ಪಟ್ಟಣವನ್ನೇ ಹೆದರಿಸಿದ ಹೆದರಿಂಗ್‌ ಟನ್‌

ಹಿಸ್ಟರಿ ಕಥೆ : ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೆ ಇಲ್ಲೊಂದು ಪುಟ್ಟ ಜಾಗ.

Team Udayavani, Apr 25, 2019, 6:25 AM IST

China-Bomb

17ನೇ ಶತಮಾನದ ಅಂತ್ಯದಲ್ಲಿ ಜಾನ್‌ ಹೆದರಿಂಗ್‌ ಟನ್‌ ಎಂಬಾತ ಇಂಗ್ಲೆಂಡ್‌ನ‌ಲ್ಲಿದ್ದ. ಆತ ಬಹಳ ಮೋಜಿನ ವ್ಯಕ್ತಿ. ಆಗಿನ ಕಾಲದಲ್ಲಿ ಫ್ಯಾಷನ್‌ಗೆ ತಕ್ಕಂತೆ ಉಡುಗೆ ತೊಡುವುದರಲ್ಲಿ ಆತ ಹೆಸರುವಾಸಿಯಾಗಿದ್ದ. ಅಲ್ಲದೆ ದಿರಿಸಿನ ವಿಷಯದಲ್ಲಿ ಅನೇಕ ಪ್ರಯೋಗಗಳನ್ನೂ ಮಾಡುತ್ತಿದ್ದ. ಅನೇಕರಿಗೆ ಆತನ ಉಡುಗೆ ತೊಡುಗೆ ಮಾದರಿಯಾಗಿತ್ತು.

ಒಂದು ದಿನ ಎಂದಿನಂತೆ ಆಕರ್ಷಕವಾಗಿ ಸಿಂಗರಿಸಿಕೊಂಡ ಜಾನ್‌ ಮನೆಯಿಂದ ಹೊರಬಿದ್ದ. ಬೀದಿಯಲ್ಲಿ ಹೋಗುವಾಗ ಅನೇಕ ಮಹಿಳೆಯರು ಜಾನ್‌ನನ್ನು ಕಂಡು ಮೂರ್ಛೆ ಹೋದರು. ಮಕ್ಕಳು ಬೆದರಿ ಕಿರುಚಾಡಿದರು. ನಾಯಿಗಳು ಬೊಗಳುತ್ತಾ ಹಿಮ್ಮೆಟ್ಟಿದವು. ಈ ಗಲಾಟೆಯಲ್ಲಿ ಹಲವರು ಪೆಟ್ಟು ಮಾಡಿಕೊಂಡರು. ಆಗ ಪೊಲೀಸರು ಜಾನ್‌ನನ್ನು ಠಾಣೆಗೆ ಕರೆದೊಯ್ದರು.

ಜಾನ್‌ಗೆ, ಯಾಕೆ ಹೀಗಾಗುತ್ತಿದೆ ಎಂದು ತಿಳಿದಿರಲಿಲ್ಲ. ಹೀಗಾಗಿ ಅದೇನೆಂದು ಕೇಸ್‌ ಹಾಕುತ್ತಾರೋ ನೋಡೇ ಬಿಡೋಣ ಎಂದು ಸಮಾಧಾನಚಿತ್ತನಾಗಿ ಕುಳಿತಿದ್ದ. ವಿಷಯ ತಿಳಿದಾಗ ಹೌಹಾರುವ ಸ್ಥಿತಿ ಅವನದಾಗಿತ್ತು. ಟೋಪಿ ಧರಿಸಿದ್ದಕ್ಕೆ ಅವನನ್ನು ಪೊಲೀಸರು ಬಂಧಿಸಿದ್ದರು. ಜಾನ್‌ಗೆ ಈಗ ಅರ್ಥವಾಗಿತ್ತು. ಆ ಟೋಪಿ ಬೆಳಕಿನಲ್ಲಿ ಮಿರಮಿರನೆ ಹೊಳೆಯುತ್ತಿತ್ತು. ಅದು ಬಿಸಿಲಿನಲ್ಲಿ ಮಾಂತ್ರಿಕ ಶಕ್ತಿ ಹೊರಸೂಸುತ್ತಿದೆ ಎಂದುಕೊಂಡಿದ್ದೇ ಮಹಿಳೆಯರು ಮೂರ್ಛೆ ಹೋಗಲು ಕಾರಣವಾಗಿತ್ತು. ಆ ರೀತಿಯ ಟೋಪಿಯನ್ನು ಹಿಂದೆ ಯಾರೂ ಧರಿಸಿದ್ದೇ ಇಲ್ಲ. ಪ್ರಯೋಗದ ನೆಪದಲ್ಲಿ ಧರಿಸಿದ ಟೋಪಿಯಿಂದ ಇಷ್ಟೆಲ್ಲಾ ರಾದ್ಧಾಂತವಾಗಿತ್ತು.

ಆ ಟೋಪಿ ಇಂದು ಫ್ಯಾಷನ್‌ ಜಗತ್ತಿನಲ್ಲಿ “ಟಾಪ್‌ ಹ್ಯಾಟ್‌’ ಎಂದೇ ಪ್ರಖ್ಯಾತ. ಜಗತ್ತಿನ ಮಹಾನ್‌ ವ್ಯಕ್ತಿಗಳೆಲ್ಲಾ ಈ ಟೋಪಿಯನ್ನು ಧರಿಸಿ ಮಿಂಚಿದ್ದಾರೆ. ಅದನ್ನು ಮೊದಲ ಬಾರಿಗೆ ಧರಿಸಿದ ಶ್ರೇಯ ಜಾನ್‌ ಹೆದರಿಂಗ್‌ಟನ್‌ನದ್ದು! ಮೊದಲ ಬಾರಿ ಧರಿಸಿದಾಗ ಏನಾಯ್ತು ಎಂಬುದು ನಿಮಗೀಗಾಗಲೇ ತಿಳಿದಿರುತ್ತದೆ!

— ಹವನ

ಟಾಪ್ ನ್ಯೂಸ್

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.