವಾದ ಸ್ಫರ್ಧೆ ಬಹಳ ವರ್ಷಗಳಿಂದಲೂ ನಡೆಯುತ್ತಿದ್ದು ಹೊರಜಗತ್ತಿಗೆ ಇದೊಂದು ಕುತೂಹಲವಾಗಿಯೇ ಉಳಿದಿದೆ.

1974ರಲ್ಲಿಯೇ ಪ್ರಾರಂಭವಾದ ಕಾಲ್ಬೆರಳ ಸ್ಪರ್ಧೆಯ ಹಿಂದೊಂದು ರೋಚಕ ಇತಿಹಾಸವಿದೆ. ಇದು ಪ್ರಾರಂಭವಾಗಿದ್ದು ಪೀಟ್‌ ಚೀತಮ್‌, ಎಡ್ಡೀ ಸ್ಟ್ಯಾನ್‌ಫೀಲ್ಡ್‌, ಡೀನ್‌ ಹಾಗೂ ಮೈಕ್‌ ಡಾಸನ್‌ಎಂಬ ನಾಲ್ಕು ಮಂದಿ ಸ್ನೇಹಿತರಿಂದ. ಇವರು ಬಾರೊಂದರಲ್ಲಿ ಕುಳಿತು ತಮ್ಮ ದೇಶಕ್ಕೆ ಈಚಿನ ದಿನಗಳಲ್ಲಿ ಯಾವೊಂದು ಚಾಂಪಿಯನ್‌ಶಿಪ್‌ ಪ್ರಶಸ್ತಿಗಳೂ ಬರಲಿಲ್ಲವೆನ್ನುವುದರ ಕುರಿತು ಮಾತಾಡಿಕೊಳ್ಳುತ್ತಿದ್ದರು.

ಹೀಗಾಗಿ ತಾವೇ ಒಂದು ವಿಶ್ವಮಟ್ಟದ ಸ್ಪರ್ಧೆಯೊಂದನ್ನು ಆಯೋಜಿಸಿ ಅದರಲ್ಲಿ ನಮ್ಮವರೇ ಚಾಂಪಿಯನ್‌ ಆಗಿ ಹೊರಹೊಮ್ಮುವುದರ ಮೂಲಕ ತಮ್ಮ ರಾಷ್ಟ್ರಕ್ಕಿರುವ ಅಂಥದ್ದೊಂದು ಕೊರತೆಯನ್ನು ನಿವಾರಿಸಬೇಕೆಂದು ಚರ್ಚಿಸಿ ಕಾರ್ಯ ನಿರತರಾದಾಗ ಅವರಿಗೆ ಹೊಳೆದಿದ್ದು ಕಾಲಿನ ಹೆಬ್ಬೆರೆಳುಗಳ ಕುಸ್ತಿಯನ್ನು ಆಯೋಜಿಸುವ ಉಪಾಯ.

12 ವರ್ಷಗಳಿಂದ ಚಾಂಪಿಯನ್‌: ಆದರೆ ಈ ಸ್ನೇಹಿತರ ಆಸೆ ಬಹಳ ದಿನಗಳವರೆಗೂ ಈಡೇರದಿದ್ದು ದುರ್ದೈವ. 1974 ಹಾಗೂ 1975ರಲ್ಲಿ ತಮ್ಮ ದೇಶದವರೇ ಆದ ಮೈಕ್‌ ಎಂಬ ಸ್ಪರ್ಧಾಳು ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮಿದರೂ 1976ರಲ್ಲಿ ಕೆನಡಾದ ಸ್ಪರ್ಧಾಳು ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

ಆಮೇಲೆ ಕಾರಣಾಂತರಗಳಿಂದ ಕೆಲವು ವರ್ಷಗಳವರೆಗೂ ಈ ಸ್ಪರ್ಧೆಗಳ ಆಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತಾದರೂ ಈಗ್ಗೆ ಕೆಲವರ್ಷಗಳಿಂದ ಮತ್ತೆ ಆಯೋಜಿಸಲಾಗುತ್ತಿದೆ. ಅಲಾನ್‌ ನಾಸ್ಟಿ ನ್ಯಾಶ್‌ ಎಂಬುವರು ಕಳೆದ ಹನ್ನೆರೆಡು ವರ್ಷಗಳಿಂದಲೂ ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮುವ ಮೂಲಕ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿಯಮಗಳು
*ಸ್ಫರ್ಧೆಯಲ್ಲಿ ಭಾಗವಹಿಸುವವರ ಕಾಲುಗಳ ಪಾದ ಹಾಗೂ ಹೆಬ್ಬೆರೆಳುಗಳನ್ನು ಆಟಕ್ಕೂ ಕೆಲ ಗಂಟೆಗಳಷ್ಟು ಮೊದಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.

