ಬ್ಯಾಂಡ್ ಏಡ್ ಹುಟ್ಟಿದ್ದು ಹೇಗೆ?
ಗಾಯಕ್ಕೆ ಕ್ಷಣದಲ್ಲಿ ಮದ್ದು!
Team Udayavani, Nov 7, 2019, 3:35 AM IST
ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭದಲ್ಲಿ ಆ ಕ್ಷಣಕ್ಕೆ ನಮಗೆಲ್ಲರಿಗೂ ಬೇಕಾಗುವ ವಸ್ತು “ಬ್ಯಾಂಡ್ ಏಡ್’. ಅದು ರೂಪ ತಳೆದ ಕಥೆ ಇಲ್ಲಿದೆ.
ಬ್ಯಾಂಡ್ ಏಡ್ ಆವಿಷ್ಕಾರವಾಗುವುದಕ್ಕೆ ಮುಂಚೆ ಜನರು ಹತ್ತಿಯ ಉಂಡೆಯನ್ನು ಗಾಯದ ಮೇಲಿಟ್ಟು ಅದರ ಸುತ್ತ ಬಟ್ಟೆ ಕಟ್ಟುತ್ತಿದ್ದರು. ಅದಕ್ಕೂ ಮುಂಚೆ ಎಲೆ ಮುಂತಾದ ಪ್ರಾಕೃತಿಕ ವಸ್ತುಗಳನ್ನೇ ಬಳಸಿ ಗಾಯದ ಮೇಲೆ ಹಚ್ಚುತ್ತಿದ್ದರು. ಇವ್ಯಾವುವೂ ಸುರಕ್ಷಿತ ವಿಧಾನ ಆಗಿರಲಿಲ್ಲ. ಅದರಿಂದ ಹುಣ್ಣಾಗುವ ಸಾಧ್ಯತೆ ಇದ್ದವು. ಈ ಕಾರಣಕ್ಕೇ ಬ್ಯಾಂಡ್ ಏಡ್ ಸಂಶೋಧನೆಯಾಗಿದ್ದು.
ಪತ್ನಿಯೇ ಸ್ಫೂರ್ತಿ
ಬ್ಯಾಂಡ್ ಏಡ್‌ಅನ್ನು ಆವಿಷ್ಕರಿಸಿದ್ದು ಅರ್ಲ್ ಡಿಕ್ಸನ್ ಎಂಬ ವ್ಯಕ್ತಿ. ಆತ 1920ರ ಸಮಯದಲ್ಲಿ ಕಾರ್ಖಾನೆಯೊಂದರಲ್ಲಿ ನೌಕರನಾಗಿದ್ದ. ಆತನ ಪತ್ನಿ ಅಪಘಾತಕ್ಕೀಡಾದಾಗ ಆಕೆಯ ಕೈಬೆರಳುಗಳು ಜಖಂಗೊಂಡಿದ್ದವು. ಎರಡು ಮೂರು ದಿನಗಳಿಗೆ ಒಮ್ಮೆಯಾದರೂ ಗಾಯದ ಸುತ್ತ ಸುತ್ತಿದ್ದ ಬಟ್ಟೆಯನ್ನು ಬದಲಿಸಬೇಕಿತ್ತು. ಅಲ್ಲದೆ ಆತ ನ ಪತ್ವಿ ಆಗಾಗ್ಗೆ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವಾಗ ಗಾಯ ಮಾಡಿಕೊಳ್ಳುತ್ತಿದ್ದಳು. ಪದೇಪದೆ ಗಾಯದ ಸುತ್ತ ಬಟ್ಟೆ ಬದಲಿಸುವುದೇ ಕೆಲಸವಾದಾಗ ಅರ್ಲ್, ರೋಸಿ ಹೋಗಿದ್ದ.
ಮೊದಲ ಬ್ಯಾಂಡ್ ಏಡ್
ಅದಕ್ಕಾಗಿ ಆತ ಒಂದು ಪರಿಹಾರವನ್ನು ಕಂಡುಕೊಂಡ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲ್ಪಡುತ್ತಿದ್ದ ಟೇಪ್ ರೋಲನ್ನು ಕೈಗೆತ್ತಿಕೊಂಡು ಅದರ ಮೇಲೆ ಔಷಧಿ ಲೇಪಿಸಿದ. ಅದರ ಮೇಲೆ ತೆಳುವಾದ ಬಟ್ಟೆಯನ್ನು ಹೊದಿಸಿ ಕವರ್ ಮಾಡಿದ. ಈಗ ಬೇಕೆಂದಾಗ ಟೇಪ್ ರೋಲನ್ನು ತನಗೆ ಬೇಕಾದಷ್ಟು ಮಾತ್ರವೇ ಕಟ್ ಮಾಡಿಕೊಂಡು ಗಾಯದ ಮೇಲೆ ಕಟ್ಟಬಹುದಿತ್ತು. ಇದು ಜಗತ್ತಿನ ಮೊದಲ ಬ್ಯಾಂಡ್ ಏಡ್!
ಬದಲಾಯ್ತು ಸ್ವರೂಪ
ಜಗತ್ತಿನ ಮೊದಲ ಬ್ಯಾಂಡ್ ಏಡ್ ಮಾರುಕಟ್ಟೆಗೆ ಬಂದಿದ್ದು 1921ರಲ್ಲಿ. ಖಾಸಗಿ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಅದರ ಮೂಲ ಸ್ವರೂಪವನ್ನು ಬದಲಿಸಿ ಮೇಲಿಂದ ಮೇಲೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿತು. ಬ್ಯಾಂಡ್ ಏಡ್ ಮೇಲೆ ಗಾಳಿಯಾಡಲು ಚಿಕ್ಕ ಚಿಕ್ಕ ರಂಧ್ರಗಳು, ಔಷಧ ಪಟ್ಟಿ ಇವೆಲ್ಲವೂ ಆನಂತರದ ಸುಧಾರಣೆಗಳು.
ಹಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.