ಟೆನ್ ಟೆನ್ ಟೆನ್
ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!
Team Udayavani, Jul 11, 2019, 5:00 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1 ಪಿಲವುಲ್ಲಕಂಡಿ ತೆಕ್ಕೆಪರಂಬಿಲ್ ಉಷಾ- ಇದು ವೇಗದ ಓಟಗಾರ್ತಿ ಪಿ.ಟಿ. ಉಷಾ ಅವರ ಪೂರ್ತಿ ಹೆಸರು.
2 ಕೇರಳದ ಪಯ್ಯೋಲಿ ಎಂಬ ಹಳ್ಳಿಯಲ್ಲಿ ಜನಿಸಿದ ಉಷಾ ಅವರಿಗೆ “ಪಯ್ಯೋಲಿ ಎಕ್ಸ್‌ಪ್ರೆಸ್’ ಎಂಬ ಬಿರುದೂ ಇದೆ.
3 ಬಡ ಕುಟುಂಬದಲ್ಲಿ ಹುಟ್ಟಿದ ಉಷಾ ಅವರ ಕ್ರೀಡಾ ಪ್ರತಿಭೆಯನ್ನು ಮೊದಲು ಗುರುತಿಸಿದ್ದು, ಕೋಚ್ ಓ.ಎಂ.
ನಂಬಿಯಾರ್.
4 ತಿಂಗಳಿಗೆ ಸಿಗುತ್ತಿದ್ದ 250 ರೂ. ಸ್ಕಾಲರ್ ಶಿಪ್ ನೆರವಿನಿಂದ ಉಷಾ, ಕಣ್ಣೂರಿನ ಕ್ರೀಡಾ ಶಾಲೆಯಲ್ಲಿ ಹೆಚ್ಚಿನ ತರಬೇತಿ ಪಡೆದರು.
5 1980ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಓಟದಲ್ಲಿ ಸ್ಪರ್ಧಿಸಿದಾಗ ಉಷಾಗೆ ಕೇವಲ 16 ವರ್ಷ!
6 ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಫೈನಲ್ಸ್ ತಲುಪಿದ ಮೊದಲ ಭಾರತೀಯ ಮಹಿಳೆ ಉಷಾ.
7 ಒಟ್ಟು 101 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ಖ್ಯಾತಿ ಇವರದ್ದು.
8 1984ರಲ್ಲಿ ಉಷಾರಿಗೆ ಪದ್ಮಶ್ರೀ ಮತ್ತು ಅರ್ಜುನ ಪುರಸ್ಕಾರ ದೊರೆತಿದೆ.
9 ಭಾರತದ ಓಟದ ರಾಣಿಯ ಬಗ್ಗೆ ಬಾಲಿವುಡ್ ಸಿನಿಮಾ ಕೂಡಾ ತಯಾರಾಗುತ್ತಿದೆ.
10 ಸದ್ಯಕ್ಕೆ ಉಷಾ ಅವರು, ಕೇರಳದಲ್ಲಿ
10-12 ವಯೋಮಾನದ ಹುಡುಗಿಯರಿ
ಗಾಗಿ ಟ್ರೇನಿಂಗ್ ಅಕಾಡೆಮಿ ನಡೆಸುತ್ತಿದ್ದಾರೆ.
ಸಂಗ್ರಹ: ಪ್ರಿಯಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.