ಯಾವ ಕೀಲಿ, ಯಾವ ಜಾದೂ
Team Udayavani, May 3, 2018, 11:26 AM IST
ಕೀಲಿ ಕೈಯನ್ನು ಯಾವುದಕ್ಕೆ ಬಳಸುತ್ತಾರೆ? ಅಯ್ಯೋ ಅಷ್ಟೂ ಗೊತ್ತಿಲ್ವಾ, ಬೀಗ ತೆರೆಯೋಕೆ ಅಂದಿರಾ? ಈ ಪ್ರಶ್ನೆ ಕೇಳಿದ್ದು ಯಾಕೆ ಅಂದರೆ ಅದೇ ಕೀಲಿ ಕೈಯನ್ನು ಬಳಸಿ ಮಾಯಾಲೋಕದ ಬೀಗವನ್ನು ತೆಗೆಯಬಹುದು. ಕೀಲಿಯಿಂದ ಜಾದೂ ಮಾಡಿ ಮಾಯಾವಿ ಅನ್ನಿಸಿಕೊಳ್ಳಲು ಸ್ವಲ್ಪ ದುಡ್ಡು ಖರ್ಚಾಗುತ್ತದೆ. ಎಷ್ಟು ಗೊತ್ತಾ? ಒಂದು ರೂಪಾಯಿ! ಯಾವ ಕೀಲಿ, ಯಾವ ಜಾದೂ ಅಂತ ತಿಳಿಯಲು ಮುಂದೆ ಓದಿ.
ಬೇಕಾಗುವ ವಸ್ತುಗಳು: ಕೀಲಿ ಕೈ, ನಾಣ್ಯ
ಪ್ರದರ್ಶನ: ಜಾದೂಗಾರನ ಅಂಗೈಯಲ್ಲಿ ಒಂದು ನಾಣ್ಯವಿರುತ್ತದೆ. ಆತ ಮುಷ್ಟಿಯನ್ನು ಒಂದು ಬಾರಿ ಮುಚ್ಚಿ, ಕೈಯನ್ನು ಎರಡು ಬಾರಿ ಆಚೀಚೆ ಆಡಿಸುತ್ತಾನೆ. ನಂತರ ನಿಧಾನಕ್ಕೆ ಮುಷ್ಟಿ ತೆಗೆದಾಗ ಒಳಗೆ ನಾಣ್ಯದ ಬದಲು ಒಂದು ಕೀಲಿ ಕೈ ಇರುತ್ತದೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಾಣ್ಯ ಮತ್ತು ಅದನ್ನು ಹಿಡಿದುಕೊಳ್ಳುವ ರೀತಿಯಲ್ಲಿ. ಇಲ್ಲಿರುವ ಗಮ್ಮತ್ತೇನು ಗೊತ್ತಾ? ನಾಣ್ಯವನ್ನು, ಕೀಲಿ ಕೈಯ ತಲೆಯ ಭಾಗಕ್ಕೆ ಅಯಸ್ಕಾಂತ ಅಥವಾ ಗಮ್‌ನ ಸಹಾಯದಿಂದ ಅಂಟಿಸಬೇಕು. ಎರಡೂ ಬೇರೆ ಬೇರೆಯಾಗಿರದೆ ಒಂದಕ್ಕೊಂದು ಅಂಟಿಕೊಂಡಿರಬೇಕು. ಅದಕ್ಕಾಗಿ ನೀವು ತೆಗೆದುಕೊಳ್ಳುವ ನಾಣ್ಯದ ಅಗಲ ಮತ್ತು ಕೀಲಿ ಕೈಯ ಅಗಲ ಒಂದೇ ಆಗಿರಬೇಕು (25 ಪೈಸೆ, 50 ಪೈಸೆ ಅಥವಾ ಹೊಸ 1 ರೂ. ನಾಣ್ಯಗಳನ್ನು ಬಳಸಬಹುದು) ನಾಣ್ಯವನ್ನು ಪ್ರೇಕ್ಷಕರಿಗೆ ತೋರಿಸುವಾಗ ಒಂದು ಟ್ರಿಕ್ ಉಪಯೋಗಿಸಬೇಕು. ಅದೇನೆಂದರೆ, ಕೀಲಿ ಕೈಗೆ ನಾಣ್ಯವನ್ನು ಅಂಟಿಸಿದ ಮೇಲೆ ಅದನ್ನು ಬಲಗೈ ಮೇಲೆ ಇರಿಸಿ, ಕೀಲಿಯ ಉದ್ದದ ಭಾಗ ಕಾಣಿಸದಂತೆ ಎಡಗೈಯ ತೋರುಬೆರಳಿನಿಂದ ಅದನ್ನು ಮುಚ್ಚಿ (ಚಿತ್ರದಲ್ಲಿ ತೋರಿಸುವಂತೆ) ಆಗ ನಾಣ್ಯ ಮಾತ್ರ ಕಾಣಿಸುತ್ತದೆ. ಮುಷ್ಟಿಯನ್ನು ಮುಚ್ಚಿ, ಕೈಯನ್ನು ಆಚೀಚೆ ಅಲ್ಲಾಡಿಸುತ್ತಾ ನಿಧಾನವಾಗಿ ಮುಷ್ಟಿಯೊಳಗೇ ನಾಣ್ಯದ ಮಗ್ಗಲು ಮಡಚಿ. ಮುಷ್ಟಿ ಬಿಡಿಸಿದಾಗ ನಾಣ್ಯ ಕಾಣಿಸುವುದಿಲ್ಲ. ಬದಲಿಗೆ ಕೀಲಿ ಕೈ ಅಲ್ಲಿರುತ್ತದೆ. ಪ್ರದರ್ಶನಕ್ಕೂ ಮೊದಲು ಹಲವಾರು ಬಾರಿ ಅಭ್ಯಾಸ ಮಾಡಿದರೆ ಈ ಮ್ಯಾಜಿಕ್ ಸುಲಭವಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.