ಅವನು ನನ್ನ ಕಣ್ಣೆದುರೇ ಸಮುದ್ರಕ್ಕೆ ಬಿದ್ದ! 


Team Udayavani, Jan 19, 2017, 3:50 AM IST

lead.jpg

(ಹಿಂದಿನ ಸಂಚಿಕೆ: ಅಜಿತನಿದ್ದ ಹಡಗು ಬಿರುಗಾಳಿಗೆ ಸಿಕ್ಕಿತ್ತು. ಡೆಕ್‌ ಮೇಲೆ ಓಡಾಡುತ್ತಿದ್ದ ಅಜಿತನಿಗೆ ಅಂಕಲ್‌ ಒದ್ದಾಡುತ್ತಾ ಹಡಗಿನಿಂದ ಸಮುದ್ರಕ್ಕೆ ಜಾರುತ್ತಿರುವುದು ಕಾಣಿಸಿತು. ಆತ ಹೆಲ್ಪ್, ಹೆಲ್ಪ್ ಅಂತ ಕಿರಿಚುತ್ತ ಓಡಿದ)

“ಹೆಲ್ಪ್ ಹೆಲ್ಪ್, ಅಂಕಲ್‌ ಹಡಗಿಂದ ಕೆಳಗೆ ಬೀಳ್ತಿದ್ದಾರೆ, ಯಾರಾದ್ರೂ ಕಾಪಾಡಿ ..’ 
ಎಡೆಬಿಡದೇ ಜೋರಾಗಿ ಕಿರಿಚಿಕೊಳ್ಳುತ್ತಿದ್ದೆ. ಕಾಲಿಂದ ಸಪ್ಪಳ  ಮಾಡುತ್ತಿದ್ದೆ. ಕಣ್ಣೀರಿಂದ ಮುಖವೆಲ್ಲ ಒದ್ದೆಯಾಗಿತ್ತು. ನನ್ನ ದನಿ ಯಾರಾದರೂ ಆಫೀಸರ್‌ಗೆ ಕೇಳಿ ಅವರು ಸಹಾಯಕ್ಕೆ ಬರಬಹುದು ಅಂದುಕೊಂಡಿದ್ದೆ. ಆದರೆ ಆ ಬಿರುಗಾಳಿಯಲ್ಲಿ ಯಾರ ಮಾತು ಯಾರಿಗೂ ಕೇಳುವಂತಿರಲಿಲ್ಲ. ಆದರೂ ಕಿರುಚುವುದನ್ನು ಮುಂದುವರಿಸಿದ್ದೆ. 
“ಯಾಕೆ ಹಾಗೆ ಕಿರುಚಿ¤ದ್ದೀಯಾ, ಏನಾಯ್ತು?’ ಕಟುವಾದ ದನಿಯೊಂದು ಹತ್ತಿರದಿಂದ ಕೇಳಿದಂತಾಗಿ ತಲೆ ಎತ್ತಿದೆ. ಎದುರು ಕ್ಯಾಪ್ಟನ್‌ ನಿಂತಿದ್ದರು. ಅವರ ಕಣ್ಣುಗಳು ತೀಕ್ಷ್ಣವಾಗಿ ನನ್ನನ್ನೇ ದಿಟ್ಟಿಸುತ್ತಿದ್ದವು. ನನಗೆ ಸಮಾಧಾನವಾಯ್ತು. “ಓಹ್‌ ಸರ್‌’ ನನಗರಿವಿಲ್ಲದೇ ಸಮಾಧಾನದ ನಿಟ್ಟುಸಿರು ಹೊರಬಂತು. 

“ಅಲ್ಲೊಬ್ಬ ವ್ಯಕ್ತಿ ಹಡಗಿನಿಂದ ಕೆಳಗೆ ಬೀಳುತ್ತಿದ್ದಾನೆ, ದಯವಿಟ್ಟು ರಕ್ಷಿಸಿ’ ಎಂದು ಕಳಕಳಿಯಿಂದ ಕೇಳಿದೆ. 
” ಎಲ್ಲಿ?’ ಕೂಡಲೇ ಬಂತು ಆತಂಕದ ಪ್ರಶ್ನೆ. “ಓ ಅಲ್ಲಿ ‘ ಬೆಟ್ಟು ಮಾಡಿ ತೋರಿಸಿದೆ. 
ಮುಂದಿನ ವಿವರಣೆಗೂ ಕಾಯದೇ ಕ್ಯಾಪ್ಟನ್‌ ಆಫೀಸರ್‌ ರೂಂನತ್ತ ನುಗ್ಗಿದರು. 