*ಆಟದ ಸಮಯದಲ್ಲಿ ಅವರ ಶೂಗಳನ್ನಾಗಲಿ ಅಥವಾ ಕಾಲುಚೀಲಗಳನ್ನಾಗಲಿ ಧರಿಸುವಂತಿಲ್ಲ. 

*ಸ್ಪರ್ಧಿಗಳಿಬ್ಬರ ಪಾದಗಳನ್ನೂ ನೇರವಾಗಿ ಒಬ್ಬರ ಪಾದಗಳಿಗೆ ಮತ್ತೂಬ್ಬರ ಪಾದಗಳು ಸ್ಪರ್ಶಿಸುವಂತೆ ಆನಿಸಿ ಕಟ್ಟಲಾಗುತ್ತದೆ. 

*ಸ್ಪರ್ಧಿಗಳು ತಮ್ಮ ಹೆಬ್ಬೆರೆಳುಗಳಿಂದ ಮತ್ತೂಬ್ಬರ ಪಾದಗಳನ್ನು ಕೆಳಕ್ಕೆ ಬಾಗಿಸಲು ಪ್ರಯತ್ನಿಸಬೇಕು. 

ಕೆಲಸೆಕೆಂಡುಗಳಷ್ಟು ಕಾಲ ಯಾವ ಸ್ಪರ್ಧಿಯು ವಿರೋಧಿಯ ಪಾದಗಳನ್ನು ಬಾಗಿಸುತ್ತಾನೋ ಆತ ಪಂದ್ಯದಲ್ಲಿ ಜಯಗಳಿಸಿದಂತೆ. ಇದೇ ರೀತಿ ಒಮ್ಮೆ ಬಲಗಾಲಿನಲ್ಲಿ ಮತ್ತೂಮ್ಮೆ ಎಡಗಾಲಿನಲ್ಲಿ ಸೆಣೆಸಬೇಕಾಗುತ್ತದೆ. ಅಗತ್ಯವಿದ್ದರೆ ಮೂರನೇ ಪಂದ್ಯವನ್ನೂ ಆಡಬೇಕಾಗುತ್ತದೆ. ಮೂರರಲ್ಲಿ ಎರಡು ಬಾರಿ ಪಂದ್ಯ ಗೆದ್ದವರನ್ನುವಿಜೇತರೆಂದು ಘೋಷಿಸಲಾಗುತ್ತದೆ.

ವಿಜೇತರಾದವರಿಗೆ ನಗದು ಪುರಸ್ಕಾರದ ಜೊತೆಗೆ ಹೆಬ್ಬೆರಳನ್ನು ಹೊಂದಿರುವ ಪಾದದ ರೂಪದ ಪಾರಿತೋಷಕವನ್ನು ನೀಡಿ ಗೌರವಿಸಲಾಗುತ್ತದೆ. ಒಲಿಂಪಿಕ್‌ ಸಮಿತಿಯು ಇದನ್ನು ತಮ್ಮ ಜಾಗತಿಕ ಸ್ಪರ್ಧೆಗಳಲ್ಲಿ ಒಂದಾಗಿ ಸ್ವೀಕರಿಸಿ ಅಳವಡಿಸಿಕೊಳ್ಳಲು ನಿರಾಕರಿಸಿದ್ದರೂ ಪ್ರತೀ ವರ್ಷ ಇಂಗ್ಲೆಂಡ್‌ನ‌ ಬೆಂಟ್‌ ಲೀ ಬ್ರೂಕ್‌ಇನ್‌ನಲ್ಲಿ ಜಾಗತಿಕ ಹೆಬ್ಬರೆಳು ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.

ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದಲ್ಲದೆ ದೇಶವಿದೇಶಗಳ ಅನೇಕ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದು ದಿನದಿಂದ ದಿನಕ್ಕೆ ಇದರ ಜನಪ್ರಿಯತೆಯೂ ಹೆಚ್ಚುತ್ತಿದೆ. ಇಂದಲ್ಲ ನಾಳೆ ಕಾಲ್ಬೆರಳ ಪಂದ್ಯಾವಳಿ ಜಾಗತಿಕ ಮಟ್ಟದ ಸ್ಪರ್ಧೆಯಾಗಿ ಹೊರಹೊಮ್ಮುವುದೆಂಬ ಆಶಾಭಾವದಲ್ಲಿ ಆಯೋಜಕರಿದ್ದಾರೆ.

* ಪ. ನಾ. ಹಳ್ಳಿ ಹರೀಶ್‌ ಕುಮಾರ್‌

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.