ಟೆನ್ ಟೆನ್ ಟೆನ್
ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!
Team Udayavani, Jul 18, 2019, 5:00 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ
ಕೊಡುವ ಪ್ರಯತ್ನವಿದು…
1. ಬಾಹ್ಯಾಕಾಶ ಯಾನಗೈದ ಮೊದಲ ಭಾರತೀಯ ಮಹಿಳೆ ಹಾಗೂ ಎರಡನೇ ಭಾರತೀಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾದವರು ಕಲ್ಪನಾ ಚಾವ್ಲಾ.
2. ಹರ್ಯಾಣಾದಲ್ಲಿ ಹುಟ್ಟಿದ ಕಲ್ಪನಾ ಭರತನಾಟ್ಯ ಮತ್ತು ಸ್ಕೂಬಾ ಡೈವಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು.
3. ಕಲ್ಪನಾಗೆ ಹೆತ್ತವರು ಇಟ್ಟ ಹೆಸರು ಮೊಂಟೊ. ಆದರೆ, ಕಲ್ಪನಾ ಎಂಬ ಹೆಸರನ್ನು ಅವರೇ ಆಯ್ಕೆ ಮಾಡಿಕೊಂಡಿದ್ದಂತೆ.
4. ಶಾಲಾ ದಿನಗಳಲ್ಲಿ ಕರಾಟೆ, ಬ್ಯಾಡ್ಮಿಂಟನ್ ಮತ್ತು ರನ್ನಿಂಗ್ ರೇಸ್‌ನಲ್ಲೂ ಕಲ್ಪನಾ ಭಾಗವಹಿಸುತ್ತಿದ್ದರು.
5. ಚಂಡೀಗಡ್‌ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ ಕಲ್ಪನಾ, ಹೆಚ್ಚಿನ ಓದಿಗಾಗಿ ಅಮೆರಿಕಕ್ಕೆ ತೆರಳಿದರು.
6. ಅಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಚ್.ಡಿಯನ್ನೂ ಮಾಡಿದರು.
7. ಅಮೆರಿಕದ ಬಾಹ್ಯಾಕಾಶ ಸಂಸ್ಥೆ- ನಾಸಾದಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ಖ್ಯಾತಿ ಅವರದು.
8. ಸರ್ಟಿಫೈಡ್ ಫ್ಲೈಟ್ ಇನ್‌ಸ್ಟ್ರಕ್ಟರ್ (ವಿಮಾನಯಾನ ತರಬೇತುದಾರ) ಆಗಿದ್ದ ಕಲ್ಪನಾರ ಬಳಿ ಖಾಸಗಿ ವಿಮಾನ ಚಾಲನೆಯ ಪರವಾನಗಿಯೂ ಇತ್ತು.
9. ಕಲ್ಪನಾರ ಮರಣಾನಂತರ ಪತಿ ಜೀನ್ ಪಿಯರಿ ಹ್ಯಾರಿಸನ್, ಮಡದಿಯ ಕುರಿತು “ದಿ ಎಡ್ಜ್ ಆಫ್ ಟೈಮ್’ ಎಂಬ ಜೀವನಚರಿತ್ರೆ ಬರೆದಿದ್ದಾರೆ
10. ಭಾರತದ ಮೊದಲ ಹವಾಮಾನ ಉಪಗ್ರಹ, ನಾಸಾದ ಸೂಪರ್‌ಕಂಪ್ಯೂಟರ್, ಕರ್ನಾಲ್‌ನಲ್ಲಿರುವ ತಾರಾಲಯ, ಮಂಗಳ ಗ್ರಹದ ಮೇಲಿರುವ ಬೆಟ್ಟ, ಮಂಗಳ ಮತ್ತು ಗುರು ಗ್ರಹದ ಕಕ್ಷೆಗಳ ನಡುವೆ ಸೂರ್ಯನನ್ನು ಸುತ್ತುವ ಕ್ಷುದ್ರಗ್ರಹ- ಇವೆಲ್ಲವಕ್ಕೂ ಕಲ್ಪನಾ ಚಾವ್ಲಾರ ಹೆಸರು ನೀಡಲಾಗಿದೆ.
– ಸಂಗ್ರಹ: ಪ್ರಿಯಾಂಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.