” ಮ್ಯಾನ್‌ ಓವರ್‌ಬೋರ್ಡ್‌ (ವ್ಯಕ್ತಿಯೊಬ್ಬ ಸಮುದ್ರಕ್ಕೆ ಬೀಳ್ತಿದ್ದಾನೆ), ಹಡಗನ್ನು ನಿಲ್ಲಿಸಿ, ಲಂಗರು ಇಳಿಸಿ’ 
ಕ್ಯಾಪ್ಟನ್‌ ಆದೇಶ ಕೂಡಲೇ ಜಾರಿಯಾಯ್ತು. ಅವರು ಮೇಲಿನ ಡೆಕ್‌ನತ್ತ ಓಡಿದರು. ಅವರ ಹಿಂದಿಂದ ನಾನೂ ಓಡಿದೆ. 
“ಚಿಕ್ಕ ಬೋಟ್‌ನ್ನು ನೀರಿಗಿಳಿಸಿ, ಚುಕ್ಕಾಣಿ ಹಿಡಿದು ನಮ್ಮ ಸಿಬ್ಬಂದಿಗಳೂ ಹೋಗಲಿ’ ಎಂದ ಕ್ಯಾಪ್ಟನ್‌ ಆ ವ್ಯಕ್ತಿ ಸಮುದ್ರಕ್ಕೆ ಬಿದ್ದ ಜಾಗವನ್ನು ಗುರುತಿಸಿ, “ಇಲ್ಲಿಂದಲೇ ಆತ ಬಿದ್ದಿದ್ದು’ ಎಂದರು. ಸಿಬ್ಬಂದಿಗಳು ಆ ಜಾಗದಲ್ಲೇ ಹುಡುಕತೊಡಗಿದರು.

ಇಷ್ಟರಲ್ಲಿ ಹಡಗಿನಲ್ಲಿದ್ದ ಜನರೆಲ್ಲ ಡೆಕ್‌ವೆುàಲೆ ಗುಂಪುಸೇರತೊಡಗಿದರು.
“ಏನಾಗ್ತಿದೆ ಇಲ್ಲಿ?’ ಒಬ್ಬ ವ್ಯಕ್ತಿ ಕೇಳಿದ. 
ನಾನು ಹೇಳಿದ ವಿಷಯ ಅಲ್ಲಿ ಸೇರಿದ್ದ ಜನರ ಬಾಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಿತು. ಇಡೀ ಪರಿಸರದಲ್ಲಿ ಆತಂಕ ಮಡುಗಟ್ಟಿತ್ತು. 

“ಇಲ್ಲಿದ್ದಾರೆ’ ಅಂತ ಯಾರೋ ಕೂಗಿದರು. 
“ಯಾರದು?’ ಒಬ್ಬ ಕೇಳಿದ.
“ಗೊತ್ತಿಲ್ಲಪ್ಪ’ ಅಂದ ಇನ್ನೊಬ್ಬ.

ಕ್ಷಣಮಾತ್ರದಲ್ಲಿ ಎರಡು ಲೈಫ್ಬೋಟ್‌ಗಳು ನೀರಿಗೆ ಬಿದ್ದವರತ್ತ ಚಲಿಸಿದವು. ನಾನು ಮೇಲೆ ಡೆಕ್‌ನಲ್ಲಿ ಕ್ಯಾಪ್ಟನ್‌ ಪಕ್ಕದಲ್ಲೇ ನಿಂತಿದ್ದೆ. ಉದ್ವೇಗದಲ್ಲಿ ಅವರು ನನ್ನ ಭುಜವನ್ನು ಬಿಗಿಯಾಗಿ ಹಿಡಿದಿದ್ದರು. ನನಗೆ ನೋವಾಗುತ್ತಿತ್ತು.
“ನೀವು ಅಷ್ಟು ಬಿಗಿಯಾಗಿ ಹಿಡಿದರೆ ನಂಗೆ ನೋವಾಗುತ್ತೆ ಸಾರ್‌ ‘ ಪ್ರತಿರೋಧ ತೋರುತ್ತಾ ಹೇಳಿದೆ.

