ಅಬ್ಟಾ, ಎಷ್ಟುದ್ದದ ಬಾಲ!


Team Udayavani, Jul 19, 2018, 6:00 AM IST

4.jpg

ನೀವು ಬೆಕ್ಕು ಸಾಕಿದ್ದೀರಾ? ಹಾಗಾದ್ರೆ, ಅದರ ಬಾಲದ ಉದ್ದ ಎಷ್ಟು ಅಂತ ನಿಮಗೆ ಗೊತ್ತಾ? ಸಾಮಾನ್ಯವಾಗಿ ಬೆಕ್ಕುಗಳ ಬಾಲ 10-12 ಇಂಚು ಉದ್ದ ಇರುತ್ತದೆ. ಆದರೆ, ಅಮೆರಿಕದ ಈ ಬೆಕ್ಕಿನ ಬಾಲ ನೋಡಿದರೆ “ಹನುಮಂತನ ಬಾಲ’ ಅನ್ನಬಹುದು…

ಅಮೆರಿಕದ ಮಿಚಿಗನ್‌ನ ಫ‌ರ್ನಡೇಲ್‌ನಲ್ಲಿ “ಸೈಗ್ನಸ್‌’ ಎಂಬ ಹೆಸರಿನ ಸಾಕು ಬೆಕ್ಕಿದೆ. ಅದರಲ್ಲೇನು ಮಹಾ ವಿಶೇಷ ಎಂದಿರಾ? ಅದು ನಮ್ಮ, ನಿಮ್ಮ ಮನೆಗಳಲ್ಲಿರುವ ಬೆಕ್ಕುಗಳಿಗಿಂತ ಭಿನ್ನವಾಗಿದ್ದು, ತನ್ನ ಬಾಲದ ಕಾರಣದಿಂದ ಭಾರೀ ಫೇಮಸ್‌ ಆಗಿದೆ. ವಿಶೇಷ ಏನಪ್ಪಾ ಅಂದ್ರೆ, ಅದರ ಬಾಲ ಸುಮಾರು 44.66 ಸೆಂ.ಮೀ. (17.58ಇಂಚು) ಉದ್ದವಿದೆ. ತುಪ್ಪಳವೂ ಸೇರಿದರೆ 18.4 ಇಂಚು ಉದ್ದ! ಜಗತ್ತಿನ ಅತ್ಯಂತ ಉದ್ದ ಬಾಲದ ಸಾಕುಬೆಕ್ಕು ಎಂದು ಸೊಕ್ಕಿನಿಂದ ಬೀಗುತ್ತಿರುವ “ಸೈಗ್ನಸ್‌’ ಹೆಸರು ಗಿನ್ನಿಸ್‌ ದಾಖಲೆಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. 

ಎಲ್ಲರ ಮುದ್ದಿನ ಬೆಕ್ಕು
“ಜಗತ್ತಿನ ಅತಿ ಉದ್ದ ಬಾಲವುಳ್ಳ ಸಾಕುಬೆಕ್ಕು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹೆಣ್ಣುಬೆಕ್ಕು, ಲಾರೆನ್‌ ಹಾಗೂ ವಿಲ್‌ಪೊವರ್ ದಂಪತಿಯ ನೆಚ್ಚಿನ ಸಾಕುಪ್ರಾಣಿ. ಉದ್ದನೆಯ ಕಸಬರಿಕೆಯಂತೆ ಕಾಣುವ ಇದರ ಬಾಲವೇ ಈ ಬೆಕ್ಕನ್ನು ಜಗದ್ವಿಖ್ಯಾತ ಪ್ರಾಣಿಯನ್ನಾಗಿಸಿದೆ. 

