ನೆರವೇರದ ಐನ್‌ಸ್ಟೀನ್ ಕೊನೆಯಾಸೆ
Team Udayavani, Jun 27, 2019, 5:00 AM IST
ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ
ಜಗದ್ವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಅವರಿಗೆ ಪ್ರಚಾರ ಎಂದರೆ ಆಷ್ಟಕ್ಕಷ್ಟೆ. ಅವರು ಜನರಿಂದ, ಸಭೆ, ಸನ್ಮಾನಗಳಿಂದ ದೂರವೇ ಉಳಿಯಲು ಇಷ್ಟಪಡುತ್ತಿದ್ದರು. ಕೊನೆಗಾಲದಲ್ಲಿ ಅವರು ಹೇಳಿಕೊಂಡ ಆಸೆಯೂ ಅದಕ್ಕೆ ಪೂರಕವಾಗಿತ್ತು. ತಾವು ಸತ್ತ ನಂತರ ತಮ್ಮ ದೇಹವನ್ನು ಸುಟ್ಟು, ಬೂದಿಯನ್ನು ಯಾರಿಗೂ ಸಿಗದಂತೆ ಗಾಳಿಯಲ್ಲಿ ವಿಸರ್ಜಿಸಬೇಕು ಎಂದು ಆಸೆ ಪಟ್ಟಿದ್ದರು. ಏಕೆಂದರೆ, ತಮ್ಮ ಕೈಲಿ ಆಟೋಗ್ರಾಫ್ ಬರೆಸಿಕೊಂಡು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಮಂದಿ ಯಾವ ಹಂತಕ್ಕೂ ಇಳಿಯಬಹುದೆಂಬ ಸಂಗತಿ ಅವರಿಗೆ ಗೊತ್ತಿತ್ತು. ಆದರೆ ಐನ್‌ಸ್ಟೀನ್‌ರ ಕೊನೆಯಾಸೆ ನೆರವೇರಲು ಜಗತ್ತು ಬಿಡಲೇ ಇಲ್ಲ. ಅವರು 1955ರಲ್ಲಿ ತೀರಿಕೊಂಡಾಗ ಥಾಮಸ್ ಹಾರ್ವೆ ಎಂಬ ವೈದ್ಯ ಮಹಾಶಯ ಅನಧಿಕೃತವಾಗಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ. ಮುಂದೆ ವಿಷಯ ಬಹಿರಂಗಗೊಂಡು ವಿವಾದವಾಯಿತು. ಆಗ ಆತ ಐನ್‌ಸ್ಟೀನ್ ಮಗನ ಕ್ಷಮಾಪಣೆ ಕೇಳಿ “ವೈಜ್ಞಾನಿಕ ಕಾರಣಗಳಿಗೆ ಮಾತ್ರ ತಪಾಸಣೆ ಮಾಡಬೇಕು’ ಎಂಬ ಕರಾರಿನ ಮೇಲೆ ಐನ್‌ಸ್ಟೀನ್ ದೇಹವನ್ನು ಕೆಲ ದಿನಗಳ ಮಟ್ಟಿಗೆ ಇಟ್ಟುಕೊಂಡು ಹಿಂತಿರುಗಿಸಿದ. ಆದರೆ ಜಗತ್ತಿನ ಮಹಾನ್ ಮೇಧಾವಿಯ ಮೆದುಳು ಮತ್ತು ಕಣ್ಣುಗಳನ್ನು ಹೆಚ್ಚಿನ ವೈಜ್ಞಾನಿಕ ತಪಾಸಣೆಗೆಂದು ತನ್ನಲ್ಲಿಯೇ ಉಳಿಸಿಕೊಂಡ. ಅದರಲ್ಲಿ ಕಣ್ಣುಗಳನ್ನು ಐನ್‌ಸ್ಟೀನ್ ಅವರ ಗೆಳೆಯ, ನೇತ್ರವೈದ್ಯರಾದ ಹೆನ್ರಿ ಆ್ಯಡಮ್ಸ್ ಅವರಿಗೆ ಉಡುಗೊರೆಯಾಗಿ ನೀಡಿದ. ಡಾ.ಹೆನ್ರಿ, ಐನ್‌ಸ್ಟೀನ್ ಮೇಲಿನ ಸ್ನೇಹ ಮತ್ತು ಪ್ರೀತಿಯಿಂದ ಕಾಪಿಟ್ಟ ಆ ಕಣ್ಣುಗಳು ಇಂದಿಗೂ ಲಾಕರ್‌ನಲ್ಲಿ ಸುರಕ್ಷಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.