“ಓಹ್‌, ಕ್ಷಮಿಸು ಪುಟಾಣಿ. ಸಮುದ್ರ ಇವತ್ತು ಬಹಳ ಪ್ರಕ್ಷುಬ್ಧವಾಗಿದೆ. ಸರಿಯಾದ ಸಮಯಕ್ಕೆ  ನಮ್ಮ ಸಿಬ್ಬಂದಿಗಳು ಆ ವ್ಯಕ್ತಿಯನ್ನು ತಲುಪಲಾಗುತ್ತದೋ ಇಲ್ಲವೋ? ಈವರೆಗೆ ನಮ್ಮ ಹಡಗಿನಲ್ಲಿ ಯಾರೊಬ್ಬರಿಗೂ ಹೀಗಾಗಿದ್ದಿಲ್ಲ’ 
ಕ್ಯಾಪ್ಟನ್‌ ಕ್ಷಣಕ್ಕೊಮ್ಮೆ ಬೈನಾಕ್ಯುಲರ್‌ನಲ್ಲಿ ರಕ್ಷಣಾ ಕಾರ್ಯವನ್ನು ನೋಡುತ್ತಾ ಅತ್ತಿಂದಿತ್ತ ಸರಿಯುತ್ತಿದ್ದರು. 
ನಾನು ಚಿಕ್ಕವನಾಗಿದ್ದ ಕಾರಣ ಮತ್ತು ಬೋಟ್‌ ನಮ್ಮಿಂದ ಬಹಳ ದೂರದಲ್ಲಿದ್ದರಿಂದ ನನಗೇನೂ ಕಾಣುತ್ತಿರಲಿಲ್ಲ. ಕ್ಯಾಪ್ಟನ್‌ ತೋಳನ್ನು ಜಗ್ಗಿದೆ. 

“ಅವರೇನು ಮಾಡ್ತಿದ್ದಾರೆ ಸಾರ್‌, ಆ ಅಂಕಲ್‌ನ್ನು ಅವರು ಕಾಪಾಡಿದ್ರಾ?’ 
“ಅವರಿಗೆ ಆ ವ್ಯಕ್ತಿ ಸಿಕ್ಕಿದ್ದಾನೆ, ಆತನನ್ನು ಎಳೆದು ಬೋಟ್‌ಗೆ ಹಾಕ್ತಿದ್ದಾರೆ’ ಕ್ಯಾಪ್ಟನ್‌ ನನಗೆ ರನ್ನಿಂಗ್‌ ಕಮೆಂಟರಿ ಕೊಡ್ತಿದ್ರು.

“ಓಹ್‌, ಬ್ಯಾಡ್‌ ಲಕ್‌, ದೊಡ್ಡ ಅಲೆಯೊಂದು ಆತನನ್ನು ಮತ್ತೆ ಸಮುದ್ರಕ್ಕೆಸೆದಿದೆ’ ಅವರ ದನಿಯಲ್ಲಿ ಆತಂಕವಿತ್ತು. 
ಅಷ್ಟರಲ್ಲಿ ಡೆಕ್‌ನ ರೈಲಿಂಗ್‌ಗೆ ಅಭಿಮುಖವಾಗಿ ನಿಂತು ಕೆಳಗಿಣುಕುತ್ತಿದ್ದ ಪ್ರಯಾಣಿಕರು ಅವರ ಕಣ್ಣಿಗೆ ಬಿದ್ದರು. 
” ಹಿಂದೆ ಸರೀರಿ, ರೈಲಿಂಗ್‌ನ್ನು ಬಿಟ್ಟು ಆಚೆ ನಿಲ್ಲಿ’ ಕ್ಯಾಪ್ಟನ್‌ ಕಿರುಚಿದರು, “ಇನ್ನೊಂದು ಅವಘಡ ನಡೆಯೋದು ನಮಗೆ ಬೇಕಿಲ್ಲ’ 

