ವಿಸ್ಮಯ: ಎಲ್ಲೋರಾದ ದಿ ಗ್ರೇಟ್‌ ಕೈಲಾಸನಾಥ ದೇವಾಲಯ

Team Udayavani, Mar 15, 2018, 4:15 PM IST

lead-main.jpg

ರಾಜ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು! ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ!

ಕೈಲಾಸನಾಥ ದೇವಸ್ಥಾನವು ವಿಶ್ವದ ಅತಿ ದೊಡ್ಡ ಏಕಶಿಲೆಯ ರಚನೆಯಾಗಿದೆ. ವಾಸ್ತುಶಿಲ್ಪದ ಇತಿಹಾಸದಲ್ಲಿ ಅತ್ಯಂತ ವಿಸ್ಮಯಕಾರಿ ಕಟ್ಟಡಗಳಲ್ಲಿ ಒಂದಾಗಿರುವ ಕೈಲಾಸನಾಥ ದೇವಸ್ಥಾನ ಸುಮಾರು 60 ಅಡಿ ಎತ್ತರ ಮತ್ತು 200 ಅಡಿ ಅಗಲವನ್ನು ಹೊಂದಿದೆ. ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನವನ್ನು 8ನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜರು ನಿರ್ಮಿಸಿದರು. ಈ ಏಕಶಿಲೆಯ ರಚನೆಯನ್ನು ನಿರ್ಮಿಸಲು ಬಳಸಲಾದ ಬಂಡೆ ಸುಮಾರು 4,00,000 ಟನ್‌ಗಳಷ್ಟು ತೂಕವನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.

34 ಗುಹಾಂತರ ದೇವಾಲಯಗಳಲ್ಲಿ 16ನೇ ಗುಹೆಯಾದ ಈ ದೇವಾಲಯದ ಉದ್ದ 276 ಅಡಿಗಳು. ಅಗಲ 154 ಅಡಿಗಳು ಮತ್ತು ಎತ್ತರ 100 ಅಡಿ. ದೇವಾಲಯದ ಮಧ್ಯದಲ್ಲಿ ಗರ್ಭಗೃಹ, ಪಶ್ಚಿಮದಲ್ಲಿ ಮಹಾದ್ವಾರ, ನಂದಿ ಮಂಟಪ, ಮತ್ತು ಅಂಗಳವನ್ನು ಹೊಂದಿದ್ದು ಅದು ಸನ್ಯಾಸಿ ಮಂಟಪಗಳನ್ನೂ ಹೊಂದಿದೆ. (ಅಂದಿನ ಕಾಲದಲ್ಲಿ ಸನ್ಯಾಸಿಗಳು ದೇವಾಲಯದ ಪ್ರಾಂಗಣದಲ್ಲಿಯೇ ವಾಸಿಸುತ್ತಿದ್ದರು). ಈ ದೇವಾಲಯವು ಎರಡು ಅಂತಸ್ತುಗಳನ್ನು ಹೊಂದಿದೆ. ದೇವಾಲಯದಲ್ಲಿ ಪೀಠ ಮತ್ತು ಆನೆ ಕೆತ್ತಲಾಗಿದ್ದು, ಅದರ ಕುಸುರಿ ಕಲೆಯ ಕೆತ್ತನೆ ಅದ್ಭುತವಾಗಿದೆ. ಈ ಆನೆಯ ಬಳಿ ಮನುಷ್ಯ ನಿಂತರೆ ಬಹಳ ಕುಬ್ಜನಾಗಿ ಕಾಣುತ್ತಾನೆ! ಇಲ್ಲಿನ ಶಿಲ್ಪಗಳ ಪಟ್ಟಿಯಲ್ಲಿ ದಶಾವತಾರ, ಭೈರವನೊಂದಿಗೆ ಕೈಲಾಸ ಪರ್ವತವನ್ನು ಎತ್ತಿ ಹಿಡಿದ ರಾವಣನ ವಿಗ್ರಹ. ಇದರಲ್ಲಿ ಹತ್ತು ತಲೆಗಳೂ ಒಂದೇ ತಲೆಯಂತೆ ರಚಿತವಾಗಿದೆ. ವೀರಮಂಡಿಯಲ್ಲಿ ಕುಳಿತಿರುವ 
ಭಂಗಿ ಭವ್ಯವಾಗಿದೆ. ನಟರಾಜ, ವಿಷ್ಣು, ಪಾರ್ವತಿಯರ ಭಂಗಿಗಳೂ ಸಹ ಅತ್ಯಂತ ಶ್ರೇಷ್ಠ ಕಲಾಕೃತಿಗಳಾಗಿ ಮೂಡಿವೆ.

ಮೊಘಲ್‌ ದೊರೆ ಔರಂಗಜೇಬ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು! ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ! ಮಳೆಗಾಲದಲ್ಲಿ ದೇವಾಲಯದ ಆವರಣದಲ್ಲಿ ಜಲಪಾತದಂತೆ ಮಳೆ ಸುರಿಯುವುದನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಗೋಪುರ ಒಂದು ಹೆಲಿಪ್ಯಾಡ್‌ನ‌ಷ್ಟು ವಿಸ್ತೀರ್ಣವನ್ನು ಹೊಂದಿದೆ ಎಂದರೆ ಅದರ ಬೃಹದಾಕಾರ ಕಲ್ಪನೆಗೆ ಬಂದೇ ಬರುತ್ತದೆ. ಎಎಲ್ಲೋರಾದ ಕೈಲಾಸನಾಥ ದೇವಾಲಯ ಭಾರತದ ಅಪೂರ್ವವಾದ ವಾಸ್ತುಶಿಲ್ಪ ರಚನೆಯಾಗಿದೆ ಎಂದು ಇಂಗ್ಲೆಂಡಿನ ಪ್ರಸಿದ್ಧ ಇತಿಹಾಸಕಾರರಾದ ಬ್ರೌನ್‌ ಹಾಗೂ ವಿ.ಎ.ಸ್ಮಿತ್‌ ಅಭಿಪ್ರಾಯ ಪಡುತ್ತಾರೆ.

*ಪುರುಷೋತ್ತಮ ವೆಂಕಿ

ಟಾಪ್ ನ್ಯೂಸ್

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.