ಹಿಟ್ಲರ್ ಸಿನಿಮಾ ಮಾಡಿದ್ದು!
Team Udayavani, Jun 6, 2019, 6:01 AM IST
ಹಾಲಿವುಡ್ ಬಹಳ ಕಾಲದ ಹಿಂದಿನಿಂದಲೂ ಪ್ರಪಂಚದ ಸಿಮಾ ಮಾರುಕಟ್ಟೆಯನ್ನು ಆವರಿಸಿಕೊಂಡಿತ್ತು. ಹಿಟ್ಲರ್ ಹಾಲಿವುಡ್ ಸಿನಿಮಾಗಳನ್ನು ಕಂಡರೆ ಉರಿದೇಳುತ್ತಿದ್ದ. ಅಮೆರಿಕ ತನ್ನ ಸಿದ್ದಾಂತಗಳನ್ನು ಪ್ರಪಂಚದಾದ್ಯಂತ ಹೇರಲು ಹಾಲಿವುಡ್‌ಅನ್ನು ಬಳಸಿಕೊಳ್ಳುತ್ತಿದೆ ಎಂಬುದು ಆತನ ಅಭಿಪ್ರಾಯವಾಗಿತ್ತು. ಅದಕ್ಕೊಂದು ಕೊನೆಗಾಣಿಸಲು ಜರ್ಮನಿಯಲ್ಲೇ ಹಾಲಿವುಡ್ ಮಾದರಿಯಲ್ಲಿ ಸಿನಿಮಾ ನಗರಿಯನ್ನು ಸ್ಥಾಪಿಸಬೇಕೆಂನ್ನುವುದು ಅವನ ಇಚ್ಚೆಯಾಗಿತ್ತು. ಜರ್ಮನ್ ಸಿನಿಮಾಗಳಿಗೆ ಸರ್ಕಾರದಿಂದ ಭತ್ಯೆ, ಇನ್ನಿತರ ಸಹಕಾರ ನೀಡುವ ಏರ್ಪಾಡು ಕೂಡಾ ಆಯಿತು. ಈ ಕಾಲಾವಧಿಯಲ್ಲಿ ನೂರಾರು ಜರ್ಮನ್ ಸಿನಿಮಾಗಳು ತಯಾರಾದವು.
ಅವೆಲ್ಲದರಲ್ಲೂ ಹಿಟ್ಲರ್‌ನ ಸಿದ್ದಾಂತಗಳನ್ನು ಒಳ್ಳೆಯದೆಂಬಂತೆ ಬಿಂಬಿಸಲಾಗಿತ್ತು. ಸಾಮಾಜಿಕ ಸಿನಿಮಾಗಳನ್ನು ಮಾಡಿ ಬೇಸತ್ತ ನಂತರ ಒಂದು ರೋಮಾಂಚನಕಾರಿ ಕತೆಯನ್ನು ಮಾಡಬೇಕೆಂಬ ಯೋಚನೆ ಹಿಟ್ಲರ್‌ನ ಬಲಗೈ ಬಂಟನಾಗಿದ್ದ ಗೊಬೆಲ್ಸ್‌ನಿಗೆ ಬಂದಿತು. ಆ ಸಮಯದಲ್ಲಿ ಹೊಳೆದ ಉಪಾಯವೇ ಟೈಟಾನಿಕ್ ದುರ್ಘಟನೆ. ಅದಾಗಲೇ ಟೈಟಾನಿಕ್ ಕತೆಯುಳ್ಳ ಸಿನಿಮಾ ಹಾಲಿವುಡ್‌ನಲ್ಲಿ ತಯಾರಾಗಿತ್ತು. ಆದರೆ ಹಿಟ್ಲರ್ ಸರ್ಕಾರ ಮಾಡಲು ಹೊರಟಿದ್ದ ಟೈಟಾನಿಕ್ ರಾಜಕೀಯ ಪ್ರೇಪಿತ ಕಥಾವಸ್ತುವನ್ನು ಹೊಂದಿತ್ತು. ಟೈಟಾನಿಕ್ ದುರ್ಘಟನೆ ಗ್ರೇಟ್ ಬ್ರಿಟನ್ ದೇಶದ ವೈಫಲ್ಯ ಎನ್ನುವುದನ್ನು ಬಿಂಬಿಸುವುದೇ ಆ ಸಿನಿಮಾದ ಉದ್ದೇಶವಾಗಿತ್ತು. ಅದಕ್ಕಾಗಿ ದೇಶದ ಪ್ರತಿಭಾನ್ವಿತ ಚಿತ್ರಕತೆ ರಚನೆಕಾರನನ್ನು ಹಾಗೂ ತಂತ್ರಜ್ಞರನ್ನು ನೇಮಿಸಲಾಯಿತು. ಆಗಿನ ಕಾಲದಲ್ಲಿ ಅತಿ ಹೆಚ್ಚು ಅಂದರೆ 18 ಕೋಟಿ ಸಾರ್ವಜನಿಕರ ಹಣವನ್ನು ಸಿನಿಮಾಗೆ ಖರ್ಚು ಮಾಡಲಾಯಿತು. 1943ರಲ್ಲಿ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ನಿರ್ದೇಶಕ ಸೆಲ್ಫಿನ್ ಬದುಕಿರಲಿಲ್ಲ.
ಏಕೆಂದರೆ ಗೊಬೆಲ್ಸ್ ಹೇಳಿದ ಬದಲಾವಣೆಯನ್ನು ಮಾಡಲು ಆತ ಒಪ್ಪದೇ ಇದ್ದುದರಿಂದ 1942ರಲ್ಲೇ ಅವನನ್ನು ಕೊಲ್ಲಲಾಗಿತ್ತು. ಹಲವಾರು ಅಡೆತಡೆಗಳನ್ನು ಮೀರಿ ಕಡೆಗೂ ಸಿನಿಮಾ ಬಿಡುಗಡೆಯಾಗಿ ವಿದೇಶಗಳಲ್ಲೂ ಹಿಟ್ ಎನ್ನಿಸಿಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.