ನಿಂತಿದ್ದರೂ ಹಡಗು ಮೇಲೆ ಕೆಳಗೆ ತೊನೆದಾಡುತ್ತಿತ್ತು. ನಾನು ಕ್ಯಾಪ್ಟನ್‌ ಕೈಯಿಂದ ಬೈನಾಕ್ಯುಲರ್‌ ತಗೊಂಡು ನೋಡತೊಡಗಿದೆ, ಈಗ ರಕ್ಷಣಾ ಕಾರ್ಯ ಸ್ಪಷ್ಟವಾಗಿ ಕಾಣುತ್ತಿತ್ತು. ಮೈಗೆ ಹಗ್ಗವನ್ನು ಬಿಗಿದು ಇಬ್ಬರು ಸಮುದ್ರಕ್ಕೆ ಜಿಗಿದರು. ವೇಗವಾಗಿ ಈಜುತ್ತಾ ಅಂಕಲ್‌ ಸಮೀಪಕ್ಕೆ ಹೋದರು. ಅವರಲ್ಲೊಬ್ಬ ಅಂಕಲ್‌ನ ಹಿಡಿದು ಹಗ್ಗದಲ್ಲಿ ತನ್ನ ಮಧ್ಯಭಾಗಕ್ಕೆ ಬಿಗಿದ.  ಪ್ರಬಲ ಅಲೆಗಳ ವಿರುದ್ಧ ಈಜಾಡುತ್ತ ಲೈಫ್ಬೋಟ್‌ನ° ಸಮೀಪಿಸಿದ. ನಿಧಾನಕ್ಕೆ ಜಾಗರೂಕತೆಯಿಂದ ಅಂಕಲ್‌ನ್ನು ಲೈಫ್ಬೋಟ್‌ಗೆ ಶಿಫ್ಟ್ ಮಾಡಿದರು. 

“ಓಹ್‌, ದೇವರೇ’ ಕ್ಯಾಪ್ಟನ್‌ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಅಂಕಲ್‌ನ° ಪರೀಕ್ಷಿಸಲು ಸಜ್ಜಾಗಿ ನಿಂತಿದ್ದ ಡಾಕ್ಟರ್‌ಗೆ ಏನೋ ಸೂಚನೆ ಕೊಟ್ಟು ಮತ್ತೆ ತಮ್ಮ ಸ್ಥಾನಕ್ಕೆ ಮರಳಿದರು. 

“ನೀವು ಅಂಕಲ್‌ಗೆ ಏನ್‌ ಮಾಡ್ತೀರಿ ಡಾಕ್ಟರ್‌? ಅವರು ಸರಿಹೋಗಬಹುದಾ?’ ಅಂತ ಡಾಕ್ಟರ್‌ನ° ಕೇಳಿದೆ. 
” ಸರಿಹೋಗಬಹುದು ಅನ್ಸುತ್ತೆ, ಸದ್ಯಕ್ಕೆ ಅವರ ದೇಹದಿಂದ ನೀರನ್ನು ಹೊರತೆಗೆಯಬೇಕು, ಈ ಹೊತ್ತಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ, ಆತನ ದೇಹ ಬೆಚ್ಚಗಿರೋ ಹಾಗೆ ನೋಡಿಕೊಳ್ಳಬೇಕು’ ಎಂದರು.
“ಅವರ ದೇಹದಿಂದ ನೀರನ್ನು ಹೇಗೆ ತೆಗೀತೀರಿ?’ ಕೇಳಿದೆ.

” ಅವರನ್ನು ಮಲಗಿಸಿ ಹೊಟ್ಟೆ ಭಾಗಕ್ಕೆ ಮಸಾಜ್‌ ಮಾಡ್ತಾ ಹೋಗ್ತಿàವಿ, ಹೊಟ್ಟೆಯೊಳಗಿರೋದು ವಾಪಾಸ್‌ ಬರೋವರೆಗೂ ಮಸಾಜ್‌ ಮಾಡ್ತೀವಿ’ ಅಂದರು.
ರಕ್ಷಣಾ ಬೋಟ್‌ ಹಡಗನ್ನ ಸಮೀಪಿಸಿದಾಗ ಅಂಕಲ್‌ನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ವೇಗವಾಗಿ ಹಾಸ್ಪಿಟಲ್‌ ರೂಂನತ್ತ ಕರೆದೊಯ್ದರು.

