ಪೆನ್ನು ಹಿಡಿಯುವ ಕೈಗೆ ಕತ್ತಿ ಚಾಕು ಸಿಕ್ಕರೆ ಏನಾದೀತು?
ಹಿಸ್ಟರಿ ಕಥೆ
Team Udayavani, May 9, 2019, 6:15 AM IST
ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೆ ಇಲ್ಲೊಂದು ಪುಟ್ಟ ಜಾಗ
ವಿಜ್ಞಾನ ಪ್ರಪಂಚ ಹಲವು ಮಹನೀಯರನ್ನು ನೀಡಿದೆ. ಅವರಿಂದ ಪ್ರಪಂಚಕ್ಕೆ ಅನೇಕ ಕೊಡುಗೆಗಳು ಸಿಕ್ಕಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ವೈಯಕ್ತಿಕ ಜೀವನದಲ್ಲಿ ವಿಕ್ಷಿಪ್ತ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದಕ್ಕೆ ಈ ಘಟನೆ ನಿದರ್ಶನ.
16ನೇ ಶತಮಾನದ ಡೆನ್ಮಾರ್ಕ್‌ನಲ್ಲಿ ಖಗೋಳಶಾಸ್ತ್ರಜ್ಞನೊಬ್ಬನಿದ್ದ. ಆತನ ಹೆಸರು ಟೈಕೊ ಬ್ರಾಹೆ. ಒಮ್ಮೆ ಟೈಕೋಗೂ, ಮತ್ತೂಬ್ಬ ವಿಜ್ಞಾನಿಗೂ ನಡುವೆ ಮನಸ್ತಾಪ ಏರ್ಪಟ್ಟಿತು. ಗಣಿತ ಸೂತ್ರ ಅದಕ್ಕೆ ಕಾರಣ. ಒಬ್ಬರು ಪರ, ಇನ್ನೊಬ್ಬರು ಅದರ ವಿರುದ್ಧ. ಈ ಮನಸ್ತಾಪ ತಾರಕಕ್ಕೇರಿ, ಯಾರು ಸರಿ ಎಂದು ಇಬ್ಬರ ನಡುವೆಯೂ ಪಂದ್ಯ ಏರ್ಪಟ್ಟಿತು. ಈಗಲಾದರೆ ಯಾವ ಸೂತ್ರ ಸರಿಯೆಂಬುದನ್ನು ಪತ್ತೆ ಹಚ್ಚಲು ಇಂಟರ್‌ನೆಟ್ ಸಹಾಯ ಪಡೆದುಕೊಳ್ಳಬಹುದು.
ಆದರೆ ಆಗಿನ ಕಾಲದಲ್ಲಿ ಆ ಸೌಕರ್ಯ ಇರಲಿಲ್ಲವಲ್ಲ. ಹೀಗಾಗಿ ಇಬ್ಬರೂ ಜಿದ್ದಿಗೆ ಬಿದ್ದು ಹೊಡೆದಾಡಿಕೊಂಡರು. ಹೊಡೆದಾಟದಲ್ಲಿ ಯಾರು ಜಯಗೊಳಿಸುವರೋ ಅವರೇ ಜಯಶಾಲಿ! ಇಬ್ಬರೂ ಗಣಿತ ಸೂತ್ರದ ತಪ್ಪು ಸರಿ ಕಂಡುಹಿಡಿಯಲು ಬುದ್ಧಿಮತ್ತೆಯ ಪರೀಕ್ಷೆಗೆ ಬದಲಾಗಿ ಬಲಪರೀಕ್ಷೆಯ ಮೊರೆಹೋಗಿದ್ದರು.
ಕಡೆಗೂ ಟೈಕೋ ಸೋತ. ಸೋಲುವುದು ಹಾಗಿರಲಿ; ಈ ಕಾಳಗದಲ್ಲಿ ಮೂಗು ಕಳೆದುಕೊಂಡು ಜೀವನ ಪರ್ಯಂತ ತಾಮ್ರದ ಕೃತಕ ಮೂಗನ್ನು ಆತ ಧರಿಸಬೇಕಾಗಿ ಬಂದಿತು. ಪೆನ್ನು ಹಿಡಿಯುವ ಕೈಗೆ ಕತ್ತಿ ಸಿಕ್ಕರೆ ಇನ್ನೇನಾದೀತು?!
— ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.