ದೇಹಕ್ಕಿಂತ ಬಾಲವೇ ಉದ್ದ
ಎರಡು ವರ್ಷ ಪ್ರಾಯದ ಸೈಗ್ನಸ್‌ನ ಬಾಲವು ಅದರ ದೇಹಕ್ಕಿಂತಲೂ ಉದ್ದವಿದೆ. ಪ್ರತಿ ತಿಂಗಳೂ ಈ ಬೆಕ್ಕಿನ ಬಾಲ ಅರ್ಧಇಂಚಿನಷ್ಟು ಉದ್ದ ಬೆಳೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಬಾಲ ಇನ್ನಷ್ಟು ಉದ್ದ ಬೆಳೆಯುವ ನಿರೀಕ್ಷೆಯಿದೆ. ಈ ಹಿಂದೆ ಸ್ಟಿವರ್ಟ್‌ ಗಿಲ್ಲಿಗನ್‌ ಎಂಬ, 16.3 ಇಂಚು ಉದ್ದ ಬಾಲದ ಸಾಕುಬೆಕ್ಕಿನ ಹೆಸರಿನಲ್ಲಿ ಈ ದಾಖಲೆಯಿತ್ತು. 

ದಾಖಲೆಯ  ಹಿಂದಿನ ಉದ್ದೇಶ
ಈ ದಂಪತಿ, ಬೆಕ್ಕುಗಳಿಗೆ ಸಂಬಂಧಿಸಿದ ಚಾರಿಟಿ ನಡೆಸುತ್ತಿದ್ದು, ಅದಕ್ಕಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ವಿಶ್ವ ಗಿನ್ನಿಸ್‌ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ಎರಡೂ ಗಿನ್ನಿಸ್‌ ದಾಖಲೆಯಿಂದ ಪಡೆದ ಹಣವನ್ನು ಸಂಪೂರ್ಣವಾಗಿ ಫ‌ರ್ನಡೇಲ್‌ ಹಾಗೂ ಗ್ರೇಟರ್‌ ಮೆಟ್ರೋಡೆಟ್ರಾಯ್‌ ಪ್ರದೇಶದಲ್ಲಿನ ಅನಾಥ ಹಾಗೂ ಅಪಘಾತಗಳಲ್ಲಿ ಗಾಯಗೊಂಡ ಬೆಕ್ಕುಗಳ ಚಿಕಿತ್ಸೆ ಹಾಗೂ ಆರೈಕೆಗಾಗಿ ವಿನಿಯೋಗಿಸುತ್ತಿದ್ದಾರಂತೆ. 

ಎರಡು ವಿಶ್ವ ದಾಖಲೆಗಳು
ಲಾರೆನ್‌ ಹಾಗೂ ವಿಲ್‌ಪೊವರ್ ದಂಪತಿ ಸಾಕಿರುವ ಆಕುರಸ್‌ ಎಂಬ ಸವನ್ನಾ ಬೆಕ್ಕು ಸುಮಾರು 48.4 ಸೆಂ.ಮೀ. (19 ಇಂಚು)ಗಳಷ್ಟು ಉದ್ದವಿದ್ದು, “ಜಗತ್ತಿನ ಅತಿ ಉದ್ದದ ಸಾಕುಬೆಕ್ಕು’ ಎಂಬ ಗಿನ್ನಿಸ್‌ ದಾಖಲೆ ಮಾಡಿದೆ. ಇದು ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ. ದಂಪತಿಯೇ ಹೇಳುವಂತೆ, ಎರಡೂ ವಿಶ್ವದಾಖಲೆ ವೀರರು ಯಾವಾಗಲೂ ಜೊತೆಯಾಗಿ ಆಟವಾಡಿಕೊಂಡು ಸ್ನೇಹಿತರಂತೆ ಒಟ್ಟಿಗಿರುವುದಲ್ಲದೆ, ಪರಸ್ಪರ ತಬ್ಬಿಕೊಂಡು ಮಲಗಿಕೊಳ್ಳುತ್ತವಂತೆ.

ಹರೀಶ್‌ ಕುಮಾರ್‌

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.