“ನೀನಿನ್ನು ನಿನ್ನ ಫ್ರೆಂಡ್ಸ್‌ ಜೊತೆ ಹೋಗಿ ಆಟ ಆಡು. ನಾನು ಸ್ವಲ್ಪ ಬ್ಯುಸಿ ಇದ್ದೀನಿ. ಬಿಡುವಾದ ಮೇಲೆ ನಿನಗೆ ಹೇಳಿ ಕಳಿಸುತ್ತೀನಿ. ಅಲ್ಲಿ ನಿನಗೊಂದು ಸಪೈìಸ್‌ ಕಾದಿದೆ’
ನಾನು ಹಾಸ್ಪಿಟಲ್‌ನ ಗ್ಲಾಸ್‌ನೊಳಗೆ ಇಣುಕಿ ನೋಡಿದೆ. ಇಬ್ಬರು ನರ್ಸ್‌ಗಳು ಮೆಡಿಸಿನ್‌ ಬಾಕ್ಸ್‌ ಮತ್ತು ಸಿರೆಂಜ್‌ಗಳನ್ನು ಹಿಡಿದು ಓಡಾಡುತ್ತಿದ್ದರು. ಒಬ್ಟಾಕೆ ಅಂಕಲ್‌ಗೆ ಒದ್ದೆಬಟ್ಟೆ ಹೊದೆಸಿ ಮಸಾಜ್‌ ಮಾಡುತ್ತಿದ್ದಳು. ನಾನವಳ ಬಳಿ ಹೋಗಿ ಕೇಳಿದೆ, “ಅಂಕಲ್‌ಗೆ ಪ್ರಜ್ಞೆ ಬಂತಾ?’ 

“ಇನ್ನೂ ಬಂದಿಲ್ಲ. ಸ್ವಲ್ಪ ಹೊತ್ತಲ್ಲಿ ಬರಬಹುದು ಅನಿಸುತ್ತೆ’ ಅಂದಳು.
ಹಡಗು ಇನ್ನೂ ಅಲೆಗಳ ಏರಿಳಿತಕ್ಕೆ ಮೇಲೆ ಕೆಳಗೆ ತೊಯ್ದಾಡುತ್ತಿತ್ತು. ಈ ಸ್ಥಿತಿಯಲ್ಲಿ ಯಾವ ಆಟವನ್ನೂ ಆಡೋದು ಸಾಧ್ಯ ಇರಲಿಲ್ಲ. ಪಕ್ಕದಲ್ಲೇ ಇದ್ದ ಚೇರ್‌ನಲ್ಲಿ ಕೂತು ಕತೆ ಪುಸ್ತಕ ತೆಗೆದು ಓದತೊಡಗಿದೆ. ಓದುತ್ತ ಓದುತ್ತಾ ತೂಕಡಿಕೆ ಶುರುವಾಯ್ತು. ಯಾವಾಗ ನಿದ್ದೆಹೋದೆನೋ ಗೊತ್ತಾಗಲಿಲ್ಲ. 

” ಏಳು ಮಗೂ, ಅಜಿತ ಅಂದರೆ ನೀನೇ ಅಲ್ವಾ? ಕ್ಯಾಪ್ಟನ್‌ ನಿನ್ನನ್ನು ಅವರ ಕ್ಯಾಬಿನ್‌ಗೆ ಕರೆ ತರಲು ಹೇಳಿದ್ದಾರೆ’ ಕಣ್ತೆರದು ನೋಡಿದೆ, ಹಡಗಿನ ಆಫೀಸರ್‌ ಒಬ್ಬರು  ನನ್ನೆದುರು ನಿಂತಿದ್ದರು. ಒಂದು ಕ್ಷಣ ಅಯೋಮಯವೆನಿಸತೊಡಗಿತು. ಆಮೇಲೆ ಹಿಂದೆ ನಡೆದ ಘಟನೆಗಳನ್ನೆಲ್ಲ ನೆನೆಸಿಕೊಂಡೆ. ಕ್ಯಾಪ್ಟನ್‌ ಬಿಡುವಾದಾಗ ಕರೆಸಿಕೊಳ್ಳುತ್ತೇನೆ ಎಂದಿದ್ದು ನೆನಪಾಯ್ತು. ನಾನು ಗಡಿಬಿಡಿಯಲ್ಲಿ ಆ ಆಫೀಸರ್‌ನೆ°à ಫಾಲೋ ಮಾಡಿದೆ. ಅವರು ಒಂದು ಕ್ಯಾಬಿನ್‌ ಬಳಿ ಕರೆದೊಯ್ದು, “ಹೂಂ, ಹೋಗು ಒಳಗೆ’ ಅಂದರು.

ಸಣ್ಣಗೆ ನಾಕ್‌ ಮಾಡಿ ಒಳಹೋದೆ. ಕ್ಯಾಬಿನ್‌ ಮಧ್ಯೆ ಕ್ಯಾಪ್ಟನ್‌ ಕೂತಿದ್ದರು. ನನ್ನನ್ನು ಕಂಡಾಗ ಹತ್ತಿರ ಬಂದು ಗಟ್ಟಿಯಾಗಿ ತಬ್ಬಿಕೊಂಡು ಎತ್ತಿಕೊಂಡರು, ಅವರ ಮುಖದಲ್ಲಿ ಮಂದಹಾಸವಿತ್ತು. 
” ಈ ಪ್ರಯಾಣದ ಬಗ್ಗೆ ನಿನ್ನ ಸ್ನೇಹಿತರಲ್ಲಿ ಹೇಳ್ಳೋದು ಬಹಳ ಇದೆ ಅಲ್ವಾ? ಈಗ ನಿನ್ನ ಕಣ್ಣುಮುಚ್ಚು ಅಂದರು. 
ಕೆಲವು ಸೆಕೆಂಡ್‌ಗಳ ಬಳಿಕ ಕೈಯಲ್ಲೇನೋ ಇಟ್ಟು, “ಈಗ ಕಣಿºಟ್ಟು ನೋಡು’ ಅಂದರು. 
ದೊಡ್ಡ ಬಾಕ್ಸ್‌ನಲ್ಲಿ, ” ಬೆಸ್ಟ್‌ ಕಾಂಪ್ಲಿಮೆಂಟ್ಸ್‌ – ಕ್ಯಾಪ್ಟನ್‌ ಲಿಂಡ್ಸೆà’ ಅಂತಿತ್ತು. ಕಾತರದಿಂದ ಅದನ್ನು ತೆರೆದೆ. ವಾವ್‌, ಅದೊಂದು ಹಡಗಿನ ಪ್ರತಿಕೃತಿ! 

“ಇದು ನನಗಾ?’ ಕಣ್ಣುಗಳನ್ನು ನಂಬಲೇ ಆಗಲಿಲ್ಲ. 
ಕ್ಯಾಪ್ಟನ್‌ನ° ತಬ್ಬಿಕೊಂಡು ಅವರ ಕೆನ್ನೆ ಮುತ್ತುಕೊಟ್ಟೆ. 
ಆಮೇಲೆ ಮನಸ್ಸಲ್ಲೇ ಕಲ್ಪಿಸಿಕೊಳ್ಳುತ್ತಿದ್ದೆ, ಇದನ್ನು ಅಪ್ಪ, ಅಮ್ಮನಿಗೆ, ಗೆಳೆಯರಿಗೆ ತೋರಿಸಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು ಅಂತ.
ಕ್ಷಣ ಕ್ಷಣಕ್ಕೂ ಖುಷಿ ಹೆಚ್ಚುತ್ತಿತ್ತು. ಬೋರ್ಡ್‌ನ ಅತ್ಯಂತ ಖುಷಿಯ ಹುಡುಗ ನಾನಾಗಿದ್ದೆ. 

ಅನು: ಪ್ರಿಯಾ ಕೆರ್ವಾಶೆ

ಟಾಪ್ ನ್ಯೂಸ್

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.